More

    ಲಾಕ್​ಡೌನ್​ನಿಂದಾಗಿ ಹಾಸ್ಟೆಲ್​ನಲ್ಲೇ ಉಳಿದ 9 ವರ್ಷದ ಬಾಲಕ ಅನುಭವಿಸಿದ ನರಕಯಾತನೆ…!

    ದೆಹ್ರಾಡೂನ್​: ಕೋವಿಡ್​-19 ಪಿಡುಗು ಹೆಚ್ಚಾಗುತ್ತಿರುವಂತೆ ಪ್ರಧಾನಿ ನರೇಂದ್ರ ಮೋದಿ ಮಾರ್ಚ್​ 24ರ ರಾತ್ರಿ ದಿಢೀರನೆ ದೇಶಾದ್ಯಂತ ಲಾಕ್​ಡೌನ್​ ಘೋಷಿಸಿದರು. ಇದರಿಂದಾಗಿ ತಮ್ಮ ತಮ್ಮ ಊರಿಗೆ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲದೆ ಮಕ್ಕಳಾದಿಯಾಗಿ ಎಲ್ಲರೂ ಭಾರಿ ಸಂಕಷ್ಟ ಅನುಭವಿಸಿದರು.

    ಅವರೆಲ್ಲರಂತೆ 3ನೇ ತರಗತಿಯ ವಿದ್ಯಾರ್ಥಿಯಾಗಿದ್ದ 9 ವರ್ಷದ ಬಾಲಕ ಕೂಡ ದೆಹ್ರಾಡೂನ್​ನ ವಸತಿಯುತ ಶಾಲೆಯ ವಿದ್ಯಾರ್ಥಿನಿಲಯದಲ್ಲೇ ಉಳಿದುಕೊಳ್ಳುವ ಅನಿವಾರ್ಯತೆಗೆ ಸಿಲುಕಿಕೊಂಡ. ಉತ್ತರ ಪ್ರದೇಶದಲ್ಲಿದ್ದ ಬಾಲಕನ ಪಾಲಕರು ದೆಹ್ರಾಡೂನ್​ಗೆ ಬಂದು ಮಗನನ್ನು ಕರೆದೊಯ್ಯುವುದು ಸಾಧ್ಯವಾಗದೇ ಇದ್ದದ್ದು ಇದಕ್ಕೆ ಕಾರಣ.

    ಆದರೆ, ಒಂದು ತಿಂಗಳ ಹಿಂದೆ ಹಾಸ್ಟೆಲ್​ನ ವಾರ್ಡನ್​ ಈ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದ. ಅಲ್ಲದೆ, ಬಾಲಕನ ಮೇಲೆ ಅತ್ಯಾಚಾರವನ್ನೂ ಎಸಗಿದ್ದ. ತಾನು ನರಕಯಾತನೆ ಅನುಭವಿಸುತ್ತಿದ್ದರೂ ಅದನ್ನು ಪಾಲಕರಿಗಾಗಲಿ ತನ್ನ ಸಹಪಾಠಿಗಳಿಗಾಗಿ ತಿಳಿಸಲಾಗದೆ ಅಸಹಾಯಕ ಸ್ಥಿತಿ ಆ ಬಾಲಕನದ್ದಾಗಿತ್ತು.

    ಇದನ್ನೂ ಓದಿ: ಕೋಟಿ ವೇತನ ಪಡೆದ ಶಿಕ್ಷಕಿ ನೇಮಕಾತಿಗೆ ಕೊಟ್ಟಿದ್ದಳು 5 ಲಕ್ಷ ರೂ. ಲಂಚ

    ಆದರೆ ಇತ್ತೀಚೆಗೆ ಅನ್​ಲಾಕ್​ 1.0 ಜಾರಿಗೆ ಬಂದ ಬಳಿಕ ಬಾಲಕನನ್ನು ಕರೆದೊಯ್ಯಲು ಪಾಲಕರು ಶನಿವಾರ ದೆಹ್ರಾಡೂನ್​ಗೆ ಬಂದಾಗ, ಆತ ತಾನು ಅನುಭವಿಸಿದ ನರಕಯಾತನೆಯನ್ನು ಪಾಲಕರಿಗೆ ತಿಳಿಸಿದ್ದ. ಈತನ ಹೇಳಿಕೆಯನ್ನು ಆಧರಿಸಿ ಶನಿವಾರ ಸಂಜೆ ವಾರ್ಡನ್​ ವಿರುದ್ಧ ರಾಯ್ಪುರ ಪೊಲೀಸ್​ ಠಾಣೆಯಲ್ಲಿ ಅತ್ಯಾಚಾರದ ಪ್ರಕರಣ ದಾಖಲಿಸಿದರು. ಅದರನ್ವಯ ಪೊಲೀಸರು ವಾರ್ಡನ್​ನನ್ನು ಬಂಧಿಸಿದ್ದಾರೆ.

    ಇದೇ ಮೊದಲಲ್ಲ: ಈ ಬಾಲಕನ ಮೇಲೆ ಅತ್ಯಾಚಾರ ನಡೆದದ್ದು ಇದೇ ಮೊದಲಲ್ಲ. ಈ ಹಿಂದೆ ಶಾಲೆಯ ವಿದ್ಯಾರ್ಥಿಯೊಬ್ಬ ಈ ಬಾಲಕನ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದ. ಈ ವಿಷಯ ಪಾಲಕರ ಗಮನಕ್ಕೆ ಬರುತ್ತಲೇ ಆ ಬಾಲಕನ ವಿರುದ್ಧ ಶಾಲೆಯ ಆಡಳಿತ ಮಂಡಳಿಯ ನಿರ್ದೇಶಕರಲ್ಲಿ ದೂರು ದಾಖಲಿಸಿದ್ದರು. ಆದರೆ, ಬಾಲಕನಿಗೆ ಸಾಂತ್ವನ ಹೇಳುವ ಬದಲು ಆಡಳಿತ ಮಂಡಳಿಯ ನಿರ್ದೇಶಕರು ಬಾಲಕನನ್ನೇ ನಿಂದಿಸಿದ್ದರು ಎನ್ನಲಾಗಿದೆ.

    ಅನುಕಂಪದ ಆಧಾರದಲ್ಲಿ ಕೆಲಸ ಗಿಟ್ಟಿಸಲು ಈ ಭೂಪ ಏನು ಮಾಡಿದ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts