More

    ನಾನು ಇನ್ನೂ ಓದಬೇಕು; ಪ್ರಧಾನಿಯ ಬಳಿ ತನ್ನ ಆಸೆ ಹೇಳಿಕೊಂಡ 98ರ ವೃದ್ಧೆ

    ನವದೆಹಲಿ: ನಿನ್ನೆ (ಮಾ.8) ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ನಾರಿ ಶಕ್ತಿ ಪುರಸ್ಕಾರವನ್ನು ನೀಡಲಾಗಿದೆ. ಈ ಸಮಯದಲ್ಲಿ ಪ್ರಧಾನಿಯೊಂದಿಗೆ ಮಾತನಾಡಿರುವ 98 ವರ್ಷದ ವೃದ್ಧೆಯೊಬ್ಬರು ತಮ್ಮ ಮಹದಾಸೆಯೊಂದನ್ನು ಹಂಚಿಕೊಂಡಿದ್ದಾರೆ.

    ಕೇರಳ ಮೂಲದ ಕಾತ್ಯಾಯಿನಿ ಅಮ್ಮ ಹೆಸರಿನ ವೃದ್ಧೆ ತಮ್ಮ ಇಳಿ ವಯಸ್ಸಿನಲ್ಲಿ ನಾಲ್ಕನೇ ತರಗತಿಯ ಪರೀಕ್ಷೆಯನ್ನು ಬರೆದಿದ್ದು ಶೇ.98 ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ. ತಾನು ವಿದ್ಯಾಭ್ಯಾಸವನ್ನು ಮುಂದುವರಿಸಬೇಕು ಎನ್ನುವ ಆಸೆಯನ್ನು ಆಕೆ ಪ್ರಧಾನಿಯೊಂದಿಗೆ ಹಂಚಿಕೊಂಡಿದ್ದಾರೆ.

    ವಿವಿಧ ಕ್ಷೇತ್ರಗಳಲ್ಲಿ ಅಸಮಾನ್ಯ ಸಾಧನೆ ಮಾಡಿದ ಮಹಿಳೆಯರಿಗೆ ಪ್ರತಿ ವರ್ಷ ವಿಶ್ವ ಮಹಿಳಾ ದಿನದಂದು ಪ್ರತಿಷ್ಠಿತ ನಾರಿ ಶಕ್ತಿ ಪುರಸ್ಕಾರವನ್ನು ನೀಡಲಾಗುತ್ತದೆ. ನಿನ್ನೆ 2020ರ ಸಾಲಿನ ನಾರಿ ಶಕ್ತಿ ಪುರಸ್ಕಾರವನ್ನು ರಾಷ್ಟ್ರಪತಿಗಳಾದ ರಾಮನಾಥ್​​ ಕೋವಿಂದ್​ ಅವರು ಪ್ರದಾನ ಮಾಡಿದ್ದಾರೆ. ದೇಶದ 15 ಮಹಿಳೆಯರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಈ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿ ಮಹಿಳೆಯರಿಗೆ ಶುಭಹಾರೈಸಿದ್ದರು. (ಏಜೆನ್ಸೀಸ್​)

    VIDEO| ಪ್ರಧಾನಿ ಖಾತೆಯಲ್ಲಿ ನಾರಿಶಕ್ತಿಯ ಯಶೋಗಾಥೆ; ಮೋದಿ ಜಾಲತಾಣ ನಿರ್ವಹಿಸಿದ ಸಪ್ತ ಮಾತೃಕೆಯರು, ರಾಷ್ಟ್ರಪತಿ ಭವನದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ

    ಮೋದಿಯವರ ಟ್ವಿಟರ್​ ಮೂಲಕ ಹೋರಾಟದ ಬದುಕನ್ನು ತೆರೆದಿಟ್ಟ ಮಾಳವಿಕಾ ಅಯ್ಯರ್​..! 13ನೇ ವಯಸ್ಸಿನಿಂದ ಇವರಿಟ್ಟ ಹೆಜ್ಜೆಗಳೆಲ್ಲ ಸಾಧನೆಗೆ ಮೆಟ್ಟಿಲುಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts