More

    ಮಿಂಟೋ ಕಣ್ಣಿನ ಆಸ್ಪತ್ರೆಗೆ 125 ವರ್ಷಗಳ ಸಂಭ್ರಮ

    ಬೆಂಗಳೂರು: ನಾಡಿನ ಜನರಿಗೆ ಗುಣಮಟ್ಟದ ನೇತ್ರ ಚಿಕಿತ್ಸೆ ನೀಡುವ ಮೂಲಕ ಅಂಧತ್ವ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಿಂಟೋ ಕಣ್ಣಿನ ಆಸ್ಪತ್ರೆಗೆ ಈಗ 125ನೇ ವರ್ಷದ ಸಂಭ್ರಮ.

    ಆಸ್ಪತ್ರೆ ಹಿನ್ನೆಲೆ: ಬೆಂಗಳೂರಿನ ಸಂತೆಪೇಟೆ ರಸ್ತೆಯಲ್ಲಿ 1896ರಲ್ಲಿ ಸಣ್ಣ ಕ್ಲಿನಿಕ್​ ಆಗಿ ಪ್ರಾರಂಭವಾಗಿದ್ದ ಕಣ್ಣಿನ ಆಸ್ಪತ್ರೆಗೆ 1913ರಲ್ಲಿ ಕಟ್ಟಡವನ್ನು ನಿರ್ಮಿಸಲಾಯಿತು. ಅದೇ ಈಗಿರುವ ಮಿಂಟೋ ಕಣ್ಣಿನ ಆಸ್ಪತ್ರೆ. 1982ರಲ್ಲಿ ಮಿಂಟೋ ನೇತ್ರ ಚಿಕಿತ್ಸಾ ಪ್ರಾದೇಶಿಕ ಸಂಸ್ಥೆ ಎಂಬ ಹೆಸರು ಪಡೆದುಕೊಂಡಿತು. ಆಗಿನ ವೈಸರಾಯ್​ ಆಗಿದ್ದ ಮಿಂಟೋ ನೆನಪಿನಾರ್ಥ ಆಸ್ಪತ್ರೆಗೆ ಅವರ ಹೆಸರಿಡಲಾಯಿತು.

    ವರ್ಷಕ್ಕೆ 250-300 ನೇತ್ರ ಕಸಿ: ಲಕ್ಷಾಂತರ ಜನರಿಗೆ ದೃಷ್ಟಿಭಾಗ್ಯ ಕರುಣಿಸಿರುವ ಮಿಂಟೋ ಆಸ್ಪತ್ರೆಯಲ್ಲಿ ನಿತ್ಯ 800ಕ್ಕೂ ಹೆಚ್ಚು ಮಂದಿ ಹೊರರೋಗಿಗಳಾಗಿ ಹಾಗೂ 50ಕ್ಕೂ ಹೆಚ್ಚು ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯು ಅತ್ಯಾಧುನಿಕ ಉಪಕರಣಗಳೊಂದಿಗೆ 300 ಸುಸಜ್ಜಿತ ಹಾಸಿಗೆಗಳನ್ನು ಒಳಗೊಂಡಿದೆ. 4 ಶಸ್ತ್ರಚಿಕಿತ್ಸಾ ಕೊಠಡಿಗಳಿವೆ. ನಿತ್ಯ 40-50 ಶಸ್ತ್ರಚಿಕಿತ್ಸೆ ನಡೆಯುತ್ತದೆ. ವರ್ಷಕ್ಕೆ ಸರಾಸರಿ ಲಕ್ಷ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 250-300 ನೇತ್ರ ಕಸಿ ಮಾಡಲಾಗುತ್ತಿದೆ. ಇದಕ್ಕಾಗಿ ಆಸ್ಪತ್ರೆಯಲ್ಲಿ “ಐ ಬ್ಯಾಂಕ್​” ಸಹ ಇದೆ. ಇದಲ್ಲದೆ ಸಂಸ್ಥೆ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಪ್ರದೇಶ, ಕೊಳಗೇರಿ ಸೇರಿದಂತೆ ವಿವಿಧ ಭಾಗಗಳಲ್ಲಿ ತೆರಳಿ ಜನರ ನೇತ್ರ ತಪಾಸಣೆ ನಡಸಿ ಸಮಸ್ಯೆ ಇರುವವರನ್ನು ಆಸ್ಪತ್ರೆಗೆ ಕರೆ ತಂದು ಉಚಿತ ಚಿಕಿತ್ಸೆ ನೀಡುತ್ತಾ ಬಂದಿದೆ.

    ಮಿಂಟೋ ಕಣ್ಣಿನ ಆಸ್ಪತ್ರೆಗೆ 125 ವರ್ಷಗಳ ಸಂಭ್ರಮ

    ಮಿಂಟೋ ಕಣ್ಣಿನ ಆಸ್ಪತ್ರೆಯು 125 ವರ್ಷಗಳ ಸಂಭ್ರಮದಲ್ಲಿದ್ದು, ಇದರ ನೆನಪಿನಾರ್ಥ ಮಿಂಟೋ ಆಸ್ಪತ್ರೆ ಆವರಣದಲ್ಲಿ ಮಂಗಳವಾರ (ನ.9) ಬೆಳಗ್ಗೆ 125 ಸಸಿಗಳನ್ನು ನೆಡುವ ಮೂಲಕ ಕೋವಿಡ್​ ಹಿನ್ನೆಲೆಯಲ್ಲಿ ಸರಳವಾಗಿ ಸಂಭ್ರಮಾಚರಣೆ ಮಾಡಲಾಯಿತು. ಮಿಂಟೋ ಆಸ್ಪತ್ರೆಯ ಕಟ್ಟಡವನ್ನು ವಿದ್ಯುತ್​ ದೀಪಗಳಿಂದ ಅಲಂಕರಿಸಲಾಗಿದೆ.

    ಪುನೀತ್​ ಆತ್ಮದ ಜತೆ ಮಾತಾಡಿದ್ದಾಗಿ ವಿಡಿಯೋ ಹಂಚಿಕೊಂಡ ಚಾರ್ಲಿ: ಆ ದೃಶ್ಯ ನೋಡುತ್ತಲೇ ಅಪ್ಪು ಅಭಿಮಾನಿಗಳ ಕಣ್ಣು ಕೆಂಪಾಯ್ತು…

    ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಿದ್ದರೆ ಪುನೀತ್​ ಸಾಯುತ್ತಿರಲಿಲ್ಲ… ಸ್ಲೋ ಪಾಯಿಸನ್​ ಕುರಿತು ಜನರಿಗೆ ಸತ್ಯ ತಿಳಿಸಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts