More

    ಪಾಕ್​ ವಿಮಾನ ದುರಂತದಲ್ಲಿ 97 ಮಂದಿ ಸಾವಿಗೀಡಾದ್ರೂ ಇಬ್ಬರು ಮಾತ್ರ ಬದುಕುಳಿದಿದ್ಹೇಗೆ?

    ನವದೆಹಲಿ: ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಏರ್​ಬಸ್​ ಎ320 ವಿಮಾನವು ಕರಾಚಿಯ ಜನನಿಬಿಡ ಪ್ರದೇಶದಲ್ಲಿ ನಿನ್ನೆ (ಶುಕ್ರವಾರ) ಮಧ್ಯಾಹ್ನ ಪತನಗೊಂಡ ಪರಿಣಾಮ 97 ಮಂದಿ ಸಾವಿಗೀಡಾಗಿದ್ದು, ಇಬ್ಬರು ಪವಾಡವೆಂಬಂತೆ ಬದುಕುಳಿದಿದ್ದಾರೆ.

    ಇದನ್ನೂ ಓದಿ: VIDEO| ಸಿಸಿಟಿವಿಯಲ್ಲಿ ಸೆರೆಯಾಯ್ತು ಪಾಕ್​ ವಿಮಾನ ಪತನದ ಭೀಕರ ದೃಶ್ಯ…!

    ಪಿ.ಕೆ-8303 ನೋಂದಣಿಯ ವಿಮಾನದಲ್ಲಿ 99 ಪ್ರಯಾಣಿಕರು ಇದ್ದರು. ಲಾಹೋರ್​ ವಿಮಾನ ನಿಲ್ದಾಣದಿಂದ ಹೊರಟು ಕರಾಚಿಯ ಜಿನ್ಹಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಶುಕ್ರವಾರ ಮಧ್ಯಾಹ್ನ ದುರ್ಘಟನೆ ಸಂಭವಿಸಿದೆ. ವಿಮಾನ ನಿಲ್ದಾಣದಿಂದ ಒಂದು ಕಿ.ಮೀ ಒಳಗಡೆಯೇ ಈ ಘಟನೆ ನಡೆದಿದ್ದು, ವಿಮಾನ ಲ್ಯಾಂಡ್​ ಆಗುವ ಮುನ್ನ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದ ಕೆಲವೇ ಸೆಕೆಂಡುಗಳಲ್ಲಿ ಆ ಪ್ರದೇಶದ ಸುತ್ತ ದಟ್ಟ ಹೊಗೆ ಆವರಿಸಿತ್ತು.

    ಈ ವೇಳೆ ವಿಮಾನದ ಅವಶೇಷಗಳಡಿ ಸಿಲುಕಿದ್ದ ಇಬ್ಬರನ್ನು ಹೊರತೆಗೆದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಮಾನದ ಪ್ರೀಮಿಯಂ ಎಕನಾಮಿ ಪ್ಯಾಸೆಂಜರ್​ ಆಗಿದ್ದ ಪಂಜಾಬ್​ ಪ್ರಾಂತ್ಯದ ಝಫರ್​ ಮಸೂದ್ ಕೂಡ ಅವರಲ್ಲಿ ಒಬ್ಬರು. ಸಾವಿನ ದವಡೆಯಿಂದ ಪಾರಾಗಿರುವ ಮಸೂದ್​, ಸದ್ಯ ಆಸ್ಪತ್ರೆಯಲ್ಲಿ​ ಚಿಕಿತ್ಸೆ ಪಡೆಯುತ್ತಿದ್ದು, ತಾವು ಚೆನ್ನಾಗಿರುವುದಾಗಿ ತಾಯಿಗೆ ಕರೆ ಮಾಡಿ ತಿಳಿಸಿದ್ದಾರೆ. ನಾನು ಗಾಯಗೊಂಡಿದ್ದೇನಷ್ಟೇ ಪ್ರಜ್ಞೆಯನ್ನು ಕಳೆದುಕೊಂಡಿಲ್ಲ. ಚಿಕಿತ್ಸೆಗೆ ಉತ್ತಮವಾಗೇ ಸ್ಪಂದಿಸುತ್ತಿದ್ದೇನೆ ಎಂದಿದ್ದಾರೆ.

    ಇದನ್ನೂ ಓದಿ: VIDEO: 107 ಜನರಿದ್ದ ಪಾಕಿಸ್ತಾನದ ವಿಮಾನ ಪತನ

    ಮತ್ತೊಬ್ಬ ಪ್ರಯಾಣಿಕ ಅಮ್ಮರ್​ ರಶೀದ್​ ಕೂಡ ಬದುಕುಳಿದಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಅವರ ಕುಟುಂಬ ತಿಳಿಸಿದೆ.

    ಮೊದಲ ಲ್ಯಾಂಡಿಂಗ್ ಪ್ರಯತ್ನವು ರದ್ದಾದ ಬಳಿಕ ವಿಮಾನವೂ ಎರಡನೇ ಲ್ಯಾಂಡಿಂಗ್​ ಪ್ರಯತ್ನಕ್ಕೆ ಮುಂದಾಗಿತ್ತು ಎಂದು ತಿಳಿದುಬಂದಿದೆ. ವಿಮಾನ ಪತನಕ್ಕೂ ಮುನ್ನ ಓರ್ವ ಪೈಲಟ್​ ತನ್ನ ಹೇಳಿಕೆಯನ್ನು ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್​ನಲ್ಲಿ ದಾಖಲಿಸಿದ್ದು, ವಿಮಾನದ ಎರಡು ಇಂಜಿನ್​ಗಳು ಸ್ಥಗಿತಗೊಂಡಿರುವುದನ್ನು ಏರ್​ ಟ್ರಾಫಿಕ್​ ನಿರ್ವಾಹಕರಿಗೆ ತಿಳಿಸಿದ್ದಾರೆ.

    ಪ್ರತ್ಯಕ್ಷದರ್ಶಿಯೊಬ್ಬರು ಹೇಳುವಂತೆ ಮೊದಲು ಮೊಬೈಲ್​ ಟವರ್​ಗೆ ಡಿಕ್ಕಿ ಹೊಡೆದ ವಿಮಾನ ನಂತರ ಮಲಿರ್​ನಲ್ಲಿರುವ ಮಾಡೆಲ್​ ಕಾಲನಿ ಬಳಿಯಿರುವ ಜಿನ್ಹಾ ಗಾರ್ಡನ್​ ಏರಿಯಾ ಕಟ್ಟಡವೊಂದರ ಮೇಲೆ ಪತನವಾಯಿತು. ಇದರಿಂದ ಸಮೀಪದ ಅನೇಕ ಮನೆಗಳಿಗೆ ಬೆಂಕಿ ತಗುಲಿ ಹಾನಿಯಾಗಿದ್ದು, ಸಾಕಷ್ಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವಿವರಿಸಿದ್ದಾರೆ.

    ಇದನ್ನೂ ಓದಿ: ದೇಶಿಯ ವಿಮಾನಯಾನ ಟಿಕೆಟ್​ ದರಗಳು ಫಿಕ್ಸ್​, ಬೆಂಗಳೂರಿಂದ ಎಲ್ಲೆಲ್ಲಿಗೆ ಎಷ್ಟೆಷ್ಟು ದರ ವಿವರ ಇಲ್ಲಿದೆ ನೋಡಿ

    ಕರೊನಾ ವೈರಸ್​ ಲಾಕ್​ಡೌನ್​ನಿಂದ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಸ್ಥಬ್ಧವಾಗಿದ್ದ ವಿಮಾನ ಹಾರಾಟ ಮರು ಆರಂಭವಾದ ಒಂದೇ ವಾರದಲ್ಲಿ ಈ ದುರ್ಘಟನೆ ಸಂಭವಿಸಿದೆ. (ಏಜೆನ್ಸೀಸ್​)

    ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೆ ನೋಟಿಸ್ ನೀಡಿ ಶಾಕ್​ ಕೊಟ್ಟ ಜಿಲ್ಲಾಡಳಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts