ಮುಂಬೈ: ಮಹಾರಾಷ್ಟ್ರದ ನಾಸಿಕ್ನ ಡಾ.ಜಾಕೀರ್ ಹುಸೇನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆಯಾಗಿ 22 ಮಂದಿ ದುರ್ಮರಣಕ್ಕೀಡಾದ ಘಟನೆ ಬುಧವಾರ ಸಂಭವಿಸಿದೆ.
ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕರ್ ಸೋರಿಕೆಯಾಗಿದ್ದು, ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಸಿಕ್ಕಿಲ್ಲ. ಪ್ರಾಣ ಉಳಿಸಬೇಕಿದ್ದ ವಾಯು ಯಮನಂತೆ ಬಂದೆರಗಿದೆ. ಆರಂಭದಲ್ಲಿ 11 ಮಂದಿ ಮೃತಪಟ್ಟಿದ್ದಾಗಿ ತಿಳಿದು ಬಂದಿದ್ದು, ಸದ್ಯ ಸಾವಿನ ಸಂಖ್ಯೆ 22ಕ್ಕೇರಿದೆ. ಆಕ್ಸಿಜನ್ ಸೋರಿಕೆ ನಿಯಂತ್ರಣ ಕಾರ್ಯಾಚರಣೆ ನಡೆದಿದೆ.
ಆಕ್ಸಿಜನ್ ಸೋರಿಕೆ ಪ್ರಕರಣವನ್ನು ಮಹಾರಾಷ್ಟ್ರ ಸರ್ಕಾರ ತನಿಖೆಗೆ ಆದೇಶಿಸಿದೆ. ಆಸ್ಪತ್ರೆಯಲ್ಲಿ 171 ಮಂದಿ ಕೋವಿಡ್ ಸೋಂಕಿತರಿದ್ದರು. ಈ ಪೈಕಿ 67 ಮಂದಿ ಕೃತಕ ಆಕ್ಸಿಜನ್ ಪಡೆಯುತ್ತಿದ್ದರು. ಇವರಲ್ಲಿ 22 ಮಂದಿ ದುರಂತ ಅಂತ್ಯ ಕಂಡಿದ್ದಾರೆ.
ಹಾಡಹಗಲೇ ಫ್ಯಾನ್ಸಿ ಸ್ಟೋರ್ಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ, ಬೆಚ್ಚಿಬಿದ್ದ ಸ್ಥಳೀಯರು
ಟಂಟಂ-ಲಾರಿ ನಡುವೆ ಭೀಕರ ಅಪಘಾತ, ಕೂಲಿ ಕೆಲಸಕ್ಕೆ ಹೊರಟಿದ್ದ ಐವರು ಹೆಂಗಸರ ಮೇಲೆ ಜವರಾಯನ ಅಟ್ಟಹಾಸ