ತುಮಕೂರು: ಸರಿಯಾಗಿ ಓದಲಿಲ್ಲ ಎಂದು ಶಾಲಾ ವಿದ್ಯಾರ್ಥಿನಿಗೆ ಹೊಡೆದ ಶಿಕ್ಷಕಿಗೆ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಭಾರತ್ ಮಾತಾ ಶಾಲೆ ಶಿಕ್ಷಕಿ ರಹತ್ ಫಾತಿಮಾ ಶಿಕ್ಷೆಗೆ ಗುರಿಯಾದವರು. 2011ರ ಫೆ.17ರಂದು ಸರಿಯಾಗಿ ಓದಲಿಲ್ಲವೆಂದು 7 ವರ್ಷದ ಬಾಲಕಿಗೆ ಕೋಲಿನಿಂದ ಹೊಡೆದ ಪರಿಣಾಮ ಬಾಲಕಿಯ ಎಡಗಣ್ಣಿಗೆ ಗಾಯವಾಗಿತ್ತು. ಈ ಸಂಬಂಧ ತಿಲಕ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಠಾಣಾ ಪಿಎಸ್ಐ ಆಗಿದ್ದ ದಿನೇಶ್ ಪಾಟೀಲ್ ಆರೋಪಿ ಶಿಕ್ಷಕಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಭಾರತೀಯ ದಂಡ ಸಂಹಿತೆ 325ರ ಅಡಿಯಲ್ಲಿ ಶಿಕ್ಷಕಿ ಅಪರಾಧವೆಸಗಿರುವುದು ಸಾಬೀತಾಗಿದ್ದು, ಈ ಪ್ರಕರಣದ ವಿಚಾರಣೆ ನಡೆಸಿದ 3ನೇ ಅಪರ ಸಿವಿಲ್ ಹಾಗೂ ಜೆಎಂಎಸಿ ಕೋರ್ಟ್ನ ನ್ಯಾಯಾಧೀಶೆ ಶಾರದಾ ಕೊಪ್ಪದ ಅವರು ಶಿಕ್ಷಕಿಗೆ 3 ವರ್ಷ ಕಠಿಣ ಸಜೆ, 10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಜಿ.ಬಸವರಾಜು ವಾದ ಮಂಡಿಸಿದ್ದರು.
ತಂಗಿ ಸತ್ತರೂ ಯಾರಿಗೂ ಹೇಳದೆ 4 ದಿನ ಶವದ ಜತೆ ಒಬ್ಬಳೇ ಇದ್ದ ಅಕ್ಕ! ಇವರಿಬ್ಬರ ಬದುಕೇ ಕರುಣಾಜನಕ
ದೇವನಹಳ್ಳಿಯ ಬಾಡಿಗೆ ಮನೇಲಿ ಗೃಹಿಣಿ ಜತೆ ಯುವಕ ಆತ್ಮಹತ್ಯೆ: ಪ್ರಕರಣ ಬೆನ್ನಟ್ಟಿದ ಪೊಲೀಸರಿಗೆ ಬಯಲಾಯ್ತು ಭಯಾನಕ ರಹಸ್ಯ