ಕೊಡಗು: ರಸ್ತೆ ಅಪಘಾತದಲ್ಲಿ ಶಾಲಾ ಶಿಕ್ಷಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮರೂರು ಗ್ರಾಮದಲ್ಲಿ ನಡೆದಿದೆ.
ಅಶ್ವಿನಿ ಚೇತನ್(45) ಮೃತ ಶಿಕ್ಷಕಿ. ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಶಿಕ್ಷಕಿಯ ದ್ವಿಚಕ್ರ ವಾಹನಕ್ಕೆ ಬೊಲೆರೋ ವಾಹನ ಡಿಕ್ಕಿಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರವಾಹನ ನುಜ್ಜುಗುಜ್ಜಾಗಿದೆ.
ತೀವ್ರ ಗಾಯಗೊಂಡ ಶಿಕ್ಷಕಿ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಾಹನ ಚಾಲಕನನ್ನು ವಶಕ್ಕೆ ಪಡೆದ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)
ಸಲ್ಮಾನ್ ಆಯ್ತು, ಈ ಖ್ಯಾತ ನಿರ್ದೇಶಕನ ಹತ್ಯೆಗೂ ಗ್ಯಾಂಗ್ಸ್ಟರ್ ಬಿಷ್ಣೋಯಿ ಸ್ಕೆಚ್: ತನಿಖೆಯಿಂದ ಬಯಲು
VIDEO: ವಿದ್ಯಾರ್ಥಿನಿಯರೊಂದಿಗೆ ಸರ್ಕಾರಿ ಶಾಲಾ ಶಿಕ್ಷಕಿಯ ಡ್ಯಾನ್ಸ್ಗೆ ಭಾರೀ ಪ್ರಶಂಸೆ!