More

    ಕೇಂದ್ರದಲ್ಲಿ 9 ಲಕ್ಷ ಹುದ್ದೆ ಖಾಲಿ: ರೈಲು ಪ್ರಯಾಣದಲ್ಲಿ ಹಿರಿಯ ನಾಗರಿಕರಿಗೆ ಸದ್ಯಕ್ಕಿಲ್ಲ ರಿಯಾಯಿತಿ

    ನವದೆಹಲಿ: ಸಿಬಿಐ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 9.79 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರ ಬುಧವಾರ ತಿಳಿಸಿದೆ. ವೆಚ್ಚ ಇಲಾಖೆಯ ವೇತನ ಸಂಶೋಧನಾ ಘಟಕದ ವಾರ್ಷಿಕ ವರದಿಯ ಪ್ರಕಾರ 2021 ಮಾರ್ಚ್ 1ಕ್ಕೆ ಅನ್ವಯವಾಗುವಂತೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 9,79,327 ಹುದ್ದೆಗಳು ಖಾಲಿ ಇವೆ. ರೋಜ್ಗಾರ್ ಮೇಳಗಳು ಮತ್ತಷ್ಟು ಉದ್ಯೋಗ ಸೃಷ್ಟಿಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತಿವೆ. ಯುವಜನರ ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ನೇರವಾಗಿ ಭಾಗವಹಿಸಲು ಅರ್ಥ ಪೂರ್ಣ ಅವಕಾಶಗಳನ್ನು ಒದಗಿಸುತ್ತಿವೆ ಎಂದು ಎಂದು ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದರು. ಏಪ್ರಿಲ್ 1ರಿಂದ ಡಿ. 6ರವರೆಗೆ ಪಿಂಚಣಿ ಸಂಬಂಧಿತ 36,700 ದೂರುಗಳು ಬಂದಿವೆ ಎಂದೂ ಹೇಳಿದರು.

    ಸದ್ಯಕ್ಕೆ ರಿಯಾಯಿತಿ ಇಲ್ಲ: ರೈಲು ಪ್ರಯಾಣದಲ್ಲಿ ಹಿರಿಯರಿಗೆ ಸದ್ಯಕ್ಕೆ ಯಾವುದೇ ರಿಯಾಯಿತಿ ಸೌಲಭ್ಯ ಗಳನ್ನು ಮರುಕಲ್ಪಿಸಲಾಗುವುದಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು. ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೋವಿಡ್ ಸಾಂಕ್ರಾಮಿಕ ಅವಧಿಯಿಂದ ಈ ಸೌಲಭ್ಯ ಸ್ಥಗಿತಗೊಳಿಸಲಾಗಿತ್ತು.

    ಕಳೆದ ಬಾರಿ ಪ್ರಯಾಣಿಕರ ಸೌಲಭ್ಯಗಳಿಗೆ 59 ಸಾವಿರ ಕೋಟಿ ಸಬ್ಸಿಡಿ ನೀಡಲಾಗಿತ್ತು. ಇದು ಕೆಲ ರಾಜ್ಯಗಳ ವಾರ್ಷಿಕ ಬಜೆಟ್​ಗಿಂತಲೂ ದೊಡ್ಡ ಮೊತ್ತವಾಗಿದೆ. ಪಿಂಚಣಿಗೆ ವಾರ್ಷಿಕ 60 ಸಾವಿರ ಕೋಟಿ, ವೇತನಕ್ಕೆ 97 ಸಾವಿರ ಕೋಟಿ ಹಾಗೂ ಇಂಧನಕ್ಕೆ 40 ಸಾವಿರ ಕೋಟಿಯನ್ನು ವಿನಿಯೋಗಿಸಲಾಗುತ್ತಿದೆ. ರೈಲ್ವೆಯ ಈಗಿನ ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

    ಕುಸಿದಿದ್ದ ಐಆರ್​ಸಿಟಿಸಿ ಆದಾಯ: ಕೋವಿಡ್ ನಿರ್ಬಂಧಗಳಿಂದಾಗಿ 2019-20ಕ್ಕೆ ಹೋಲಿಸಿದರೆ 2020-21ರ ಅವಧಿಯಲ್ಲಿ ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್​ಸಿಟಿಸಿ) ಆದಾಯ ಶೇ.64ರಷ್ಟು ಕಡಿಮೆಯಾಗಿತ್ತು ಎಂದು ಸಚಿವ ವೈಷ್ಣವ್ ತಿಳಿಸಿದರು. ಐಆರ್​ಸಿಟಿಸಿ 2019-20ರಲ್ಲಿ 2,342 ಕೋಟಿ ರೂ. ಆದಾಯ ಗಳಿಸಿದೆ. 2020-21ರ ಕೋವಿಡ್ ಸಂದರ್ಭದಲ್ಲಿ ಅದರ ಆದಾಯ 861.64 ಕೋಟಿಗೆ ಇಳಿದಿತ್ತು. ಈಗ 2021-22ರಲ್ಲಿ 1,952.30 ಕೋಟಿ ರೂ. ಆದಾಯ ಗಳಿಸಿದೆ ಎಂದು ತಿಳಿಸಿದರು.

    ವಿರೋಧ ಪಕ್ಷಗಳಿಂದ ಜಂಟಿ ಕಾರ್ಯತಂತ್ರ: ಭಾರತ -ಚೀನಾ ಗಡಿ ವಿಚಾರದಲ್ಲಿ ಚರ್ಚೆಗೆ ಕೇಂದ್ರ ಸರ್ಕಾರ ಅವಕಾಶ ನೀಡದಿರುವ ಹಿನ್ನೆಲೆಯಲ್ಲಿ 17 ವಿರೋಧ ಪಕ್ಷಗಳ ನಾಯಕರು ಬುಧವಾರ ಸಭೆ ನಡೆಸಿ, ಸರ್ಕಾರವನ್ನು ಒಗ್ಗಟ್ಟಾಗಿ ಎದುರಿಸಲು ಜಂಟಿ ಕಾರ್ಯತಂತ್ರ ರೂಪಿಸಿದ್ದಾರೆ.

    ದಾಖಲೆಯ ರಫ್ತು: ಎಲೆಕ್ಟ್ರಾನಿಕ್ ಉತ್ಪಾದನೆಯು ಮೌಲ್ಯ ದಲ್ಲಿ 6.4 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇದೇ ವೇಳೆ ಈ ವಲಯದ ರಫ್ತು ಪ್ರಮಾಣ 2021-22ರಲ್ಲಿ ಸಾರ್ವಕಾಲಿಕ ಗರಿಷ್ಠ 109 ಲಕ್ಷ ಕೋಟಿ ರೂ. ಗೆ ತಲುಪಿದೆ ಎಂದು ಎಲೆಕ್ಟ್ರಾನಿಕ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದರು.

    ಕೇಂದ್ರದಲ್ಲಿ 9 ಲಕ್ಷ ಹುದ್ದೆ ಖಾಲಿ: ರೈಲು ಪ್ರಯಾಣದಲ್ಲಿ ಹಿರಿಯ ನಾಗರಿಕರಿಗೆ ಸದ್ಯಕ್ಕಿಲ್ಲ ರಿಯಾಯಿತಿಸಂಸತ್​ಗೆ ಸರ್ಕಾರದ ಉತ್ತರ

    • ದೇಶದಲ್ಲಿ 710 ರಾಷ್ಟ್ರೀಯ ಹೆದ್ದಾರಿ ಯೋಜನೆ ಗಳ ಪೈಕಿ 438 ಯೋಜನೆಗಳು ಈ ವಿತ್ತೀಯ ವರ್ಷದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
    • ಅಂಗವಿಕಲ ಮಗುವನ್ನು ದತ್ತು ಪಡೆಯಲು ಬಯಸುವವರಿಗೆ ಕಾಯುವಿಕೆ ಅವಧಿ ಇಲ್ಲ.
    • ಭಾರತವು 2031ರ ವೇಳೆಗೆ 20 ಪರಮಾಣು ವಿದ್ಯುತ್ ಸ್ಥಾವರಗಳನ್ನು ಪ್ರಾರಂಭಿಸಲಿದ್ದು, 15 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಲಿದೆ.
    • ತೆಲಂಗಾಣ ಸೇರಿದಂತೆ 9 ರಾಜ್ಯಗಳು ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆ ಹಿಂಪಡೆದಿವೆ.
    • ಕಳೆದ ಏಳು ತಿಂಗಳಲ್ಲಿ ಐಆರ್​ಸಿಟಿಸಿ ಆಹಾರ ಪೂರೈಕೆಗೆ ಸಂಬಂಧಿಸಿದಂತೆ 5000 ದೂರುಗಳು ದಾಖಲಾಗಿವೆ.
    • ಎನ್​ಐಎ 497 ಪ್ರಕರಣಗಳ ತನಿಖೆ ನಡೆಸುತ್ತಿದ್ದು, ಇದರಲ್ಲಿ 67 ಪ್ರಕರಣಗಳ ವಿಚಾರಣೆ ಕೋರ್ಟ್​ನಲ್ಲಿ ನಡೆದಿದೆ. 65ರಲ್ಲಿ ಶಿಕ್ಷೆ ಪ್ರಕಟವಾಗಿದೆ.
    • ನವದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ ಹೆಸರನ್ನು ಭಾರತ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಎಂದು ಬದಲಾಯಿಸುವ ಮಸೂದೆಗೆ ಸಂಸತ್ ಒಪ್ಪಿಗೆ.
    • ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಒಬಿಸಿ ವರ್ಗದ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಲಾಗಿದೆ.
    • 2021-22ನೇ ಸಾಲಿನಲ್ಲಿ ದೇಶಾದ್ಯಂತ 4.21 ಲಕ್ಷ ಇಂಜಿನಿಯರಿಂಗ್ ಸೀಟು ಖಾಲಿ ಇವೆ.

    ಗುಜರಾತ್ ಜಯಕ್ಕೆ ಪ್ರಧಾನಿಗೆ ಅಭಿನಂದನೆ: ಗುಜರಾತ್ ವಿಧಾನಸಭೆ ಚುನಾವಣೆಯ ದಾಖಲೆ ಗೆಲುವಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬುಧವಾರ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಅಭಿನಂದಿಸಲಾಯಿತು. ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಕೂಡ ಗುಜರಾತ್ ರಾಜ್ಯ ಘಟಕದ ಅಧ್ಯಕ್ಷ ಸಿ.ಆರ್. ಪಾಟೀಲ್ ಅವರನ್ನು ಹೊಗಳಿದರು. ಈ ಗೆಲುವು ಬಿಜೆಪಿಯ ಸಂಘಟನಾ ಶಕ್ತಿ ಮತ್ತು ಪಕ್ಷದ ಕಾರ್ಯಕರ್ತರಿಗೆ ಸಲ್ಲುತ್ತದೆ ಎಂದೂ ಪ್ರಧಾನಿ ಹೇಳಿದರು.

    ಕಳೆದ ಒಂದು ವರ್ಷದಲ್ಲಿ ಹಠಾತ್ ಹೃದಯಾಘಾತ, ಅನಾರೋಗ್ಯ ಶೇ. 20 ಹೆಚ್ಚಳ: ಬಾಧಿತರಲ್ಲಿ ಲಸಿಕೆ ಪಡೆದವರ ಪ್ರಮಾಣವೆಷ್ಟು?

    ಹಿರಿಯ ನಟಿಯ ತಲೆಗೆ 40 ಸಲ ಬ್ಯಾಟ್​ನಿಂದ ಬಾರಿಸಿ ಕೊಲೆ; ತಾಯಿಯನ್ನು ಕೊಲ್ಲಲು ಮಗನಿಗಿತ್ತು ವರ್ಷಗಳ ಕಾಲದ ಅಸಹನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts