More

    9ರಂದು ಬೃಹತ್ ರಾಷ್ಟ್ರೀಯ ಲೋಕ ಅದಾಲತ್

    ಚಿತ್ರದುರ್ಗ: ಜಿಲ್ಲೆ ಎಲ್ಲ ನ್ಯಾಯಾಲಯಗಳಲ್ಲಿ ಡಿ.9ರಂದು ಬೃಹತ್ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷೆ ಕೆ.ಬಿ.ಗೀತಾ ಹೇಳಿದರು.
    ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜೀ ಸಂಧಾನ ಪ್ರಕರಣಗಳ ಇತ್ಯರ್ಥಕ್ಕೆ ಅದಾಲತ್ ಉತ್ತಮ ವೇದಿಕೆಯಾಗಿ ದ್ದು, ಕಕ್ಷಿದಾರರು ಇದರ ಪ್ರಯೋಜನ ಪಡೆಯ ಬೇಕೆಂದು ಸಲಹೆ ನೀಡಿದರು. ನ್ಯಾಯಾಧೀಶರು, ವಕೀಲರು ಸಂಧಾನಕಾರರಾಗಿ ಪಾ ಲ್ಗೊಳ್ಳಲಿದ್ದು, ಪ್ರಕರಣಗಳನ್ನು ನೇರ ಇತ್ಯರ್ಥ ಪಡಿಸಿಕೊಳ್ಳ ಬಹುದು.
    ಇದರಿಂದಾಗಿ ಕಕ್ಷಿದಾರರ ನಡುವಿನ ಬಾಂಧವ್ಯ ಉತ್ತಮಗೊಳ್ಳಲಿದೆ. ಅದಾಲತ್ ತೀರ್ಪು ವಿರುದ್ಧ ಮೇಲ್ಮನವಿಗೆ ಅವಕಾಶವಿಲ್ಲ. ಆದರೆ ಮೋಸ ಅಥವಾ ಮಿಸ್‌ರೆಪ್ರಸೆಂಟೇಷನ್‌ನಂತಹ ಸಂದರ್ಭದಲ್ಲಿ ಮೇಲ್ಮನವಿ ಸಲ್ಲಿಸಬಹುದು. ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥವಾದರೆ ಕೋರ್ಟ್ ಶುಲ್ಕ ಸಂಪೂರ್ಣ ಮರು ಪಾವತಿಯಾಗಲಿದೆ.
    ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ತೀರ್ಮಾನದಂತೆ ಸುಪ್ರಿಂಕೋರ್ಟ್, ಹೈಕೋರ್ಟ್ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕೋರ್ಟ್‌ಗಳಲ್ಲಿ ಈ ವರ್ಷದ ನಾಲ್ಕನೇ ಹಾಗೂ ಅಂತಿಮ ಅದಾಲತ್ ನಡೆಯಲಿದೆ.
    ಚೆಕ್‌ಅಮಾನ್ಯ ಪ್ರಕರಣಗಳು, ಬ್ಯಾಂಕ್‌ವಸೂಲಾತಿ, ಉದ್ಯೋಗ ಇತರೆ ಕಾರ್ಮಿಕ ವಿವಾದಗಳು, ಕಾರ್ಮಿಕರ ವೇತನ, ವಿದ್ಯುತ್, ನೀರಿನ ಶುಲ್ಕ, ರಾಜಿ ಆಗಬಹುದಾದಂಥ ಅಪರಾಧಿಕ, ಜಿಲ್ಲಾ ಗ್ರಾಹಕರ ಪರಿಹಾರ ಆಯೋಗ, ಕರ್ನಾಟಕ ವಿದ್ಯುತ್ ನಿಯಂತ್ರಣ ಆ ಯೋಗ, ಕರ್ನಾಟಕ ರಿಯಲ್ ಎಸ್ಟೆಂಟ್ ಪ್ರಾಧಿಕಾರ, ಸಾಲ ವಸೂಲಾತಿ ನ್ಯಾಯಾಧೀಕರಣದ, ವಿಚ್ಛೇದನ ಹೊರತುಪಡಿಸಿದ ಕುಟುಂಬ ನ್ಯಾಯಾಲಯ, ಮೋಟಾರ್ ಅಪಘಾತ ಪರಿಹಾರ ನ್ಯಾಯಾಧೀಕರಣ ಹಾಗೂ ಭೂಸ್ವಾಧೀನ ಮತ್ತಿತರ ಪ್ರಕರಣಗಳನ್ನು ಇತ್ಯರ್ಥ ಪಡಿಸಿ ಕೊಳ್ಳಬಹುದು. ಕಳೆದ ಸೆಪ್ಟೆಂಬರ್ 9ರಂದು ನಡೆದ ಅದಾಲತ್‌ನಲ್ಲಿ 85,928 ಪ್ರಕರಣಗಳನ್ನು ಜಿಲ್ಲೆಯಲ್ಲಿ ವಿಲೇವಾರಿ ಮಾಡಲಾಗಿದೆ.
    ಅದಾಲತ್‌ಗೆ ಸಂಬಂಧಿಸಿದ ಪ್ರಶ್ನೆಗಳಿದ್ದರೆ ನಾಗರಿಕರು ಛ್ಝಚ್ಚಜಿಠ್ಟಿಛ್ಠ್ಟಜ1ಃಜಞಜ್ಝಿ.್ಚಟಞಗೆ ಮೇಲ್ ಮಾಡಬಹುದು. ಜಿಲ್ಲಾ ಕಾನೂನು ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಕಚೇರಿ ದೂರವಾಣಿ ಸಂಖ್ಯೆ 08194-222322,9141193935 ಕರೆ ಮಾಡಿ ಅಥವಾ ಕ ಚೇರಿಗೆ ಖುದ್ದು ಭೇಟಿ ಮಾಡಿ ಮಾಹಿತಿ ಪಡೆಯಬಹುದೆಂದು ಜಿಲ್ಲಾ ನ್ಯಾಯಾಧೀಶರು ಹೇಳಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಅವರು ಇದ್ದರು.
    ಅಧಿಕಾರ ಸ್ವೀಕಾರ:
    ನೂತನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಕೆ.ಬಿ.ಗೀತಾ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts