More

    9 ಲಕ್ಷ ರೂಪಾಯಿಗೆ 9 ಕೆಜಿ ಬಂಗಾರ ಕೊಡ್ತಾರೆ! ನಿಮ್ಗೂ ಬೇಕಿದ್ರೆ ಇಲ್ನೋಡಿ

    ವಿಜಯಪುರ: ಬಂಗಾರದ ಬೆಲೆ ಗಗನಕ್ಕೇರಿದ್ದರೂ ಜನರಿಗೆ ಅದರ ಮೇಲಿನ ವ್ಯಾಮೋಹ ಎಳ್ಳಷ್ಟೂ ಕಡಿಮೆ ಆಗುತ್ತಿಲ್ಲ. ಇನ್ನು ಕಡಿಮೆ ಬೆಲೆಗೆ ಕೆಜಿ ಗಟ್ಟಲೇ ಬಂಗಾರ ಸಿಗುತ್ತೆ ಅಂದ್ರೆ ಬಿಡ್ತಾರಾ?

    ಒಂಬತ್ತು ಲಕ್ಷ ರೂ.ಗೆ 9 ಕೆಜಿ ಚಿನ್ನದ ಗಟ್ಟಿ ನೀಡುವುದಾಗಿ ಮಹಾರಾಷ್ಟ್ರ ಮೂಲದ ದಂಪತಿ ಜತೆ ತಂಡವೊಂದು ಮಾತುಕತೆ ನಡೆಸಿತ್ತು. ಚಿನ್ನದ ಆಸೆಗೆ ಸಿಕ್ಕ ಆ ದಂಪತಿ ಹೈದರಾಬಾದ್​ನಿಂದ ವಿಜಯಪುರ ಜಿಲ್ಲೆಯ ದೇವಣಗಾಂವ ಚಿನ್ನ ಪಡೆಯಲೆಂದು 9 ಲಕ್ಷ ರೂ. ನಗದು ತೆಗೆದುಕೊಂಡು ಬಂದಿತ್ತು. ಆದರೆ, ಅಲ್ಲಿ ನಡೆದಿದ್ದೇ ಬೇರೆ. ಇದನ್ನೂ ಓದಿರಿ ಸಚಿವ ಸುರೇಶ್ ಕುಮಾರ್ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು!

    ಚಿನ್ನ ಖರೀದಿಯ ಮಾತುಕತೆಯಂತೆ ಸುನಿಲ್ ಮತ್ತು ರಾಜಶ್ರೀ ಜಾಧವ ದಂಪತಿ ಜೂ.12ರಂದು ದೇವಣಗಾಂವಕ್ಕೆ ಆಗಮಿಸಿತ್ತು. ಚಿನ್ನದ ಮೇಲಿನ ಆಸೆಯನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು ದಂಪತಿ ಬಳಿಯಿದ್ದ 9 ಲಕ್ಷ ರೂ. ನಗದು, ಮೈಮೇಲಿದ್ದ ಚಿನ್ನಾಭರಣ, ಮೊಬೈಲ್ ದರೋಡೆ ಮಾಡಿ ಪರಾರಿಯಾಗಿದ್ದರು. ದರೋಡೆ ಕೃತ್ಯದಲ್ಲಿ 9 ಜನರು ಪಾಲ್ಗೊಂಡಿದ್ದರು.

    ಈ ಬಗ್ಗೆ ಠಾಣೆಯಲ್ಲಿ ದಂಪತಿ ದೂರು ದಾಖಲಿಸಿದ್ದರು. ಕಾರ್ಯಾಚರಣೆ ನಡೆಸುತ್ತಿದ್ದ ಆಲಮೇಲ ಹಾಗೂ ಇಂಡಿ ಪೊಲೀಸರ ತಂಡದ ಕೈಗೆ ಹಿರೇಬೇವನೂರ ಬಳಿ ಮೂವರು ದರೋಡೆಕೋರರು ಸಿಕ್ಕಿ ಬಿದ್ದಿದ್ದು, ಅವರಿಂದ 8.35 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ.

    ಇದನ್ನೂ ಓದಿರಿ ಇಂಚರ ಗೋವಿಂದರಾಜುಗೆ ಜೆಡಿಎಸ್​ ಟಿಕೆಟ್​ ಕೊಟ್ಟಿದ್ದರ ಹಿಂದಿದೆ ಮಾಸ್ಟರ್​ ಪ್ಲ್ಯಾನ್​…

    ಇಂಡಿ ತಾಲೂಕಿನ ಹಿರೇಬೇವನೂರ ಗ್ರಾಮದ ಸಾಯಬಣ್ಣ ಹರಣಶಿಕಾರಿ(42), ಪರಮಾನಂದ ಹರಣಶಿಕಾರಿ(23), ಕಿಟ್ಯಾ ಹರಣಶಿಕಾರಿ ಬಂಧಿತರು. ಇನ್ನೂ 6 ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

    ವಿಜಯಪುರ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ಇಂಡಿ ಡಿವೈಎಸ್ಪಿ ಎಂ.ಬಿ. ಸಂಕದ, ಸಿಪಿಐಗಳಾದ ಸತೀಶಕುಮಾರ ಎಸ್. ಕಾಂಬಳೆ, ಚಿದಂಬರ್ ವಿ. ಮಡಿವಾಳ, ಆರ್.ಎಸ್. ಬಡದೇಸಾರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

    ಇದನ್ನೂ ಓದಿರಿ 

    ಲೈಂಗಿಕವಾಗಿ ಬಳಸಿಕೊಂಡು ಸಾಲ ಕೊಟ್ಟ, ಆಕೆ ಹಣ ಹಿಂತಿರುಗಿಸಿದರೂ ಮತ್ತೆ ಬರುವಂತೆ ಪೀಡಿಸಿದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts