ಹಾಡಹಗಲೇ ಫ್ಯಾನ್ಸಿ ಸ್ಟೋರ್​ಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ, ಬೆಚ್ಚಿಬಿದ್ದ ಸ್ಥಳೀಯರು

ಕೋಲಾರ: ನಗರದ ಮಹಾಲಕ್ಷ್ಮೀ ಲೇಔಟ್​ನಲ್ಲಿ ಹಾಡಹಗಲೇ ಯುವತಿಯೊಬ್ಬಳನ್ನು ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕೋಲಾರ ತಾಲೂಕಿನ ನಾಗನಾಯಕನಹಳ್ಳಿಯ ನೀಲವೇಣಿ(29) ಕೊಲೆಯಾದ ದುರ್ದೈವಿ. ಮಹಾಲಕ್ಷ್ಮಿ ಲೇಔಟ್​ನಲ್ಲಿ ಫ್ಯಾನ್ಸಿ ಸ್ಟೋರ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದಳು. ಬುಧವಾರ ಹಾಡಹಗಲೇ ಫ್ಯಾನ್ಸಿ ಸ್ಟೋರ್​ಗೆ ನುಗ್ಗಿದ್ದ ಅಪರಿಚಿತರು ಮಾರಕಾಸ್ತ್ರಗಳಿಂದ ಮನಸೋಇಚ್ಛೆ ಹಲ್ಲೆ ಮಾಡಿ ಕೊಂದು ಪರಾರಿಯಾಗಿದ್ದಾರೆ. ಸ್ಟೋರ್ ಒಳಗೆ ಅಪರಿಚಿತರು ಹೋಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಂಟಂ-ಲಾರಿ ನಡುವೆ ಭೀಕರ ಅಪಘಾತ, ಕೂಲಿ … Continue reading ಹಾಡಹಗಲೇ ಫ್ಯಾನ್ಸಿ ಸ್ಟೋರ್​ಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ, ಬೆಚ್ಚಿಬಿದ್ದ ಸ್ಥಳೀಯರು