More

    ನಗರದಲ್ಲಿ ಹಿರಿಯರಿಂದ ಶೇ.93 ರಷ್ಟು ಅಂಚೆ ಮತ ಚಲಾವಣೆ

    ಬೆಂಗಳೂರು: ಮಹಾನಗರದಲ್ಲಿ 85 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲರ ಅಂಚೆ ಮತದಾನ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದ್ದು, ಮಂಗಳವಾರದವರೆಗೆ ಶೇ. 93.75 ಪ್ರಮಾಣದಷ್ಟು ಮತ ಚಲಾವಣೆಯಾಗಿದೆ.

    ನಾಲ್ಕನೇ ದಿನವಾದ ಬುಧವಾರ ನಗರ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಸಿಬ್ಬಂದಿ ನೋಂದಾಯಿತ ಹಿರಿಯ ಮತದಾರರ ಮನೆಗೆ ತೆರಳಿ ಮತ ಹಾಕಿಸಿಕೊಂಡರು. ಒಟ್ಟು 7,858 ನೋಂದಾಯಿತರ ಪೈಕಿ ಈವರೆಗೆ 7,367 ಮಂದಿ ಅಂಚೆ ಮತ ಹಾಕಿದ್ದಾರೆ. ಐದು ಲೋಕಸಭಾ ಕ್ಷೇತ್ರಗಳಲ್ಲಿ ಹರಡಿಕೊಂಡಿರುವ ನಗರದ ಅಸೆಂಬ್ಲಿ ಕ್ಷೇತ್ರಗಳಲ್ಲಿ ಇನ್ನೂ 491 ಮಂದಿ ಮಾತ್ರ ಮತ ಚಲಾವಣೆ ಮಾಡಬೇಕಿದೆ. ಹಿರಿಯ ಮತದಾನಕ್ಕೆ ಗುರುವಾರ (ಏ.18) ಕೊನೆಯ ದಿನವಾಗಿರುತ್ತದೆ.

    ಪ್ರಸ್ತುತ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಶೇ. 93.46, ದಕ್ಷಿಣ ಕ್ಷೇತ್ರದಲ್ಲಿ 95.19, ಸೆಂಟ್ರಲ್ ಕ್ಷೇತ್ರದಲ್ಲಿ ಶೇ.93.06, ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಶೇ. 93.05 ಮತ ಚಲಾವಣೆಯಾಗಿದೆ ಎಂದು ನಗರ ಜಿಲ್ಲಾ ಚುನಾವಣಾಧಿಕಾರಿಯವರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts