More

    ಸರ್ಕಾರ ಬೆಳೆ ನಷ್ಟ ಭರಿಸಲಿ

    ಚಾಮರಾಜನಗರ: ಜಿಲ್ಲೆಯಲ್ಲಿ ಮುಂಗಾರು ಹಾಗೂ ಪೂರ್ವ ಮುಂಗಾರು ಸಂಪೂರ್ಣ ಕ್ಷೀಣಿಸಿದ್ದು, ಸರ್ಕಾರ ಬೆಳೆ ನಷ್ಟ ಭರಿಸುವಂತೆ ರೈತಾಪಿ ವರ್ಗ ಆಗ್ರಹಿಸಿದೆ.

    ಪೂರ್ವ ಮುಂಗಾರಿನಲ್ಲಿ ಚಾಮರಾಜನಗರ ತಾಲೂಕಿನಲ್ಲಿ 12590, ಗುಂಡ್ಲುಪೇಟೆಯಲ್ಲಿ 31070, ಕೊಳ್ಳೇಗಾಲದಲ್ಲಿ 4084, ಹನೂರಿನಲ್ಲಿ 2747, ಯಳಂದೂರಿನಲ್ಲಿ 3949 ಹೆಕ್ಟೇರ್‌ನಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಮುಂಗಾರು ಹಂಗಾಮಿನಲ್ಲಿ ಜೋಳ, ಸೂರ್ಯಕಾಂತಿ, ಉದ್ದು, ಕಡಲೆ, ಉರುಳಿ, ಅವರೆ, ಎಳ್ಳು ಮತ್ತು ಇತರ ಬೆಳೆಗಳು ಮಳೆ ಇಲ್ಲದೆ ಒಣಗುತ್ತಿವೆ. ಕಷ್ಟಪಟ್ಟು ಬೆಳೆ ಬೆಳೆದ ರೈತರು ಬಿಸಿಲಿಗೆ ಒಣಗಿರುವ ಬೆಳೆಗಳಿಗೆ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಒಣಗುತ್ತಿರುವ ಬೆಳೆಗಳನ್ನು ಜಾನುವಾರುಗಳ ಮೇವಾಗಿ ಪರಿವರ್ತನೆಯಾಗುತ್ತಿವೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿರುವ ರೈತರು ಈಗ ಬೆಳೆ ನಷ್ಟಕ್ಕೆ ಸಿಲುಕಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts