More

    ಕೆಲವೊಮ್ಮೆ ಚಿಕ್ಕ ಸಂಗತಿಗಳೂ ಅಮೂಲ್ಯವೆನಿಸುತ್ತವೆ. ಅದಕ್ಕೊಂದು ಸಾಕ್ಷಿ ಈ ವಿಡಿಯೋದಲ್ಲಿದೆ.

    “ಕೆಲವೊಮ್ಮೆ ಚಿಕ್ಕ ಪುಟ್ಟ ಸಂಗತಿಗಳು, ಸನ್ನಿವೇಶಗಳೇ ಮನಸ್ಸಿಗೆ ಮುದ ನೀಡುವಂತಿರುತ್ತವೆ.ಅಮೂಲ್ಯವೆನಿಸುತ್ತವೆ” ಎಂದು ಆಗಾಗ ಹೇಳಲಾಗುತ್ತದೆ. ಆ ಮಾತಿಗೆ ಇಲ್ಲೊಂದು ದೃಶ್ಯ ಹೆಚ್ಚು ಪುಷ್ಟಿ ನೀಡುವಂತಿದೆ.
    ಲಾಕ್​​ಡೌನ್​​​​ನಿಂದಾಗಿ ಹೆಚ್ಚು ಭಾದಿತರಾದ ವಲಸೆ ಕಾರ್ಮಿಕರಿಗೆ ಸಹಾಯ ಮಾಡುವುದೂ ತನ್ನ ಜವಾಬ್ದಾರಿ ಎಂದು ಭಾವಿಸಿದ 99 ವರ್ಷದ ಒಬ್ಬ ಅಜ್ಜಿ, ಆ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿಯನ್ನು ಎಷ್ಟು ವ್ಯವಸ್ಥಿತವಾಗಿ ನಿಭಾಯಿಸುತ್ತಿದ್ದಾರೆ ಎಂಬುದನ್ನು ವಿಡಿಯೋ ವಿವರಿಸುತ್ತದೆ.

    99ರ ಈ ಇಳಿ ವಯಸ್ಸಿನಲ್ಲಿಯೂ ಅಜ್ಜಿ ಮುಂಬೈನಲ್ಲಿ ವಲಸೆ ಕಾರ್ಮಿಕರಿಗೆ ನೀಡಲು ಹಾಳೆಯೊಂದರಲ್ಲಿ ಪಲ್ಯ ಮತ್ತು ರೊಟ್ಟಿಯನ್ನು ಸೂಕ್ಷ್ಮವಾಗಿ ಸುತ್ತಿ, ನಂತರ ಅದನ್ನು ಇತರ ಪ್ಯಾಕೆಟ್‌ಗಳೊಂದಿಗೆ ವ್ಯವಸ್ಥಿತವಾಗಿ ಜೋಡಿಸುವುದನ್ನು ಈ ವಿಡಿಯೋ ತೋರಿಸುತ್ತದೆ.
    ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಜಹೀದ್ ಎಫ್. ಇಬ್ರಾಹಿಂ, ಶೀರ್ಷಿಕೆಯಲ್ಲಿ ‘ವಯಸ್ಸಾದ ಮಹಿಳೆ ಮುಂಬೈನ ವಲಸೆ ಕಾರ್ಮಿಕರಿಗಾಗಿ ಆಹಾರ ಪ್ಯಾಕೆಟ್‌ಗಳನ್ನು ತಯಾರಿಸುತ್ತಿದ್ದಾರೆ’ ಎಂದು ಬರೆದಿದ್ದಾರೆ.

    ಇದನ್ನೂ ಓದಿ: ದೇವಾಲಯಗಳಲ್ಲಿ ಶೀಘ್ರ ಭಕ್ತರಿಗೆ ಪ್ರವೇಶ; ಮುಂಜಾಗ್ರತಾ ಕ್ರಮಗಳ ಪಟ್ಟಿ ನೀಡಿದ ಧಾರ್ಮಿಕ ದತ್ತಿ ಇಲಾಖೆ

    ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಅದೆಷ್ಟೋ ಜನರ ಮನದಲ್ಲಿ ಸಂಚಲನ ಮೂಡಿಸಿದೆ. ಇಲ್ಲಿಯವರೆಗೆ 1.6 ಲಕ್ಷಕ್ಕೂ ಹೆಚ್ಚು ವೀಕ್ಷಿಸಲ್ಪಟ್ಟಿದ್ದು, 11,000 ಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 1,700 ಜನ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ವೃದ್ಧೆಗೆ ಗೌರವ ಸೂಚಿಸುವ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬಂದಿದೆ. ಅಜ್ಜಿಗೆ ಗೌರವ ಸೂಚಿಸಿ, ದೇವರು ಇವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘ ಜೀವನವನ್ನು ಕೊಡಲೆಂದು, ಅಷ್ಟೇ ಅಲ್ಲದೆ ವಿಶ್ವದ ಬಹಳಷ್ಟು ಜನರಿಗೆ ಈ ಅಜ್ಜಿ ಸ್ಫೂರ್ತಿಯಾಗಲೆಂದು ಹಾರೈಸಿದ್ದಾರೆ.

    ಟ್ವಿಟರ್​ನಲ್ಲಿ ವಿಕಾಸ ಯಾತ್ರೆ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts