More

    ಈ 9 ರಾಷ್ಟ್ರಗಳಿಂದ ಕರೊನಾ ನಾಪತ್ತೆಯಾಗಿದೆ…!

    ನವದೆಹಲಿ: ಜನವರಿಗೂ ಮುಂಚೆ ಚೀನಾ ಸೇರಿ ಕೆಲ ರಾಷ್ಟ್ರಗಳಲ್ಲಿ ಮಾತ್ರ ಕರೊನಾ ಕಾಣಿಸಿಕೊಂಡಿತ್ತು. ಆದರೆ, ಈಗ ಕರೊನಾ ವೈರಸ್​ ವ್ಯಾಪಿಸದ ರಾಷ್ಟ್ರಗಳೇ ಇಲ್ಲ ಎನ್ನುವಂಥ ಪರಿಸ್ಥಿತಿ. ಕಳೆದ ಆರು ತಿಂಗಳಿನಿಂದ ಈ ವೈರಸ್​ ನಿರ್ಮೂಲನೆಗೆ ಜಾಗತಿಕ ಯುದ್ಧವೇ ನಡೆಯುತ್ತಿದೆ. ಈ ಯುದ್ಧದಲ್ಲಿ ಹಲವು ರಾಷ್ಟ್ರಗಳು ವಿಜಯೋತ್ಸಾಹದ ಹುಮ್ಮಸ್ಸಿನಲ್ಲಿವೆ.

    ಕರೊನಾದಿಂದ ಮುಕ್ತವಾಗಿರುವುದಾಗಿ 9 ರಾಷ್ಟ್ರಗಳು ಘೋಷಿಸಿವೆ. ಇಲ್ಲಿ ಕರೊನಾದ ಯಾವುದೇ ಸಕ್ರಿಯ ಪ್ರಕರಣಗಳಿಲ್ಲ. ಕನಿಷ್ಠ 15 ದಿನಗಳಿಂದ ಹೊಸ ಪ್ರಕರಣಗಳು ಕೂಡ ವರದಿಯಾಗಿಲ್ಲ. ಕಳೆದ ಎರಡು ದಿನಗಳ ಹಿಂದಷ್ಟೇ ನ್ಯೂಜಿಲೆಂಡ್​ ಕರೊನಾಮುಕ್ತ ರಾಷ್ಟ್ರವೆಂದು ಘೋಷಿಸಿಕೊಂಡಿತ್ತು. 1500 ಪ್ರಕರಣಗಳು ಇಲ್ಲಿ ವರದಿಯಾಗಿದ್ದವು. ಆ ಪೈಕಿ 22 ಜನರು ಮೃತಪಟ್ಟಿದ್ದರು. ಸದ್ಯ ಇಲ್ಲಿ ಕೋವಿಡ್​ನ ಸಕ್ರಿಯ ಪ್ರಕರಣಗಳು ಇಲ್ಲ.

    ಇದನ್ನೂ ಓದಿ; ಲಾಕ್​ಡೌನ್​ ಅವಧಿಯಲ್ಲಿ ಜನ ಊಟಕ್ಕಿಂತ ಈ ಬಿಸ್ಕೆಟ್​ ತಿಂದದ್ದೇ ಹೆಚ್ಚು…! 80 ವರ್ಷಗಳಲ್ಲಿಯೇ ಅತಿ ಹೆಚ್ಚು ಮಾರಾಟ ದಾಖಲೆ

    ಪ್ರಾರ್ಥನೆಯಿಂದಲೇ ಕರೊನಾ ದೂರಾಗಿದೆ ಎಂದು ತಾಂಜೇನಿಯಾ ಘೋಷಿಸಿಕೊಂಡಿದೆ. ದೇವರ ದಯೆಯಿಂದ ನಮ್ಮ ದೇಶದಲ್ಲಿ ಕರೊನಾ ನಿರ್ಮೂಲನೆಯಾಗಿದೆ ಎಂದು ತಾಂಜಾನಿಯಾ ಅಧ್ಯಕ್ಷ ಜಾನ್​ ಮಗಾಫುಲಿ ಹೇಳಿದ್ದಾರೆ. ಇಲ್ಲಿ 509 ಜನರಲ್ಲಿ ಕರೊನಾ ಕಾಣಿಸಿಕೊಂಡಿತ್ತು. ಬಳಿಕ ಸಾರ್ವಜನಿಕವಾಗಿ ಮಾಹಿತಿ ನೀಡುವುದನ್ನೇ ನಿಲ್ಲಿಸಲಾಗಿತ್ತು. ಇದಾಗಿ ಆರು ವಾರಗಳ ಬಳಿಕ ಕರೊನಾಮುಕ್ತವೆಂದು ಘೋಷಿಸಿಕೊಂಡಿದೆ. ಆದರೆ ನೆರೆಯ ರಾಷ್ಟ್ರಗಳು ಈ ಬಗ್ಗೆ ಗುಮಾನಿ ವ್ಯಕ್ತಪಡಿಸಿವೆ.

    ತನ್ನ ದೇಶದಲ್ಲಿ ಎಲ್ಲ 12 ಕರೊನಾ ಸೋಂಕಿತರು ಗುಣವಾಗಿದ್ದಾರೆ ಎಂದು ಜೂನ್​ 6ರಂದು ವ್ಯಾಟಿಕನ್​ ತಿಳಿಸಿದೆ. ಕರೊನಾದಿಂದಾಗಿ ಇಲ್ಲಿ ಯಾರೂ ಮೃತಪಟ್ಟಿಲ್ಲ.

    ಇದನ್ನೂ ಓದಿ; ಹೊತ್ತಿ ಉರಿಯುತ್ತಿರುವ ತೈಲ ಬಾವಿ ಬೆಂಕಿ ನಂದಿಸಲು ಒಂದು ತಿಂಗಳೇ ಬೇಕು….! 

    ದ್ವೀಪರಾಷ್ಟ್ರ ಫಿಜಿಯಲ್ಲಿದ್ದ ಎಲ್ಲ 18 ಸೋಂಕಿತರು ಕೂಡ ಚೇತರಿಸಿಕೊಂಡಿದ್ದಾರೆ. ಕಳೆದ 45 ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ಕಾಣಿಸಿಕೊಂಡಿಲ್ಲ ಎಂದು ಪ್ರಧಾನಿ ಫ್ರಾಂಕ್​ ಬೈನಿಮರಾಮ ಹೇಳಿದ್ದಾರೆ. 9 ಲಕ್ಷ ಜನಸಂಖ್ಯೆ ಇರುವ ಈ ದೇಶದಲ್ಲಿ ಲಾಕ್​ಡೌನ್ ವಿಧಿಸಲಾಗಿತ್ತು.

    ಮೊದಲ ಪ್ರಕರಣ ವರದಿಯಾದ 69 ದಿನಗಳ ಬಳಿಕ ಕರೊನಾಮುಕ್ತ ಎಂದು ಮಾಂಟೆನ್​ಗ್ರೊ ಪ್ರಕಟಿಸಿದೆ. ಇಲ್ಲಿ 324 ಕೇಸ್​ಗಳಿದ್ದವು. ಇನ್ನು, ಶಿಷೆಲ್ಸ್​ನಲ್ಲಿದ್ದ 11, ಸೇಂಟ್​​ ಕಿಟ್ಸ್​ ಆ್ಯಂಡ್​ ನೇವಿಸ್​ನ 15, ತಿಮೋರ್​ ಲೆಸ್ಟ್​ನ 24 ಹಾಗೂ ಪಾಪುವಾ ನ್ಯೂಗಿನಿಯ 24 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಆಯಾ ದೇಶಗಳು ತಿಳಿಸಿವೆ. ಕೋವಿಡ್​ಮುಕ್ತವಾಗಿರುವುದಾಗಿ ಘೋಷಿಸಿಕೊಂಡಿವೆ.

    ಹುಟ್ಟುಹಬ್ಬದಂದೇ ಕರೊನಾಗೆ ಬಲಿಯಾದ ಶಾಸಕ; ಜನಪ್ರತಿನಿಧಿ ಸಾವಿನ ಮೊದಲ ಪ್ರಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts