ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ)ಯು 2022-23ನೇ ಸಾಲಿನ ನೌಕರರ ಭವಿಷ್ಯ ನಿಧಿಗೆ 8.15ರಷ್ಟು ಬಡ್ಡಿದರವನ್ನು ನಿಗದಿಪಡಿಸಿದೆ.
2021-22ನೇ ಸಾಲಿಗೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ನೌಕರರ ಭವಿಷ್ಯ ನಿಧಿಯ ಬಡ್ಡಿದರ ಕೇವಲ ಶೇ. 0.5ರಷ್ಟು ಹೆಚ್ಚಾಗಿದೆ. ಕಳೆದ ವರ್ಷ 8.1 ರಷ್ಟಿತ್ತು. ನಾಲ್ಕು ದಶಕಗಳಲ್ಲೇ ಅತಿ ಕಡಿಮೆ ದರವಾಗಿದ್ದು, ಕಳೆದ ಕೆಲವು ವರ್ಷಗಳಿಂದ ಇಪಿಎಫ್ ಬಡ್ಡಿದರದಲ್ಲಿ ಕುಸಿತ ಕಾಣುತ್ತಿರುವ ಹಿನ್ನೆಲೆಯಲ್ಲಿ ಸುಮಾರು 5 ಕೋಟಿ ಇಪಿಎಫ್ಒ ಚಂದಾದಾರರಿಗೆ ಅಸಮಾಧಾನ ತರಿಸಿದೆ.
ಆದಾಗ್ಯೂ, ಶಿಫಾರಸು ಮಾಡಲಾದ ಶೇಕಡ 8.15 ರ ಬಡ್ಡಿದರವು ಹೆಚ್ಚುವರಿ ಹೊರೆಯಿಂದ ರಕ್ಷಿಸುತ್ತದೆ ಮತ್ತು ಸದಸ್ಯರಿಗೆ ಹೆಚ್ಚಿನ ಆದಾಯವನ್ನು ಖಾತರಿಪಡಿಸುತ್ತದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದ್ದು, ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು 2022-23ಕ್ಕೆ ಇಪಿಎಫ್ನಲ್ಲಿ ಶೇಕಡ 8.15 ರ ಬಡ್ಡಿದರವನ್ನು ಮಂಗಳವಾರ ನಡೆದ ಸಭೆಯಲ್ಲಿ ನೀಡಲು ನಿರ್ಧರಿಸಿದೆ. ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ ನಿರ್ಧಾರದ ನಂತರ, 2022-23ರ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಅನುಮೋದನೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಹಣಕಾಸು ಸಚಿವಾಲಯದಿಂದ ಅನುಮೋದನೆ ಪಡೆದ ನಂತರ ಇಪಿಎಫ್ಒ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಅನುಮೋದಿಸುತ್ತದೆ.
2018-20 ರಲ್ಲಿ ಶೇ. 8.65 ಇದ್ದ EPF ಠೇವಣಿಗಳ ಮೇಲಿನ ಬಡ್ಡಿ ದರವನ್ನು 2019-20 ಕ್ಕೆ ಏಳು ವರ್ಷಗಳ ಕನಿಷ್ಠ ಶೇ. 8.5ಕ್ಕೆ ಇಳಿಸಿತು. EPFO ತನ್ನ ಚಂದಾದಾರರಿಗೆ 2016-17 ರಲ್ಲಿ ಶೇ. 8.65 ಬಡ್ಡಿದರವನ್ನು ಮತ್ತು 2017-18 ರಲ್ಲಿ ಶೇ. 8.55 ಬಡ್ಡಿದರ ಒದಗಿಸಿದೆ. 2015-16ರಲ್ಲಿ ಶೇ.8.8ರಷ್ಟು ಬಡ್ಡಿದರ ಸ್ವಲ್ಪ ಹೆಚ್ಚಿದ್ದರೆ, 2013-14ರಲ್ಲಿ ಹಾಗೂ 2014-15ರಲ್ಲಿ ಶೇ.8.75ಕ್ಕೆ ನಿಗದಿಪಡಿಸಲಾಗಿತ್ತು. 2012-13ರಲ್ಲಿ ಮತ್ತೆ ಶೇ.8.5 ಮತ್ತು 2011-12ರಲ್ಲಿ ಶೇ.8.25ರಷ್ಟಿತ್ತು. (ಏಜೆನ್ಸೀಸ್)
ರಾಹುಲ್ ಗಾಂಧಿ ಅನರ್ಹತೆ ವಿಚಾರ: ಅಮೆರಿಕ ಕೊಟ್ಟ ಪ್ರತಿಕ್ರಿಯೆ ಹೀಗಿದೆ…
“ಜೈ ಶ್ರೀ ರಾಮ್” ಕೂಗಲು ನಿರಾಕರಿಸಿದ ಅನ್ಯಧರ್ಮದವನ ಗಡ್ಡ ಕತ್ತರಿಸಿ ಪರಾರಿಯಾದ ಮುಸುಕುಧಾರಿಗಳು