More

    ಸೋಮವಾರ 9 ಸೋಂಕಿತರ ಬಲಿ ಪಡೆದ ಕರೊನಾ

    ಬೆಳಗಾವಿ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಪತ್ತೆಯಾದ ಕರೊನಾ ಸೋಂಕಿತರ ಸಂಖ್ಯೆಗಿಂತ ಹೆಚ್ಚು ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಂದೇ ದಿನ 9 ಸೋಂಕಿತರನ್ನು ಕರೊನಾ ಸೋಂಕು ಬಲಿ ಪಡೆದಿರುವುದು ಆತಂಕ ಹೆಚ್ಚಿಸಿದೆ. 279 ಜನ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ತೆರಳಿದ್ದು, ಗುಣಮುಖರಾದವರ ಒಟ್ಟು ಸಂಖ್ಯೆ 4,199ಕ್ಕೆ ಏರಿಕೆಯಾಗಿದೆ.

    ಬೆಳಗಾವಿಯ 72 ವರ್ಷದ ಇಬ್ಬರು ವೃದ್ಧರು, 50 ವರ್ಷದ ಮಹಿಳೆ, 41 ಹಾಗೂ 42 ವರ್ಷದ ವ್ಯಕ್ತಿ, ಗೋಕಾಕ ತಾಲೂಕಿನ 60 ವರ್ಷದ ವೃದ್ಧೆ ಹಾಗೂ 55 ವರ್ಷದ ಪುರುಷ ಮತ್ತು ಚಿಕ್ಕೋಡಿ ತಾಲೂಕಿನ 60 ವರ್ಷದ ವೃದ್ಧೆ ಕೋವಿಡ್-19ಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 130 ಜನ ಕರೊನಾ ಸೋಂಕಿನಿಂದ ಮೃತಪಟ್ಟಂತಾಗಿದೆ. ಇನ್ನು ಸೋಮವಾರ ಪತ್ತೆಯಾದ 171 ಪ್ರಕರಣ ಸೇರಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,981ಕ್ಕೆ ಏರಿಕೆಯಾಗಿದೆ.

    ಬೆಳಗಾವಿಯಲ್ಲಿ ಹೆಚ್ಚು: ಬೆಳಗಾವಿ ನಗರ ಸೇರಿ ತಾಲೂಕಿನಲ್ಲಿ 50 ಪ್ರಕರಣ ಪತ್ತೆಯಾಗಿದ್ದು, ಗೋಕಾಕ 14, ಚಿಕ್ಕೋಡಿ 49, ಹುಕ್ಕೇರಿ 11, ಬೈಲಹೊಂಗಲ 22, ಸವದತ್ತಿ 4, ರಾಯಬಾಗ 10, ಅಥಣಿ 7, ಖಾನಾಪುರ 1 ಹಾಗೂ ರಾಮದುರ್ಗ ತಾಲೂಕಿನ ಮೂವರಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತ 3,652 ಜನ ಬಿಮ್ಸ್ ಹಾಗೂ ವಿವಿಧ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಂಕಿನ ಲಕ್ಷಣಗಳಿರುವ 444 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts