More

    ಈ ಜಿಲ್ಲೆಯಲ್ಲಿ ಕೋವಿಡ್ ಆಸ್ಪತ್ರೆಗಳೀಗ ಭಣಭಣ: ಶೇಕಡ 95ರಷ್ಟು ಬೆಡ್‌ಗಳು ಖಾಲಿ!

    ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕರೊನಾ ಪ್ರಮಾಣ ಇನ್ನೂ ಆತಂಕದ ಸ್ಥಿತಿಯಲ್ಲಿಯೇ ಇದ್ದರೂ ಇನ್ನು ಹಲವಾರು ಜಿಲ್ಲೆಗಳಲ್ಲಿ 2ನೇ ಅಲೆಯ ಆರ್ಭಟಕ್ಕೆ ಈಗಾಗಲೇ ಬ್ರೇಕ್ ಬಿದ್ದಿದೆ. ಪ್ರತಿದಿನ ವರದಿಯಾಗುವ ಪ್ರಕರಣಗಳು ಕಡಿಮೆಯಾಗುತ್ತ ಸಾಗಿವೆ. ಪಾಸಿಟಿವಿಟಿ ದರ ಕೂಡ ನಿಧಾನವಾಗಿ ಕಡಿಮೆಯಾಗುತ್ತಿದೆ.

    ಹೀಗೆ ದೈನಂದಿನ ಪ್ರಕರಣಗಳು ಮತ್ತು ಪಾಸಿಟಿವಿಟಿ ದರ ಕಡಿಮೆಯಾಗಿರುವ ಜಿಲ್ಲೆಗಳಲ್ಲಿ ಪ್ರಮುಖವಾದದ್ದು ಬೀದರ್ ಜಿಲ್ಲೆ. ಈ ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಕೋವಿಡ್ ಆಸ್ಪತ್ರೆಗಳು ಬಹುತೇಕ ಖಾಲಿಯಾಗಿದ್ದು, ಒಂದು ತಿಂಗಳ ಹಿಂದೆ ಇದ್ದಂತಹ ಪರಿಸ್ಥಿತಿ ಇದೀಗ ಸಂಪೂರ್ಣ ಬದಲಾಗಿದೆ. ಏಪ್ರಿಲ್‌ನಿಂದ ಮೇ ತಿಂಗಳ ಮೂರನೇ ವಾರದವರೆಗೆ ಬೀದರ್ ಜಿಲ್ಲೆ ಕರೊನಾರ್ಭಟಕ್ಕೆ ಅಕ್ಷರಶಃ ನಲುಗಿತ್ತು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಸಮರ್ಪಕ ಬೆಡ್ ಸಿಗುತ್ತಿರಲಿಲ್ಲ. ಆಕ್ಸಿಜನ್, ವೆಂಟಲೇಟರ್ ಹಾಸಿಗೆಗಂತೂ ಇನ್ನಿಲ್ಲದ ಪರದಾಟ ನಡೆದಿತ್ತು.

    ಆದರೀಗ ಪರಿಸ್ಥಿತಿ ಉಲ್ಟಾ ಆಗಿದೆ. ಜಿಲ್ಲೆಯ ಖಾಸಗಿ ಕೋವಿಡ್ ಆಸ್ಪತ್ರೆಗಳು, ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳ ಬಹುತೇಕ ಬೆಡ್‌ಗಳು ಖಾಲಿಯಾಗಿವೆ. ಬ್ರಿಮ್ಸ್ ಕೋವಿಡ್ ಆಸ್ಪತ್ರೆಯಲ್ಲೇ ಶೇ. 95 ಹಾಸಿಗೆ ಖಾಲಿ ಇವೆ. ಸದ್ಯ ಕೇವಲ 111 ಬೆಡ್‌ಗಳಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

    ರಾಜ್ಯದಲ್ಲಿ ಇಳಿಯುತ್ತಿದ್ದ ಸೋಂಕು ಮತ್ತೆ ಏರಿತು!; ಆತಂಕ ಹುಟ್ಟಿಸಿದ ಪಾಸಿಟಿವಿಟಿ ರೇಟ್…

    ಕೊವ್ಯಾಕ್ಸಿನ್‌ಗಿಂತ ಕೋವಿಶೀಲ್ಡ್ ಲಸಿಕೆ ಬೆಸ್ಟ್ ಅಂತೆ!; ಯಾಕೆ ಅಂತ ಹೇಳುತ್ತೆ ಈ ಅಧ್ಯಯನ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts