ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡದ ವಿರುದ್ಧ ಪಾಕಿಸ್ತಾನ 81ರನ್ಗಳ ಭರ್ಜರಿ ಜಯ ಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ಮೊಹಮ್ಮದ್ ರಿಜ್ವಾನ್ (68 ರನ್, 75 ಎಸೆತ, 8 ಬೌಂಡರಿ), ಸೌದ್ ಶಕೀಲ್ (68 ರನ್, 52 ಎಸೆತ, 9 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ಫಲವಾಗಿ 49 ಓವರ್ಗಳಲ್ಲಿ 286 ರನ್ಗಳಿ ಆಲೌಟ್ ಆಯಿತು.
287 ರನ್ಗಳ ಗುರಿ ಬೆನ್ನತ್ತಿದ್ದ ನೆದರ್ಲೆಂಡ್ಸ್ ತಂಡವು ಪಾಕ್ ಬೌಲಿಂಗ್ ದಾಳಿ ವಿರುದ್ಧ ರನ್ ಪೇರಿಸಲು ಪರದಾಡಿತು. ಅಂತಿಮವಾಗಿ ಪಾಕ್ ತಂಡವು 81 ರನ್ಗಳಿಂದ ಗೆದ್ದು ಬೀಗಿದೆ. ಆ ಮೂಲಕ ಭಾರತದಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಪಾಕಿಸ್ತಾನ ಪರ ಹ್ಯಾರಿಸ್ ರೌಫ್ (9-0-43-3), ಶಾದಾಬ್ ಖಾನ್ (8-0-45-1), ಹಸನ್ ಅಲಿ (7-1-33-2), ಮೊಹಮ್ಮದ್ ನವಾಜ್ (7-0-31-1), ಶಹೀನ್ ಅಫ್ರಿದಿ (7-0-37-1), ಇಫ್ತಿಕಾರ್ ಅಹ್ಮದ್ (3-0-16-1) ಪಾಕಿಸ್ತಾನದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.