ಮುಂಬೈ : ಕರೊನಾ ಪರಿಸ್ಥಿತಿಯು ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು 10ನೇ ತರಗತಿ ಮತ್ತು 12ನೇ ತರಗತಿಯ ಸ್ಟೇಟ್ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಿದೆ. ರಾಜ್ಯದಲ್ಲಿ 12ನೇ ತರಗತಿಯ ಪರೀಕ್ಷೆಗಳನ್ನು ಮೇನಲ್ಲಿ ಮತ್ತು 10ನೇ ತರಗತಿಯ ಪರೀಕ್ಷೆಗಳನ್ನು ಜೂನ್ನಲ್ಲಿ ನಡೆಸಲಾಗುವುದು ಎಂದು ರಾಜ್ಯದ ಶಿಕ್ಷಣ ಸಚಿವರಾದ ವರ್ಷ ಗಾಯಕ್ವಾಡ್ ಇಂದು ತಿಳಿಸಿದ್ದಾರೆ.
“ಪ್ರಸ್ತುತ ಸನ್ನಿವೇಶವು ಪರೀಕ್ಷೆ ನಡೆಸಲು ಪೂರಕವಾಗಿಲ್ಲ. ನಿಮ್ಮ ಆರೋಗ್ಯವೇ ನಮ್ಮ ಆದ್ಯತೆಯಾಗಿದೆ” ಎಂದು ಟ್ವಿಟರ್ನಲ್ಲಿ ವಿಡಿಯೋ ಸಂದೇಶ ಶೇರ್ ಮಾಡಿರುವ ಗಾಯಕ್ವಾಡ್ ಅವರು, ಬದಲಾಗುವ ಪರಿಸ್ಥಿತಿಯನ್ನು ಗಮನಿಸಿ ನಿರ್ದಿಷ್ಟ ಪರೀಕ್ಷಾ ದಿನಾಂಕವನ್ನು ನಂತರದಲ್ಲಿ ಘೋಷಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ‘ಅನುಭವವಿಲ್ಲದ ಸಚಿವ… ಹಠಮಾರಿ ಸಿಎಂ.. ಈಶ್ವರಪ್ಪ ಖಾತೆಯ ಹಣ ಕಾಣತ್ತೆ, ಸಮಸ್ಯೆ ಗೊತ್ತಾಗಲ್ವಾ?’
“ಸಿಬಿಎಸ್ಇ, ಐಸಿಎಸ್ಸಿ, ಐಬಿ, ಕೇಂಬ್ರಿಡ್ಜ್ ಬೋರ್ಡ್ಗಳಿಗೂ ನಾವು ಅವರ ಪರೀಕ್ಷಾ ದಿನಾಂಕಗಳನ್ನು ಮತ್ತೆ ಪರಿಗಣಿಸುವಂತೆ ಪತ್ರ ಬರೆಯಲಿದ್ದೇವೆ” ಎಂದು ಸಚಿವೆ ಗಾಯಕ್ವಾಡ್ ಹೇಳಿದ್ದಾರೆ. (ಏಜೆನ್ಸೀಸ್)
ಹತ್ತಿಯ ಬದಲಿಗೆ ಬಳಸಿದ ಮಾಸ್ಕ್ಗಳನ್ನು ತುಂಬುತ್ತಿದ್ದ ಮ್ಯಾಟ್ರೆಸ್ ಫ್ಯಾಕ್ಟರಿ !