ಲಂಡನ್: ಸಂಗಾತಿ ಅರಸಿ ಪಾರ್ಕಿನಲ್ಲಿ ಅಲೆದಾಡುತ್ತಿದ್ದ ಕಾಡು ಜಿಂಕೆಯ ಬಳಿ ಸೆಲ್ಫಿ ತೆಗೆಯಲು ಹೋದ ಯುವತಿಯೊಬ್ಬಳ ಮೇಲೆ ಜಿಂಕೆ ದಾಳಿ ಮಾಡಿರುವ ಘಟನೆ ಸೌಥ್ವೆಸ್ಟ್ ಲಂಡನ್ನ ರಿಚ್ಮಂಡ್ ಜಿಂಕೆ ಪಾರ್ಕಿನಲ್ಲಿ ನಡೆದಿದೆ.
ಆಕಾಶ ನೀಲಿ ಬಣ್ಣದ ಉಡುಪು ಧರಿಸಿ, ತಲೆಯಲ್ಲಿ ಹೂ ಮುಡಿದ ಯುವತಿಯೊಬ್ಬಳು ತನ್ನ ಇನ್ಸ್ಟಾಗ್ರಾಂ ಫೋಟೋಗಾಗಿ ಅಕ್ಟೋಬರ್ 11ರಂದು ಪಾರ್ಕಿನಲ್ಲಿ ಜಿಂಕೆಯ ಮುಂದೆ ನಿಂತು ಸೆಲ್ಫಿ ತೆಗೆಯಲು ಮುಂದಾಗಿದ್ದಳು. ಮೊದಲೇ ಸಂತಾನೋತ್ಪತಿ ಕಾಲವಾಗಿದ್ದರಿಂದ ತನ್ನ ಸಂಗಾತಿಗಾಗಿ ಅಲೆದಾಡುತ್ತಾ ಒಂಟಿ ಜಿಂಕೆ ತುಂಬಾ ದಣಿದಿತ್ತು. ಯುವತಿ ಸೆಲ್ಫಿಗಾಗಿ ಯತ್ನಿಸುತ್ತಿದ್ದಂತೆ ಆಕೆಯನ್ನು ನೋಡಿದ ಜಿಂಕೆ ಕೋಪದಿಂದಲೇ ಮುಂದಿನ ತನ್ನೆರಡು ಕಾಲುಗಳನ್ನು ಮೇಲೆತ್ತಿ ಯುವತಿಯ ಹಿಂಬದಿಗೆ ಗುದ್ದಿ ಮುಂದಕ್ಕೆ ಬೀಳಿಸಿದೆ.
ಇದನ್ನೂ ಓದಿ: ದಿಢೀರ್ ಮನೆಗೆ ನುಗ್ಗಿ ವಿದ್ಯಾರ್ಥಿನಿಯ ಹತ್ಯೆ: ಆ ಒಂದು ಫೋಟೋದಿಂದ ಪ್ರಕರಣಕ್ಕೆ ಹೊಸ ತಿರುವು!
ಸದ್ಯ ಹತ್ತಿರದಲ್ಲೇ ರಾಯಲ್ ಪಾರ್ಕಿನ ಪೊಲೀಸರು ಇದ್ದುದ್ದರಿಂದ ಅನಾಹುತವನ್ನು ತಪ್ಪಿಸಿದ್ದಾರೆ. ಆದರೂ ಯುವತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದರ ಬೆನ್ನಲ್ಲೇ ಎಚ್ಚರಿಕೆ ನೀಡಿರುವ ಪೊಲೀಸರು ಡಿಸ್ನಿ ಫೌನ್ನಲ್ಲಿ ಬರುವ ಬಿಂಬಿ ಪಾತ್ರದಂತೆ ತುಂಬಾ ಮುದ್ದು ಪ್ರಾಣಿ ಅಂದುಕೊಂಡಿದ್ದೀರಾ? ಕೋಪ ಬಂದರೆ ಗಾಯಗೊಳಿಸಲಿದೆ. ಹೀಗಾಗಿ ಸುಮಾರು 50 ಮೀಟರ್ ಅಂತರವನ್ನು ಕಾಯ್ದುಕೊಳ್ಳುವಂತೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಸಿದ್ದಾರೆ.
ಯಾರಾದರೂ ಸರಿ ಮೊದಲು ಪ್ರಕೃತಿಗೆ ಗೌರವ ಕೊಡಬೇಕು ಎಂದು ಸಾಕಷ್ಟು ಮಂದಿ ಯುವತಿಯ ವಿರುದ್ಧ ಕಿಡಿಕಾರಿದ್ದಾರೆ. ಇನ್ನು ಕೆಲವರು ಸಂತಾನೋತ್ಪತಿ ಕಾಲದಲ್ಲಿ ಜಿಂಕೆ ಪಾರ್ಕ್ನ್ನು ತೆರೆಯಲೇಬಾರದು ಎಂದು ಯುವತಿಯ ಬೆನ್ನಿಗೆ ನಿಂತಿದ್ದಾರೆ.
ಸಂತಾನೋತ್ಪತಿ ಕಾಲದಲ್ಲಿ ಸಾವಿರಾರು ಜಿಂಕೆಗಳು ಪಾರ್ಕಿನ ಸುತ್ತ ಸುತ್ತುತ್ತಿರುತ್ತವಂತೆ. ಈ ವೇಳೆ ಒಂದು ಹೆಣ್ಣು ಜಿಂಕೆಗಾಗಿ ಎರಡು ಜಿಂಕೆಗಳು ಎದುರಾದರೆ, ಎರಡು ಸಹ ಕೊಂಬುಗಳಲ್ಲಿ ಲಾಕ್ ಮಾಡುವ ಮೂಲಕ ಸಂಗಾತಿಗಾಗಿ ಯುದ್ಧಕ್ಕೆ ಮುಂದಾಗುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)
ಹಸುಗಳೊಂದಿಗೆ ಈತ ಮಾಡುತ್ತಿದ್ದುದನ್ನು ನೋಡಿ ಬೆಚ್ಚಿಬಿದ್ದ ಪೊಲೀಸರು- ಸಿಸಿಟಿವಿಯಲ್ಲಿ ಸೆರೆ; ಬಂಧನ
ಪ್ರವಾಹದಲ್ಲಿ ಮರಕ್ಕೆ ಸಿಲುಕಿದ ಕಾರು: ಕೊನೇ ಕರೆ ಮಾಡಿ ಸ್ನೇಹಿತನ ಬಳಿ ಕೇಳಿದ್ದು ಮನಕಲಕುವಂತಿದೆ!