More

    VIDEO| ನೃತ್ಯಗಾತಿಗೆ ಕೇವಲ 91 ವರ್ಷ, ಈ ವಿಡಿಯೋ ನೋಡಿದರೆ ವಯಸ್ಸು ಎನ್ನುವುದು ಬರಿ ನಂಬರ್​ ಮಾತ್ರ ಅನ್ನಿಸದೇ ಇರದು!

    60 ಆಗುತ್ತಿದ್ದಂತೆ ಕೆಲವರು ನಮ್ಮದೇನು ಎಲ್ಲ ಮುಗಿಯಿತು. ಜೀವನ ನಿಂತೇ ಬಿಟ್ಟಿದೆ ಎನ್ನುತ್ತಾರೆ. ಕೆಲವೊಮ್ಮೆ ದೇಹ ಸಹಕರಿಸಲ್ಲ. ಆದರೆ ಕೆಲವೊಮ್ಮೆ ಇವರಿಗೆ ಮನಸ್ಸಿರುವುದಿಲ್ಲ!

    ಫೇಸ್​ಬುಕ್​ನಲ್ಲಿ ಅಮೆರಿಕದ ಗೋಲ್ಡನ್​ ಏಜ್​ ಹೊಮ್​ ಹೆಲ್ತ್​ ಕೇರ್​ ಹಂಚಿಕೊಂಡಿರುವ ಈ ವಿಡಿಯೋ ನೋಡಿದರೆ ಅಯ್ಯೋ ವಯಸ್ಸಾಯ್ತು ಎನ್ನುವ ಮನಸ್ಥಿತಿ ಬದಲಾಗುವುದು ಖಂಡಿತ. ಪೆಪ್ಪಿ ಹಾಡಿಗೆ ಹೆಜ್ಜೆ ಹಾಕಿರುವ 91 ವರ್ಷದ ಜೂಲಿಯ ಅವರ ವಿಡಿಯೋ ಇದು.

    ಬಹುದಿನಗಳಿಂದ ಪಿಸಿಯೋಥೆರಪಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೂಲಿಯ, ಒಂದು ದಿನ ವಾಕರ್​ ತೆಗೆದಿಟ್ಟು ಶೂ ಹಾಕಿಕೊಂಡು ಡಾನ್ಸ್​ ಮಾಡಲು ನಿರ್ಧರಿಸಿದ್ದರು.

    ಜೂಲಿಯ ಅವರು, ಇಲ್ಲಿ ತುಂಬ ದಿನಗಳಿಂದ ಉಳಿದುಕೊಂಡಿದ್ದಾರೆ. ಕೆಲ ದಿನಗಳಿಂದ ಇವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ವಾಕರ್​ನ್ನು ಎಸೆದು ಶೂ ತೊಟ್ಟರು. “ಸಂತೋಷ ಎನಿಸುತ್ತಿದೆ. ಕುಣಿದಾಡಬೇಕು. ನಾನು ನನ್ನ ಜೀವನವನ್ನು ತುಂಬ ಪ್ರೀತಿಸುತ್ತೇನೆ” ಎಂದು ತಿಳಿಸಿದರು ಎಂದು ಫೇಸ್​ ಬುಕ್​ನಲ್ಲಿ ಬರೆದುಕೊಂಡಿದೆ ಆ ಗೋಲ್ಡನ್​ ಏಜ್​ ಹೊಮ್​.

    ಅಲ್ಲದೆ, “ನೀವು ಮಾಡುವ ನೃತ್ಯಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಬದಲಿಗೆ ನಿನ್ನ ಜತೆ ನಾವು ಭಾಗವಹಿಸುತ್ತೇವೆ ಎಂದೆವು. ಅದರ ವಿಡಿಯೋವನ್ನು ಇಲ್ಲಿ ಹಾಕಿದ್ದೇವೆ. ಮತ್ತು ಜುಲಿಯ ವಯಸ್ಸು ಇನ್ನು 91 ಎಂದು ಬರೆದಿದ್ದೇವೆ ಗಮನಿಸಿ” ಎಂದು ತಿಳಿಸಿ ವಿಡಿಯೋ ಹಂಚಿಕೊಳ್ಳಲಾಗಿದೆ.

    ಜನವರಿ 15ರಂದು ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಈವರೆಗೆ 81,500 ಸಾವಿರ ಮಂದಿ ವೀಕ್ಷಿಸಿದ್ದಾರೆ. ಅಲ್ಲದೆ ಅದೆಷ್ಟೋ ನೆಟ್ಟಿಗರು ಆಕೆಯ ಆರೋಗ್ಯ ಮತ್ತು ಸಂತೋಷಕ್ಕೆ ಹಾರೈಸಿದ್ದಾರೆ.

    “91ರಲ್ಲಿ ಈ ನೃತ್ಯ ಅದ್ಭುತ….” ಎಂದು ಒಬ್ಬರು ಕಮೆಂಟಿಸಿದರೆ, ಇನ್ನೊಬ್ಬರು, “ಲವ್​ ಇಟ್​, ಅವರು ಅದೆಷ್ಟು ಸಂತಸ ಮತ್ತು ಆರೋಗ್ಯದಿಂದ್ದಾರೆ… ” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು “ಇಂತಹ ವಿಡಿಯೋ ಹಂಚಿಕೊಂಡು ನಮ್ಮ ಸಂತಸವನ್ನು ಹೆಚ್ಚಿಸಿದ್ದಕ್ಕೆ ಧನ್ಯವಾದಗಳು. ಜುಲಿಯ ಅವರಿಗೆ ಒಳ್ಳೆಯದಾಗಲಿ” ಎಂದಿದ್ದಾರೆ. ಈ ನೃತ್ಯ ನೋಡಿದರೆ ನಿಮಗೆ ಏನನಿಸುತ್ತದೆ?! (ಏಜೆನ್ಸೀಸ್​)

    When they say they ‘celebrate life’ at Magnolia Springs Southpointe, boy do they mean it! Miss Julia is a long time resident, who recently returned from a hospital stay and is graduating from therapy services with Golden Age. She’s ditched the walker for her dancing shoes, and this morning she said, “You’ve got me feeling so good, I want to dance! Do you mind if I do the jitterbug to celebrate? I’m loving life!” Of course we don’t mind, Julia! We love it and we’re all celebrating with you! Did we mention she’s 91 years young?

    Golden Age Home Health Care, LLC ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಜನವರಿ 15, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts