More

    ಪೊನ್ನಣ್ಣಗೆ ಪೊನ್ನಂಪೇಟೆ ನಾಗರಿಕ ವೇದಿಕೆ ಸನ್ಮಾನ

    ಪೊನ್ನಂಪೇಟೆ:

    ರಾಜಕೀಯ ಅವಧಿಯಲ್ಲಿ ಎಂದಿಗೂ ದ್ವೇಷ ರಾಜಕಾರಣ ಮಾಡಲಾರೆ. ಚುನಾವಣಾ ಸಂದರ್ಭದಲ್ಲಿ ಮುಂಜಾನೆಯಿಂದ ಸಂಜೆಯವರೆಗೂ ಕುಟುಂಬ ಮತ್ತು ವೈಯಕ್ತಿಕ ತೇಜೊವಧೆ ಮಾಡಿದ್ದಾರೆ. ಆದರೆ ನಾನು ಇಲ್ಲಿಯ ತನಕ ಯಾವುದೇ ವ್ಯಕ್ತಿ ಕುರಿತು ಮಾತನಾಡಿದವನಲ್ಲ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ಪೊನ್ನಂಪೇಟೆ ನಾಗರಿಕ ವೇದಿಕೆಯಿಂದ ಇಗ್ಗುತ್ತಪ್ಪ ಸೌಹಾರ್ದ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

    ಕಳೆದ ನಾಲ್ಕು ವರ್ಷಗಳಿಂದ ಮನೆ ಮನೆಗೆ ತೆರಳಿ ನನ್ನ ಪರಿಚಯ ಮಾಡಿಕೊಂಡಿದ್ದೇನೆ. ಹೀಗಾಗಿ ಮತದಾರರು ೮೪ ಸಾವಿರಕ್ಕೂ ಅಧಿಕ ಮತಗಳನ್ನು ನೀಡಿದ್ದಾರೆ. ಉಳಿದ ೭೮ ಸಾವಿರ ಮತದಾರರ ಬಳಿಗೆ ಮುಂದಿನ ದಿನದಲ್ಲಿ ತೆರಳಿ ನನ್ನ ಪರಿಚಯವನ್ನು ಮಾಡಿಕೊಳ್ಳುತ್ತೇನೆ. ಆ ಮೂಲಕ ವಿಶ್ವಾಸಗಳಿಸುತ್ತೇನೆ. ರಾಜಕೀಯದಿಂದ ವೈಯಕ್ತಿಕವಾಗಿ ನಾನು ಗಳಿಸುವುದು ಏನೂ ಇಲ್ಲ. ಚುನಾವಣೆಯಿಂದ ನನ್ನ ಆರೋಗ್ಯ, ಕೌಟುಂಬಿಕ ಜೀವನ, ನನ್ನ ವೃತ್ತಿಯಲ್ಲಿ ದುಡಿದ ಆದಾಯ ಕಳೆದುಕೊಂಡಿದ್ದೇನೆ. ನನಗೆ ನಿಗಮ ಮಂಡಳಿಯಲ್ಲಿ ಸ್ಥಾನ ಪಡೆಯಲು ಪಕ್ಷದ ಮುಖಂಡರು ಒತ್ತಾಯಿಸುತ್ತಿದ್ದಾರೆ. ಇದರಲ್ಲಿ ಅಧ್ಯಕ್ಷನಾಗಲು ನಾನು ಚುನಾವಣೆಗೆ ನಿಲ್ಲಬೇಕಾಗಿರಲಿಲ್ಲ. ಬೆಂಗಳೂರಿನಲ್ಲಿಯೇ ಕುಳಿತು ಮತ್ತೊಮ್ಮೆ ಅಡ್ವಕೇಟ್ ಜನರಲ್ ಆಗಬಹುದಿತ್ತು. ಆ ಪದವಿಯನ್ನು ಬಿಟ್ಟು ಸಾರ್ವಜನಿಕ ಸೇವೆಗಾಗಿ ಬಂದಿದ್ದೇನೆ. ಇದರಲ್ಲಿ ಜನರ ವಿಶ್ವಾಸ ಗಳಿಸಿ ಶಾಸಕನಾಗಿದ್ದೇನೆ. ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ನನ್ನಲ್ಲಿ ಪರಿಹಾರ ಇದೆ ಎಂಬ ವಿಶ್ವಾಸ ನನಗಿದೆ ಎಂದರು.
    ಮುಂದಿನ ದಿನದಲ್ಲಿ ರಾಜ್ಯದ ಕಂದಾಯ ಮಂತ್ರಿಯನ್ನು ಕರೆಸುವ ಮೂಲಕ ಇಲ್ಲಿಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹಿಡಿಯುವ ಪ್ರಯತ್ನ ಮಾಡಲಾಗುವುದು. ನಮಗೆ ರಾಜಕೀಯವಾಗಿ ವಿರೋಧಿಗಳು ಇರಲೇಬೇಕು. ಆದರೆ ಜವಾಬ್ದಾರಿಯುತ ವಿರೋಧಗಳಿರಬೇಕು. ವಿರೋಧ ಪಕ್ಷವೇ ಇಲ್ಲ ಎಂಬ ಬೇಜಾವಬ್ದಾರಿ ನಾನು ಒಪ್ಪುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳು ಕೆಲಸ ಮಾಡಬೇಕು ಎಂದು ಹೇಳಿದರು.

    ಹಿರಿಯ ನಾಗರಿಕ ಮನೆಯಪಂಡ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗರಿಕ ವೇದಿಕೆ ಅಧ್ಯಕ್ಷ ಚಿಮ್ಮಣಮಾಡ ವಾಸು ಉತ್ತಪ್ಪ, ಉಪಾಧ್ಯಕ್ಷ ಚೊಟ್ಟೆಯಂಡಮಾಡ ವಿಶ್ವನಾಥ್ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ, ಪೊನ್ನಂಪೇಟೆ ಛೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಸಿ.ಕೆ. ಉಮೇಶ್ ವೇದಿಕೆಯ ಸದಸ್ಯ ಪ್ರಭಾಕರ್ ಮಾತನಾಡಿದರು.

    ನಾಗರಿಕ ವೇದಿಕೆಯ ಅಡ್ಡಂಡ ಅನಿತಾಕಾರ್ಯಪ್ಪ, ಮೂಕಳೇರ ಕುಶಾಲಪ್ಪ, ಆಲೀರ ಎ.ಎರ್ಮುಹಾಜಿ, ಎ.ಬಿ.ದೇವಯ್ಯ, ಮತ್ರಂಡ ಅಪ್ಪಚ್ಚು,ಗ್ರಾಮ ಪಂಚಾಯಿತಿ ಸದಸ್ಯರಾದ ಮೂಕಳೇರ ಸುಮಿತ ಗಣೇಶ್,ಅಣ್ಣೀರ ಹರೀಶ್,ಕೋಳೇರ ಭಾರತಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts