ಬೆಂಗಳೂರು/ನವದೆಹಲಿ : ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿ ಚಟುವಟಿಕೆಗಳಲ್ಲಿ ಭಾಗಿಯಾಗುವ ಬಯಕೆ ಹೊಂದಿರುವ ಯುವಜನರಿಗೆ ಐಐಎಂಗಳಲ್ಲಿ ವಿಶೇಷ ತರಬೇತಿ ಪಡೆಯುವ ಅವಕಾಶ ಲಭ್ಯವಾಗಿದೆ. ಕೂಡಲೇ ಮಹಾತ್ಮ ಗಾಂಧಿ ನಾಷನಲ್ ಫೆಲೋಶಿಪ್ ಪಡೆಯಲು ಅರ್ಜಿ ಹಾಕಿ ಈ ವಿನೂತನ ಕೋರ್ಸ್ನ ಪ್ರಯೋಜನ ಪಡೆಯಬಹುದು.
ಜಿಲ್ಲಾ ಮಟ್ಟದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಕೌಶಲ್ಯ ಯೋಜನೆಯನ್ನು ಉತ್ತೇಜಿಸಲು ರೂಪಿಸಿರುವ ಈ ಎರಡು ವರ್ಷಗಳ ಬ್ಲೆಂಡೆಡ್ ಪ್ರೋಗ್ರಾಂನಲ್ಲಿ, ಪ್ರಾಯೋಗಿಕ ಕೆಲಸದೊಂದಿಗೆ ಐಐಎಂಗಳಲ್ಲಿ ತರಗತಿಗಳನ್ನು ತೆಗೆದುಕೊಳ್ಳುವ ವಿನೂತನ ಅವಕಾಶವಿದೆ. ಅಭಿವೃದ್ಧಿಯ ಪ್ರಕ್ರಿಯೆಯನ್ನು ವಿಕೇಂದ್ರೀಕರಿಸಲು ಸಹಾಯಕವಾಗಿ ಈ ಫೆಲೋಶಿಪ್ಗೆ ಆಯ್ಕೆಯಾದವರಿಗೆ ಐಐಎಂ ಫಾಕಲ್ಟಿಯ ಮಾರ್ಗದರ್ಶನದಲ್ಲಿ ಅಕಾಡೆಮಿಕ್ ಇನ್ಪುಟ್ಸ್ ನೀಡಲಾಗುವುದು. ಜೊತೆಯಲ್ಲೇ ಡಿಸ್ಟ್ರಿಕ್ಟ್ ಇಮ್ಮರ್ಷನ್ಸ್ ಅಡಿ ಪ್ರಾಯೋಗಿಕ ಅನುಭವ ಪಡೆಯಬಹುದು.
ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಗಾರಿಕೆ ಸಚಿವಾಲಯ ಮತ್ತು ಒಂಭತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್(ಐಐಎಂ)ಗಳು ಜಂಟಿಯಾಗಿ ಈ ಫೆಲೋಶಿಪ್ಗೆ ಅರ್ಜಿ ಆಹ್ವಾನಿಸಿವೆ. ಬೆಂಗಳೂರಿನ ಐಐಎಂ ಅಡ್ಮಿಷನ್ ಪ್ರಕ್ರಿಯೆಯನ್ನು ನಿರ್ವಹಿಸುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಮಾರ್ಚ್ 27 ರವರೆಗೆ ಅಧಿಕೃತ ವೆಬ್ಸೈಟ್ ಆದ iimb.ac.in/mgnf ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿದಾರರು 21 ರಿಂದ 30 ವರ್ಷ ವಯಸ್ಸಿನ ಭಾರತೀಯ ನಾಗರೀಕರಾಗಿರಬೇಕು. ಯಾವುದೇ ಗುರುತಿಸಲ್ಪಟ್ಟ ವಿವಿಯಿಂದ ಪದವಿ ಹೊಂದಿರಬೇಕು. ಜಿಲ್ಲಾ ಮಟ್ಟದಲ್ಲಿ ಕಾರ್ಯ ನಿರ್ವಹಿಸಲು ಅಗತ್ಯವಾಗಿ ಆಯಾ ರಾಜ್ಯದ ಅಧಿಕೃತ ಭಾಷೆಯಲ್ಲಿ ಪರಿಣತಿ ಹೊಂದಿರಬೇಕು. ಮಾರ್ಚ್ 27 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. (ಏಜೆನ್ಸೀಸ್)
“ಹಿಂದೆ ಮಹಿಳೆಯರ ಸೊಂಟ ನಂಬರ್ 8 ರಂತೆ ಇರುತ್ತಿತ್ತು, ಈಗ ಡ್ರಮ್ಮಿನಂತಾಗಿದ್ದಾರೆ” ಎಂದ ಡಿಎಂಕೆ ಅಭ್ಯರ್ಥಿ