ಮುಂಬೈ: ಜೂನ್ನಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟಾಗಿನಿಂದ ಅವರ ಪ್ರೇಯಸಿ ಎನ್ನಲಾದ ನಟಿ ರಿಯಾ ಚಕ್ರವರ್ತಿ ಹೆಸರು ತುಂಬಾ ಚಾಲ್ತಿಯಲ್ಲಿದೆ. ಸುಶಾಂತ್ ಸಾವಿಗೆ ರಿಯಾ ಕಾರಣ ಆಕೆಯೇ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ಸುಶಾಂತ್ ಕುಟುಂಬ ಆರೋಪಿಸಿದ್ದು, ಪ್ರಕರಣ ದಾಖಲಾಗಿ ತನಿಖೆಯು ನಡೆಯುತ್ತಿದೆ.
ಸಾಕಷ್ಟು ಆರೋಪ-ಪ್ರತ್ಯಾರೋಪಗಳ ನಡುವೆ ಜೂನ್ 14ರಂದು ಸುಶಾಂತ್ ಸಾಯುವ ಒಂದು ವಾರಕ್ಕೂ ಮುಂಚೆ ಅಂದರೆ ಜೂನ್ 8ರಂದು ರಿಯಾ ಮತ್ತು ನಿರ್ದೇಶಕ ಮಹೇಶ್ ಭಟ್ ನಡುವಿನ ವಾಟ್ಸ್ಆ್ಯಪ್ ಸಂದೇಶವುಳ್ಳ ಸ್ಕ್ರೀನ್ ಶಾಟ್ ಇದೀಗ ಜಾಲತಾಣದಲ್ಲಿ ವೈರಲ್ ಆಗಿದೆ. ಜೂನ್ 8ರಂದೇ ತನ್ನ ಬಾಯ್ಫ್ರೆಂಡ್ ಸುಶಾಂತ್ನಿಂದ ದೂರವಾಗುತ್ತಿರುವ ಬಗ್ಗೆ ಮಹೇಶ್ ಭಟ್ ಅವರಿಗೆ ರಿಯಾ ಮಾಹಿತಿ ನೀಡಿರುವುದು ವೈರಲ್ ವಾಟ್ಸ್ಆ್ಯಪ್ ಚಾಟ್ನಲ್ಲಿದೆ.
ಇದನ್ನೂ ಓದಿ: ತಂದೆಯ ಲ್ಯಾಪ್ಟಾಪ್ನಲ್ಲಿ ತನ್ನ ಬೆತ್ತಲೆ ಫೋಟೋಗಳನ್ನು ನೋಡಿ ಬೆಚ್ಚಿ ಬಿದ್ದಳು ಮಗಳು!
ಸುಶಾಂತ್ ಜತೆ ಸಂಬಂಧ ಬೆಳೆಸಿರುವುದು ರಿಯಾ ತಂದೆಗೂ ಇಷ್ಟವಿಲ್ಲದಿರುವುದು ಹಾಗೂ ಸುಶಾಂತ್ನಿಂದ ದೂರವಾಗಿದ್ದಕ್ಕೆ ಮಹೇಶ್ ಭಟ್ ಸಲಹೆ ನೀಡಿರುವುದು ಇಬ್ಬರ ನಡುವಿನ ಸಂಭಾಷಣೆಯಲ್ಲಿ ಸಿಕ್ಕ ಸುಳಿವು ಆಗಿದೆ. ರಿಯಾಗೆ ಪದೇಪದೆ ಭಟ್ ಅವರು ಸಲಹೆ ನೀಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ತನ್ನ ನಟನೆಯ ಹಾಗೂ ಮಹೇಶ್ ಭಟ್ ನಿರ್ಮಾಣದ ಜಿಲೇಬಿ ಚಿತ್ರದ ಆಯೇಷಾ ಪಾತ್ರದ ಹೆಸರಿನಲ್ಲೇ ಭಟ್ರೊಂದಿಗೆ ರಿಯಾ ಸಂಭಾಷಣೆ ನಡೆಸಿದ್ದಾಳೆ. ಇಬ್ಬರ ನಡುವಿನ ಸಂಭಾಷಣೆಯ ಸಾರಾಂಶ ಈ ಕೆಳಕಂಡಂತಿದೆ.
ಭಾರವಾದ ಹೃದಯದೊಂದಿಗೆ ಮತ್ತು ನೆಮ್ಮದಿಯ ಭಾವದೊಂದಿಗೆ ಆಯೇಷಾ ಒಂದು ಹೆಜ್ಜೆ ಮುಂದೆ ಇಟ್ಟಾಯಿತು ಸರ್ (ಮಹೇಶ್ ಭಟ್) ಎಂದು ಚಾಟ್ ಮಾಡಿದ್ದಾಳೆ. ಮುಂದಿನ ಮೆಸೇಜ್ನಲ್ಲಿ ನಮ್ಮ ಕೊನೆಯ ಕರೆ ವೇಕಪ್ ಕಾಲ್ ಆಗಿತ್ತು ಎಂದಿದ್ದಾಳೆ. ಎರಡು ಪ್ರತ್ಯೇಕ ಮೆಸೇಜ್ಗೆ ಭಟ್ ಪ್ರತಿಕ್ರಿಯೆ ನೀಡಿದ್ದು, ಮತ್ತೆ ಹಿಂದಿರುಗಿ ನೋಡಬೇಡ. ಅನಿವಾರ್ಯತೆ ಏನಿದೆಯೋ ಅದನ್ನು ಸಾಧ್ಯವಾಗಿಸಿಕೋ ಮತ್ತು ನಿಮ್ಮ ತಂದೆಗೆ ನನ್ನ ಪ್ರೀತಿ ಇದ್ದೇ ಇರುತ್ತದೆ. ನಿಮ್ಮ ತಂದೆ ಸಂತಸದ ವ್ಯಕ್ತಿಯಾಗಲಿದ್ದಾರೆ ಎಂದಿದ್ದಾರೆ.
ಭಟ್ ಉತ್ತರಕ್ಕೆ ಮರು ಪ್ರತಿಕ್ರಿಯಿಸಿರುವ ರಿಯಾ, ಸ್ವಲ್ಪ ಧೈರ್ಯವನ್ನು ಕಂಡುಕೊಂಡಿದ್ದೇನೆ ಮತ್ತು ಆ ದಿನ ನನ್ನ ತಂದೆ ಬಗ್ಗೆ ಫೋನಿನಲ್ಲಿ ನೀವು ಏನು ಹೇಳಿದಿರಿ ಅದು ನನ್ನನ್ನು ತಂದೆಯೆಡೆಗೆ ಇನ್ನಷ್ಟು ಬಲಶಾಲಿಯನ್ನಾಗಿ ಮಾಡಿದೆ. ನಮ್ಮ ತಂದೆ ನಿಮಗೆ ಪ್ರೀತಿಯನ್ನು ಕಳುಹಿಸಿದ್ದಾರೆ ಮತ್ತು ನೀವು ಯಾವಾಗಲೂ ನಮಗೆ ತುಂಬಾ ವಿಶೇಷವಾಗಿರುವುದಕ್ಕೆ ಧನ್ಯವಾದಗಳು ಎಂದು ರಿಯಾ ಹೇಳಿದ್ದಾರೆ.
ಇದನ್ನೂ ಓದಿ: ಚಿತ್ರಮಂದಿರದಲ್ಲಿ ಸೆಕ್ಸ್ ಮಾಡಿ ಸಿಕ್ಕಿಬಿದ್ದ ಜೋಡಿ: ವೈರಲ್ ವಿಡಿಯೋಗೆ ನೆಟ್ಟಿಗರ ತರಾಟೆ!
ಇದಕ್ಕೆ ಭಟ್ ಮರು ಉತ್ತರಿಸಿ, ನೀನು ನನ್ನ ಮಗು. ನನಗೆ ಬೆಳಕು ಬಂದಂತೆ ಭಾಸವಾಗುತ್ತಿದೆ ಎಂದಿದ್ದಾರೆ. ರಿಯಾ ಸಹ ಪ್ರತಿಕ್ರಿಯಿಸಿ ಆಹಾ…ಹೇಳಲು ಪದಗಳೇ ಇಲ್ಲ. ನಿಮಗಾಗಿ ನನ್ನಲ್ಲಿ ಉತ್ತಮ ಭಾವನೆಗಳು ವ್ಯಕ್ತವಾಗುತ್ತಿವೆ ಎಂದಿದ್ದಾರೆ. ಇದಕ್ಕೆ ಭಟ್, ಧರ್ಯಶಾಲಿಯಾಗಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.
ರಿಯಾ ಮುಂದುವರಿದು ಎರಡು ಪ್ರತ್ಯೇಕ ಮೆಸೇಜ್ಗಳನ್ನು ಮಾಡಿದ್ದಾರೆ. ನಿಮ್ಮನ್ನು ಭೇಟಿ ಮಾಡಿಸಿದ್ದಕ್ಕೆ ನನ್ನ ಅದೃಷ್ಟಕ್ಕೆ ಧನ್ಯವಾದಗಳು. ನೀವು ಸರಿಯಾದ ವ್ಯಕ್ತಿ. ಈ ದಿನಕ್ಕಾಗಿ ನಮ್ಮ ಮಾರ್ಗಗಳು ಭೇಟಿಯಾಯಿತು ಅದು ಕೇವಲ ಸಿನಿಮಾಗಾಗಿ ಮಾತ್ರವಲ್ಲ. ಆದರೆ, ತುಂಬಾ ವಿಭಿನ್ನವಾದದ್ದು, ನನಗಾಗಿ ನೀವು ಹೇಳಿದ ಪ್ರತಿಯೊಂದು ಪದಗಳು ಸಹ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತದೆ ಮತ್ತು ನಮ್ಮ ಅನಿಯಂತ್ರಿತ ಪ್ರೀತಿಯ ಮೇಲೆ ಆಳವಾದ ಪ್ರಭಾವ ಬೀರಿವೆ ಎಂದು ಭಾಸವಾಗುತ್ತಿದೆ ಎಂದು ಹೇಳಿದ್ದಾರೆ.
ಈ ಮೇಲಿನ ಸಂದೇಶಗಳ ಜತೆಯಲ್ಲಿ ರಿಯಾ ರೈನ್ಬೌ ಮತ್ತು ಡ್ಯಾನ್ಸಿಂಗ್ ಗರ್ಲ್ ಎಮೋಜಿಯನ್ನು ಸಹ ಕಳುಹಿಸಿ, ಸಂಭಾಷಣೆಯ ಉದ್ದಕ್ಕೂ ತನ್ನ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಭಟ್ ಕುರಿತ ನನ್ನ ಅತ್ಯುತ್ತಮ ವ್ಯಕ್ತಿಗೆ ಐ ಲವ್ ಯೂ ಮತ್ತು ಇದು ನಿಮಗೆ ಹೆಮ್ಮೆ ತರುತ್ತದೆ ಎಂದಿದ್ದಾರೆ. ಇದಕ್ಕೆ ಭಟ್ ಸಹ ಕೈಗಳು ಮಡಚಿದ ಎಮೋಜಿಯೊಂದಿಗೆ ನಿಜವಾಗಿಯು ನೀನು ಮಾಡಿದ್ದನ್ನು ಮಾಡಲು ಧೈರ್ಯ ಬೇಕು. ಮತ್ತೆ ಹಿಂತಿರುಗಿ ನೋಡಬೇಡ ಎಂದಿದ್ದಾರೆ.
ಇದನ್ನೂ ಓದಿ: ಸೆಕ್ಸ್ ಲೈಫ್ಗೂ ಕರೊನಾ ಎಫೆಕ್ಟ್: ಸೋಂಕಿನಿಂದ ಪಾರಾಗಲು ಜನ ಮೊರೆ ಹೋದ ಸೆಕ್ಸ್ ಭಂಗಿಗಳಿವು!
ಹೀಗೆ ರಿಯಾ ಮತ್ತು ಭಟ್ ನಡುವೆ ಸಂಭಾಷಣೆ ನಡೆದಿದೆ. ಅಂದಹಾಗೆ ಸುಶಾಂತ್ ಜೂನ್ 14ರಂದು ಮುಂಬೈ ಬಾಂದ್ರಾ ನಿವಾಸದಲ್ಲಿ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆಯಾದರು. ಮೇಲ್ನೋಟಕ್ಕೆ ಆತ್ಮಹತ್ಯೆಯಾದರೂ ಸುಶಾಂತ್ ಸಾವಿನ ಬಗ್ಗೆ ಸಾಕಷ್ಟು ಅನುಮಾನುಗಳ ಎದ್ದಿದ್ದು, ಇದರಲ್ಲಿ ರಿಯಾ ಹೆಸರು ಇದೀಗ ಹೆಚ್ಚು ಕೇಳಿಬಂದಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ರಿಯಾ ವಿರುದ್ಧ ಕೇಸು ದಾಖಲಾಗಿದ್ದು, ಸುಶಾಂತ್ ಸಾವಿನ ಪ್ರಕರಣವನ್ನು ಕೇಂದ್ರ ಸರ್ಕಾರ ಸಿಬಿಐಗೂ ವಹಿಸಿದೆ. (ಏಜೆನ್ಸೀಸ್)
ಮಗ ತಾಯಿಯನ್ನೇ ಮದುವೆಯಾದನಾ?: ವೈರಲ್ ಸ್ಟೋರಿ ಹಿಂದಿನ ಅಸಲಿಯತ್ತೇ ಬೇರೆ ಇದೆ!