More

    ತಬ್ಲಿಘಿ ಜಮಾತ್​ನ 9 ಸಾವಿರ ಕಾರ್ಯಕರ್ತರ ಕ್ವಾರಂಟೈನ್!: ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ

    ನವದೆಹಲಿ: ಕರೊನಾ ವೈರಸ್​ ಸೋಂಕು ಹರಡುವಿಕೆಯ ಪ್ರಧಾನ ಕೇಂದ್ರ ಎನಿಸಿರುವ ನಿಜಾಮುದ್ದೀನ್​ನ ಧಾರ್ಮಿಕ ಕೇಂದ್ರದಲ್ಲಿ ತಬ್ಲಿಘಿ ಜಮಾತ್​ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 1,306 ವಿದೇಶಿಗರು ಸೇರಿ ಒಟ್ಟು 9 ಸಾವಿರ ಸದಸ್ಯರನ್ನು ಕ್ವಾರಂಟೇನ್​ನಲ್ಲಿ ಇಟ್ಟಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

    9 ಸಾವಿರ ಜನರಲ್ಲಿ 1,306 ಸದಸ್ಯರು ವಿದೇಶಿಗರಾಗಿದ್ದರೆ ಉಳಿದವರು ಭಾರತೀಯರಾಗಿದ್ದಾರೆ. ಇವರೆಲ್ಲರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಪತ್ತೆಯಾದರೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಪಷ್ಟಪಡಿಸಿದೆ.
    ಕ್ವಾರಂಟೇನ್​ನಲ್ಲಿರುವ ಜಮಾತ್​ನ ಕಾರ್ಯಕರ್ತರ ಪೈಕಿ ಅಂಡಮಾನ್​ ಮತ್ತು ನಿಕೋಬಾರ್​, ದೆಹಲಿ, ಜಮ್ಮು ಮತ್ತು ಕಾಶ್ಮೀರ, ತಮಿಳುನಾಡು, ತೆಲಂಗಾಣ, ರಾಜಸ್ಥಾನ, ಆಂಧ್ರಪ್ರದೇಶ, ಅಸ್ಸಾಂ, ಉತ್ತರ ಪ್ರದೇಶ ಮತ್ತು ಪುದುಚೆರಿ ಅವರು ಸೇರಿದ್ದಾರೆ ಎಂದು ತಿಳಿಸಿದೆ.

    ಇದೇ ವೇಳೆ, 250 ವಿದೇಶಿಗರು ಸೇರಿ ದೆಹಲಿಯಲ್ಲಿ ಒಟ್ಟು 2 ಸಾವಿರ ಜಮಾತ್​ ಕಾರ್ಯಕರ್ತರು ಇದ್ದರು. ಇವರಲ್ಲಿ 1,804 ಜನರನ್ನು ಕ್ವಾರಂಟೇನ್​ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಸೋಂಕಿನ ಕುರುಹು ಹೊಂದಿದ್ದ 302 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯಾ ಸಲೀಲಾ ಶ್ರೀವಾಸ್ತವ ಹೇಳಿದ್ದಾರೆ.

    400 ಸೋಂಕಿತರು: ಇದುವರೆಗೂ ದೇಶದಾದ್ಯಂತ ಪತ್ತೆಯಾಗಿರುವ ಸೋಂಕಿತರ ಪೈಕಿ ನಿಜಾಮುದ್ದೀನ್​ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿದ್ದ 400 ಜನರು ಸೇರಿದ್ದಾರೆ. ಹೆಚ್ಚುವರಿ ಪರೀಕ್ಷೆಗಳು ಮುಂದುವರಿದಿದ್ದು, ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಗೃಹ ಸಚಿವಾಲಯದ ಮತ್ತೊಬ್ಬ ಜಂಟಿ ಕಾರ್ಯದರ್ಶಿ ಲವ ಅಗರ್​ವಾಲ್​ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts