More

    ನಾಪತ್ತೆಯಾಗಿದ್ದ ವಿಮಾನದ ಭಗ್ನಾವಶೇಷ ಸಮುದ್ರದಲ್ಲಿ ಪತ್ತೆ: 28 ಮಂದಿ ಸಾವು

    ಮಾಸ್ಕೊ: ಮಂಗಳವಾರ ನಾಪತ್ತೆಯಾಗಿದ್ದ ವಿಮಾನದ ಭಗ್ನಾವಶೇಷ ರಷ್ಯಾದ ಪೂರ್ವ ಭಾಗದಲ್ಲಿ ಪತ್ತೆಯಾಗಿದ್ದು, ಅದರಲ್ಲಿದ್ದ 28 ಮಂದಿ ಮೃತಪಟ್ಟಿದ್ದಾರೆ.

    ಕಮ್ಟ್ಕಾ ಪ್ರದೇಶದ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​ ಆಗುತ್ತಿದ್ದ ಆಂಟನೋವ್ ಎಎನ್-26 ವಿಮಾನವು ರನ್ ವೇ ಯಿಂದ ಜಾರಿ ಸಮುದ್ರದಲ್ಲಿ ಪತನವಾಯಿತು. ಐದು ಕಿಲೋ ಮೀಟರ್ ದೂರದಲ್ಲಿ ಅವಶೇಷಗಳು ಪತ್ತೆಯಾಗಿವೆ.

    ಇದರಲ್ಲಿದ್ದ 22 ಪ್ರಯಾಣಿಕರು ಮತ್ತು 6 ಸಿಬ್ಬಂದಿಯಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ವಿಮಾನ ಕಮ್ಟ್ಕಾ ಏವಿಯೇಷನ್ ಎಂಟರ್​ಪ್ರೈಸಸ್​ಗೆ ಸೇರಿದ್ದು, 1982ರಿಂದಲೂ ಕಾರ್ಯಾಚರಣೆಯಲ್ಲಿತ್ತು. ನಿನ್ನೆ ಪ್ರಯಾಣ ಆರಂಭಿಸುವ ಮುನ್ನ ತಾಂತ್ರಿಕವಾಗಿ ಈ ವಿಮಾನ ಸುಸ್ಥಿತಿಯಲ್ಲಿತ್ತು ಎಂದು ಕಂಪನಿ ತಿಳಿಸಿದ್ದಾರೆ.

    ಆಂಟಿಗೆ ನವವಿವಾಹಿತ ಯುವಕನ ಮೇಲೆ ಮೋಹ! ಮುಂದಾಗಿದ್ದು ಘನಘೋರ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts