ಕಾರವಾರ: ಎರಡು ದಿನದ ಹಿಂದೆ ಸದಾಶಿವಗಡ ಮೂಲದ ವ್ಯಕ್ತಿಯೊಬ್ಬರು ಕುವೈತ್ನಲ್ಲಿ ಕರೊನಾಗೆ ಬಲಿಯಾದ ಬೆನ್ನಲ್ಲೇ, ಇಲ್ಲಿನ ಮತ್ತೊಬ್ಬರು ಮುಂಬೈನಲ್ಲಿ ಸೋಂಕು ತಗುಲಿ ಅಸುನೀಗಿದ್ದಾರೆ.
ಸದಾಶಿವಗಡದ ಮಹಿಳೆ ಮೊಬೆಲ್ ಫರ್ನಾಂಡಿಸ್ (60) ಮೃತರು. ಇವರ ಪತಿ ವಿಕಿ ಫರ್ನಾಂಡಿಸ್ ಅವರಿಗೂ ಕರೊನಾ ಸೋಂಕಿದ್ದು, ಮುಂಬೈನ ಆಸ್ಪತ್ರೆಯಲ್ಲಿ ಐಸೋಲೇಶನ್ನಲ್ಲಿ ಇದ್ದಾರೆ.
ಇದನ್ನೂ ಓದಿರಿ ಇನ್ಮುಂದೆ ನರೇಗಾದಡಿ ಸಿಗಲಿದೆ 150 ದಿನ ಕೆಲಸ.. ಕೂಲಿದರ ಹೆಚ್ಚಳ ಸಾಧ್ಯತೆ
ಸದಾಶಿವಗಡ ಮಹಾಮಾಯಾ ದೇವಸ್ಥಾನ ನಿವಾಸಿ ಮೊಬೆಲ್ ಮತ್ತು ವಿಕಿ ದಂಪತಿ ಅವರ ಪುತ್ರ ಏರ್ಲೈನ್ಸ್ನ ಉದ್ಯೋಗಿ. ಮುಂಬೈನಲ್ಲಿದ್ದ ಮಗನ ಮನೆಗೆಂದು ಲಾಕ್ಡೌನ್ಗೂ ಮುನ್ನವೇ ದಂಪತಿಗಳು ಹೋಗಿದ್ದರು. ಮೃತರಿಗೆ ಪುತ್ರಿ, ಇಬ್ಬರು ಪುತ್ರರು ಇದ್ದಾರೆ.
ಇದನ್ನೂ ಓದಿರಿ ತಂದೆ ಎದುರಲ್ಲೇ 7 ವರ್ಷದ ಬಾಲಕಿಯನ್ನು ಎಳೆದೊಯ್ದ ಚಿರತೆ…