ಬೆಂಗಳೂರು: ‘ಸೆಂಚುರಿ ಸ್ಟಾರ್’ ಶಿವರಾಜಕುಮಾರ್ ಮತ್ತು ನಿರ್ದೇಶಕ ಎ. ಹರ್ಷ ಕಾಂಬಿನೇಷನ್ನ ನಾಲ್ಕನೇ ಸಿನಿಮಾದ ಶೀರ್ಷಿಕೆ ಶಿವರಾತ್ರಿ ಹಬ್ಬದ ಪ್ರಯುಕ್ತ ಬಹಿರಂಗವಾಗಿದೆ.
‘ಭಜರಂಗಿ’, ‘ವಜ್ರಕಾಯ’ ಮತ್ತು ‘ಭಜರಂಗಿ 2’ ಬಳಿಕ ‘ವೇದ’ ಚಿತ್ರದ ಮೂಲಕ ಈ ನಟ ಮತ್ತು ನಿರ್ದೇಶಕರು ಒಂದಾಗಿದ್ದಾರೆ. ಬರೀ ಶೀರ್ಷಿಕೆ ಅಷ್ಟೇ ಅಲ್ಲ ಚಿತ್ರದ ಫಸ್ಟ್ಲುಕ್ ಸಹ ರಿವೀಲ್ ಆಗಿದೆ. ಹಿಂದೆಂದೂ ಕಾಣದ ಅವತಾರದಲ್ಲಿ ಶಿವರಾಜಕುಮಾರ್ ಕಾಣಿಸಿಕೊಂಡಿದ್ದು, ಗಡ್ಡದಾರಿಯ ಲುಕ್ ಕುತೂಹಲ ಮೂಡಿಸಿದೆ. 1960ರ ಕಾಲಘಟ್ಟದಲ್ಲಿ ನಡೆದ ಘೋರ ಕಥೆ ಈ ಚಿತ್ರದ್ದಾಗಿರಲಿದೆ ಎಂಬ ಸುಳಿವನ್ನೂ ನಿರ್ದೇಶಕರು ಪೋಸ್ಟರ್ನಲ್ಲಿ ನೀಡಿದ್ದಾರೆ.
ಶೀರ್ಷಿಕೆ ಅನಾವರಣ, ಫಸ್ಟ್ ಲುಕ್ ಬಿಡುಗಡೆ ಒಂದೆಡೆಯಾದರೆ ಮತ್ತೊಂದು ವಿಶೇಷ ಸುದ್ದಿಯನ್ನೂ ಶಿವಣ್ಣ ನೀಡಿದ್ದಾರೆ. ಅದೇನೆಂದರೆ, ‘ಗೀತಾ ಪಿಕ್ಚರ್ಸ್’ ಹೆಸರಿನ ಹೊಸ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದು, ಆ ಪ್ರೊಡಕ್ಷನ್ಸ್ನಲ್ಲಿ ‘ವೇದ’ ಚಿತ್ರ ನಿರ್ವಣವಾಗಲಿದೆ! ಈಗಾಗಲೇ ‘ಶ್ರೀಮುತ್ತು ಸಿನಿ ಸರ್ವೀಸಸ್’ ಹೆಸರಿನ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಶಿವರಾಜಕುಮಾರ್ ಹೊಂದಿದ್ದಾರೆ.
ಅದರ ಅಡಿಯಲ್ಲಿ ಧಾರಾವಾಹಿ ಮತ್ತು ವೆಬ್ಸಿರೀಸ್ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗ ‘ಗೀತಾ ಪಿಕ್ಚರ್ಸ್’ ಸಂಸ್ಥೆ ಶುರು ಮಾಡಿ ‘ವೇದ’ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಸ್ವಾಮಿ ಗೌಡ ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆ ಈ ಚಿತ್ರಕ್ಕಿದೆ.
ಶ್ರದ್ಧಾ ಕಪೂರ್ ಹಾಕಿರುವ ಈ ಬಿಕಿನಿ ರೇಟ್ ಕೇಳಿದ್ರೆ ನೀವು ಹೌಹಾರೋದು ಗ್ಯಾರಂಟಿ!