More

    ಆಶಾ ಕಾರ್ಯಕರ್ತೆಯರಿಗೆ ಅಪ್ಪ ಸಹಾಯಧನ

    ಕಲಬುರಗಿ: ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶ್ರೀ ಡಾ. ಶರಣಬಸವಪ್ಪ ಅಪ್ಪ ಅವರು ಆಶಾ ಕಾರ್ಯಕರ್ತೆಯರಿಗಾಗಿ 2 ಲಕ್ಷ ರೂ.ಸಹಾಯ ಧನದ ಚೆಕ್ನ್ನು ಜಿಲ್ಲಾ ಸಹಕಾರಿ ಸಂಘದ ಉಪ ನಿಭಂದಕ ಸಿ.ಎಸ್ ನಿಂಬಾಳ ಮತ್ತು ಸಹಕಾರಿ ಇಲಾಖೆ ಅಧಿಕಾರಿಗಳಿಗೆ ಶುಕ್ರವಾರ ಹಸ್ತಾಂತರಿಸಿದರು.
    ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ಪರ್ಸನ್ ಮಾತೋಶ್ರಿ ದಾಕ್ಷಾಯಿಣಿ ಅವ್ವ ಮತ್ತು ಡಾ. ಶರಣಬಸವಪ್ಪ ಅಪ್ಪ ಜತೆಗೂಡಿ 2 ಲಕ್ಷ ರೂಪಾಯಿ ಚೆಕ್ನ್ ನೀಡಿದರು.
    ನಂತರ ಆಶೀರ್ವಚನ ನೀಡಿದ ಡಾ. ಅಪ್ಪ ಅವರು, ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರ ಕೊಡುಗೆ ಅಪಾರ. ಇವರ ಸತತ ಪ್ರಯತ್ನ ಗುರುತಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಲಾ 3.000 ರೂಪಾಯಿ ನೀಡುತ್ತಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ನೆರವು ಮತ್ತು ಅವರ ಕರ್ತವ್ಯಕ್ಕೆ ಬೆಂಬಲಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಕೈಜೋಡಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
    ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ಪರ್ಸನ್ ಮಾತೋ ಶ್ರೀ ದಾಕ್ಷಾಯಿಣಿ ಅಪ್ಪ, ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ.ಲಕ್ಷ್ಮಿ ಮಾಕಾ, ಎಂಸಿಎ ವಿಭಾಗದ ಮುಖ್ಯಸ್ಥ ಪ್ರೊ.ಕಿರಣ ಮಾಕಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts