More

    ಮೈಸೂರು ಘಟನೆ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಗ್ಯಾಂಗ್​ ರೇಪ್​! ಪುಟ್ಟ ಬಾಲಕಿಯನ್ನೂ ಬಿಡಲಿಲ್ಲ ಕಾಮುಕರು

    ಬೆಳಗಾವಿ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ಮೊನ್ನೆ ನಡೆದಿರುವ ಗ್ಯಾಂಗ್ ರೇಪ್ ಪ್ರಕರಣದ ಸುದ್ದಿ ಇನ್ನೂ ತಣ್ಣಗಾಗಿಲ್ಲ. 2 ದಿನ ಕಳೆದರೂ ಇನ್ನೂ ಆರೋಪಿಗಳು ಪತ್ತೆಯಾಗಿಲ್ಲ. ಈ ನಡುವೆ ಮತ್ತೊಂದು ಸಾಮೂಹಿಕ ಅತ್ಯಾಚಾರ ಕೇಸ್​ ದಾಖಲಾಗಿದ್ದು, ರಾಜ್ಯದಲ್ಲಿ ಕಾಮುಕರ ಅಟ್ಟಹಾಸ ಮುಂದುವರಿದಿದೆ.

    ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನಲ್ಲಿ 16 ವರ್ಷದ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದ ಐವರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಘಟಪ್ರಭಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಐವರ ಪೈಕಿ ನಾಲ್ವರನ್ನು ಬಂಧಿಸಿದ್ದಾರೆ. ಮತ್ತೊಬ್ಬನ ಪತ್ತೆಗೆ ಬಲೆ ಬೀಸಿದ್ದಾರೆ. ಅತ್ತ ಮೈಸೂರು ಪ್ರಕರಣ ಸಂಬಂಧ ಯಾವೊಬ್ಬ ಆರೋಪಿಯೂ ಪೊಲೀಸರಿಗೆ ಸಿಕ್ಕಿಲ್ಲ.

    ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದ ಬೆನ್ನಲ್ಲೇ ಮತ್ತೊಂದು ಹೀನ ಕೃತ್ಯ ರಾಜ್ಯದಲ್ಲಿ ಬಯಲಾಗಿದ್ದು, ಕಾನೂನು ಸುವ್ಯವಸ್ಥೆ ಎತ್ತ ಸಾಗಿದೆ? ಎಂದು ಜನತೆ ಆತಂಕಗೊಂಡಿದ್ದಾರೆ. ಕಾಮುಕರನ್ನು ಕೂಡಲೇ ಬಂಧಿಸಿ ನಡುರಸ್ತೆಯಲ್ಲೇ ಗುಂಡಿಕ್ಕಿ ಕೊಲ್ಲಬೇಕು ಎಂಬ ಕೂಗು ವ್ಯಾಪಕವಾಗಿ ಕೇಳಿ ಬಂದಿದೆ.

    ನನ್ನನ್ನು ತಳ್ಳಿ ಗೆಳತಿಯನ್ನು ಪೊದೆಯತ್ತ ಎಳೆದೊಯ್ದರು… ​ ಸಂತ್ರಸ್ತೆಯ ಸ್ನೇಹಿತನಿಂದ ಹೊರಬಿತ್ತು ಸ್ಫೋಟಕ ಮಾಹಿತಿ

    ಪ್ರೇಯಸಿಯ ಕೊಂದು ಪ್ರಾಣಬಿಟ್ಟ ಪ್ರಿಯಕರ! ಸಾವಿಗೂ ಮುನ್ನ ಡೆತ್​ನೋಟ್​ನಲ್ಲಿ ಮನದ ನೋವು ಬಿಚ್ಚಿಟ್ಟ ಯುವಕ

    ಅಪಘಾತದಲ್ಲಿ ಪತ್ನಿ ಸತ್ತಳು ಎಂದು ಕಣ್ಣೀರಿಟ್ಟ ಗಂಡ! ಸ್ಥಳ ಪರಿಶೀಲನೆ ವೇಳೆ ಸಿಕ್ಕ ಸುಳಿವು ಬೆನ್ನಟ್ಟಿದ ಪೊಲೀಸರಿಗೆ ಕಾದಿತ್ತು ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts