

ಹೊಸಕೋಟೆ: ಮಾವಿನಕಾಯಿ ಇಲ್ಲವೇ ತರಕಾರಿ ತುಂಬುವ ನೂರಾರು ಕ್ರೇಟ್ಗಳನ್ನು ಹೊತ್ತು ಸಾಗುತ್ತಿದ್ದ ಟೆಂಪೋದಲ್ಲಿ 85 ಕೆಜಿ ಗಾಂಜಾ ಪತ್ತೆಯಾಗಿದೆ!
ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನವೇ ಬೃಹತ್ ಕಾರ್ಯಾಚರಣೆ ನಡೆಸಿದ ಹೊಸಕೋಟೆ ಪೊಲೀಸರು, ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ. ಇದನ್ನೂ ಓದಿರಿ ಕಪ್ಪು-ಬಿಳುಪು ಟಿವಿ ಮಾರಾಟ ಮಾಡಿದ್ರೆ ಕೋಟಿ ಹಣ ಸಿಗುತ್ತೆ!
ಆಂಧ್ರಪ್ರದೇಶ ಮೂಲದ ರಮೇಶ್(30), ಸೀನು(25) ಮತ್ತು ವಿಕ್ರಂ ಅಹಮ್ಮದ್ ಖಾನ್ (25) ಬಂಧಿತರು. ಇವರು ತರಕಾರಿ-ಹಣ್ಣು ಸಾಗಣೆ ಸೋಗಿನಲ್ಲಿ ಟೆಂಪೋದಲ್ಲಿ ಖಾಲಿ ಕ್ರೇಟ್ಗಳನ್ನು ತುಂಬಿಕೊಂಡು, ಅದರ ನಡುವೆ ಯಾರಿಗೂ ಅನುಮಾನ ಬರದಂತೆ ಎರಡ್ಮೂರು ಕೆಜಿ ತೂಕದಷ್ಟು ಚಿಕ್ಕಚಿಕ್ಕ ಪೊಟ್ಟಣದಂತೆ 85 ಕೆಜಿ ಗಾಂಜಾವನ್ನು ತರುತ್ತಿದ್ದರು.
ಆಂಧ್ರದಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ಗಾಂಜಾ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹೊಸಕೋಟೆಯ ಎಂವಿಜೆ ಕಾಲೇಜಿನ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.