ಸಿಡ್ನಿ: ಭಾರತ-ಆಸೀಸ್ 2ನೇ ಏಕದಿನ ಪಂದ್ಯದ ವೇಳೆ ಪ್ರೀತಿಗೆ ಗೆಲುವು ಸಿಕ್ಕಿದೆ! ಇತ್ತ ಮೈದಾನದಲ್ಲಿ ವಿರಾಟ್ ಕೊಹ್ಲಿ-ಶ್ರೇಯಸ್ ಅಯ್ಯರ್ ಜೋಡಿ ಬ್ಯಾಟಿಂಗ್ ಮಾಡುತ್ತಿದ್ದರೆ, ಅತ್ತ ಪ್ರೇಕ್ಷಕರ ಗ್ಯಾಲರಿಯಲ್ಲಿ ಭಾರತೀಯ ಯುವಕನೊಬ್ಬ ಆಸೀಸ್ ಯುವತಿಗೆ ಪ್ರೇಮ ನಿವೇದನೆ ಮಾಡಿದನು. ಕೊಹ್ಲಿ-ಶ್ರೇಯಸ್ ಆಟ ಭಾರತಕ್ಕೆ ಗೆಲುವು ತಂದುಕೊಡದಿದ್ದರೂ, ಟೀಮ್ ಇಂಡಿಯಾ ಅಭಿಮಾನಿಯ ಪ್ರೀತಿಗೆ ಗೆಲುವು ಒಲಿಯಿತು!
ಭಾರತೀಯ ಯುವಕನ ಪ್ರೇಮ ನಿವೇದನೆಯನ್ನು ಯುವತಿ ಒಪ್ಪಿಕೊಂಡು ಉಂಗುರ ಸ್ವೀಕರಿಸಿದ ಬೆನ್ನಲ್ಲೇ ಅಪ್ಪಿಕೊಂಡು ಚುಂಬಿಸಿದನು. ಆ ಯುವತಿ ಆಸ್ಟ್ರೇಲಿಯಾದ ಹಳದಿ ಮತ್ತು ಹುಡುಗ ಟೀಮ್ ಇಂಡಿಯಾದ ನೀಲಿ ಜೆರ್ಸಿಯಲ್ಲಿದ್ದುದು ವಿಶೇಷ. ಈ ಘಟನೆಗೆ ಸಹ-ಪ್ರೇಕ್ಷಕರು ಸಾಕ್ಷಿಯಾಗಿದ್ದರು ಮತ್ತು ಟಿವಿಯಲ್ಲಿ ನೇರಪ್ರಸಾರವನ್ನೂ ಕಂಡಿತು. ಇದಕ್ಕೆ ಕಾಮೆಂಟರಿ ಬಾಕ್ಸ್ನಲ್ಲಿದ್ದ ಶೇನ್ ವಾರ್ನ್ ಮತ್ತು ಆಡಂ ಗಿಲ್ಕ್ರಿಸ್ಟ್ ವೀಕ್ಷಕವಿವರಣೆಯನ್ನೂ ನೀಡಿದರು.
ಆಕೆ ಪ್ರೀತಿಯನ್ನು ಒಪ್ಪಿಕೊಂಡ ಬೆನ್ನಲ್ಲೇ ಮೈದಾನದ ದೊಡ್ಡ ಪರದೆಯಲ್ಲಿ ‘ಶೀ ಸೆಡ್ ಎಸ್’ ಎಂದು ದೊಡ್ಡದಾಗಿ ಮೂಡಿಬಂತು. ಫೀಲ್ಡಿಂಗ್ ಮಾಡುತ್ತಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿದೆ.
ಕೆಲವರು ಈ ಘಟನೆ ಬಾಲಿವುಡ್ನ ‘ಮುಜ್ಸೆ ಶಾದಿ ಕರೋಗಿ’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಕ್ರಿಕೆಟ್ ಪಂದ್ಯವೊಂದರ ವೇಳೆ ಪ್ರಿಯಾಂಕಾ ಚೋಪ್ರಾಗೆ ಪ್ರೇಮ ನಿವೇದನೆ ಮಾಡಿದ ಕ್ಲೈಮ್ಯಾಕ್ಸ್ ದೃಶ್ಯವನ್ನು ನೆನಪಿಸಿಕೊಂಡಿದ್ದಾರೆ. ಇನ್ನು ಕೆಲವರು ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡರೇನಂತೆ, ಭಾರತೀಯರಿಗೆ ನೈತಿಕ ಗೆಲುವು ಲಭಿಸಿದೆ ಎಂದು ಸಂಭ್ರಮಿಸಿದ್ದಾರೆ.
SHE SAID YES ‼️ 💍
📺 Watch Game 2 of the #AUSvIND ODI Series Ch 501 or 💻 Stream on Kayo: https://t.co/bb9h0qf37c
📝 Live Blog: https://t.co/cF1qvdQReT
📱Match Centre: https://t.co/IKhEAApS6r pic.twitter.com/T4yjr9YDd0— Fox Cricket (@FoxCricket) November 29, 2020
After ruining Instagram, Twitter.. We singles have only have Cricket to feel good. They are doing this here too. I condemn this.. pic.twitter.com/i9bXE3iOmh
— Silly Point (@FarziCricketer) November 29, 2020
#INDvsAUS
India bhale Aus k samne jite na jite,
Bhai o hum logo ko moral victory mil chuki hai… pic.twitter.com/g7TFqE6spZ— ⚡ (@_brgv) November 29, 2020
Marriage proposal in SCG and she said "Yes". pic.twitter.com/McTIDf83CC
— Johns. (@CricCrazyJohns) November 29, 2020
If anyone wants ideas….#justsaying pic.twitter.com/gDQZmkMvdp
— #Number7Forever♥️ (@shonalit7) November 29, 2020
All these proposals are okay but Salman Khan proposing Priyanka Chopra during a cricket match in mujhse shaadi karogi still remains at top#AUSvsIND
— Rishabh Srivastava (@AskRishabh) November 29, 2020