ಬೆಂಗಳೂರು: ನೈಜೀರಿಯ ಡ್ರಗ್ಸ್ ಪೆಡ್ಲರ್ ಥಾಮಸ್ ಕಾಲು ಜೊತೆ ಸಂಪರ್ಕದಲ್ಲಿದ್ದ ಅಂಜುಂ ರಜಾಕ್ ಜಂಗ್ ಎಂಬಾಕೆಗೆ ಗೋವಿಂದಪುರ ಠಾಣಾ ಪೊಲೀಸರು ಮೂರನೇ ಬಾರಿ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ.
ಎರಡು ಬಾರಿ ನೋಟಿಸ್ ನೀಡಿದ್ರೂ ಅಂಜುಂ ರಜಾಕ್ನಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಮೂರನೇ ಬಾರಿ ನೋಟಿಸ್ ನೀಡಲು ನಿರ್ಧರಿಸಿದ್ದಾರೆ. ನೈಜೀರಿಯ ಡ್ರಗ್ಸ್ ಪೆಡ್ಲರ್ ಥಾಮಸ್ ಕಾಲು ಜತೆ ಸಂಪರ್ಕದಲ್ಲಿರುವುದಾಗಿ ಅಂಜುಂ ರಜಾಕ್ ಸಂಪರ್ಕದಲ್ಲಿರುವುದು ತಿಳಿದುಬಂದಿದ್ದು, ಸಾಕಷ್ಟು ಬಾರಿ ಡ್ರಗ್ಸ್ ತಗೆದುಕೊಂಡಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಆರೋಪಿ ಅಂಜುಂ ರಜಾಕ್, ಪ್ರೆಸ್ಟೀಜ್ ಗ್ರೂಪ್ ಮಾಲೀಕ ಇರ್ಫಾನ್ ಸಹೋದರಿ. ಈಕೆ ಪ್ರೆಸ್ಟೀಜ್ ಗ್ರೂಪ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದಾಳೆ. ಸೆಪ್ಟೆಂಬರ್ 25 ರಂದು ವಿಚಾರಣೆಗೆ ಹಾಜರಾಗಲು ಗೋವಿಂದಪುರ ಠಾಣಾ ಪೊಲೀಸರು ನೊಟೀಸ್ ನೀಡಿದ್ದರು. ಆದ್ರೆ, ನೋಟಿಸ್ ಸ್ವೀಕರಿಸಿದ್ರೂ ಕೂಡ ವಿಚಾರಣೆಗೆ ಹಾಜರಾಗಿರಲಿಲ್ಲ. ನಂತರ ಅಕ್ಟೋಬರ್ನಲ್ಲಿ ಎರಡನೇ ನೋಟಿಸ್ ನೀಡಿದ್ದರು. ಈಗ ಇಂದು ವಿಚಾರಣೆಗೆ ಹಾಜರಾಗುವಂತೆ ಮತ್ತೊಂದು ನೊಟೀಸ್ ನೀಡಲು ಸಿದ್ಧತೆ ನಡೆಸಿದ್ದಾರೆ.
ಸೆಪ್ಟೆಂಬರ್ನಲ್ಲಿ ಸಿಕ್ಕಿಬಿದ್ದಿದ್ದ ನೈಜೀರಿಯ ಪೆಡ್ಲರ್ನಿಂದ ಲಕ್ಷಾಂತರ ಮೌಲ್ಯದ ಡ್ರಗ್ಸ್ ಅನ್ನು ಸೀಜ್ ಮಾಡಲಾಗಿತ್ತು. ಈ ವೇಳೆ ಆತನ ಮೊಬೈಲ್ ಫೋನ್ನಲ್ಲಿ ಸಾಕಷ್ಟು ಮಾಹಿತಿ ಕಲೆಹಾಕಲಾಗಿತ್ತು. ವಾಟ್ಸ್ಆ್ಯಪ್ನಲ್ಲಿ ಮೆಸೇಜ್ ಮಾಡಿ ಅಂಜುಂ ರಜಾಕ್ ಡ್ರಗ್ಸ್ ತರಿಸಿಕೊಂಡಿರೊ ಶಂಕೆ ಇದೆ. ಫ್ರೇಜರ್ ಟೌನ್ನ ನಂದಿದುರ್ಗ ರಸ್ತೆಯಲ್ಲಿರುವ ಅಂಜುಂ ಮನೆಗೆ ಹಲವು ಬಾರಿ ಡ್ರಗ್ಸ್ ನೀಡಿರುವುದಾಗಿ ಪೆಡ್ಲರ್ ಥಾಮಸ್ ಕಾಲು ಹೇಳಿಕೆ ನೀಡಿದ್ದಾನೆ. ಇದೇ ಕಾರಣಕ್ಕೆ ಮಾಹಿತಿ ಪಡೆಯಲು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. (ದಿಗ್ವಿಜಯ ನ್ಯೂಸ್)
ಇಂದು, ನಾಳೆ ಬ್ಯಾಂಕ್ ಮುಷ್ಕರ: ಹಲವು ಸೇವೆಗಳಲ್ಲಿ ವ್ಯತ್ಯಯ- ಇಲ್ಲಿದೆ ಸಂಪೂರ್ಣ ವಿವರ…
ಕಾಂಗ್ರೆಸ್ ಶಾಸಕ ತುಕಾರಾಂ ಆರೋಪದ ಬೆನ್ನಲ್ಲೇ ಸಂಡೂರು ತಹಸೀಲ್ದಾರ್ ರಶ್ಮಿ ಎತ್ತಂಗಡಿ
ಇರೋದು ನಾಲ್ಕೇ ವಿದ್ಯಾರ್ಥಿನಿಯರು ಆದ್ರೆ ಲೆಕ್ಕದಲ್ಲಿ 35! ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ನಲ್ಲಿ ಗೋಲ್ ಮಾಲ್