More

    8.96 ಲಕ್ಷ ರೂ. ಉಳಿತಾಯ ಬಜೆಟ್

    ತರೀಕೆರೆ: ಪುರಸಭೆ ಅಧ್ಯಕ್ಷ ಪರಮೇಶ ಅವರು ಗುರುವಾರ ಪ್ರಸಕ್ತ ವರ್ಷದ ಬಜೆಟ್ ಮಂಡಿಸಿದ್ದು, 8.96 ಲಕ್ಷ ರೂ. ಉಳಿತಾಯ ಗುರಿ ಹೊಂದಲಾಗಿದೆ.

    88.32 ಕೋಟಿ ರೂ. ಮೊತ್ತದ ಬಜೆಟ್‌ನಲ್ಲಿ ಎಸ್‌ಎ್ಸಿ ವೇತನ ಅನುದಾನ 2.83 ಕೋಟಿ ರೂ. ಹಂಚಿಕೆಯಾಗುವ ನಿರೀಕ್ಷೆ ಇದೆ. ಬೀದಿ ದೀಪಗಳ ನಿರ್ವಹಣೆಗೆ 1.12 ಕೋಟಿ ರೂ. ಹಾಗೂ ನೀರು ಸರಬರಾಜಿಗೆ ವಿದ್ಯುತ್ ಅನುದಾನ 1.91 ಕೋಟಿ ರೂ. ಬೇಡಿಕೆಗೆ ಅನುಸಾರ ಮೆಸ್ಕಾಂಗೆ ಪಾವತಿಸಲಾಗುವುದು ಎಂದು ಅಧ್ಯಕ್ಷ ಹೇಳಿದರು.
    ರಾಜ್ಯ ಸರ್ಕಾರದಿಂದ ಎಸ್‌ಎ್ಸಿ ಮುಕ್ತನಿಧಿ 49 ಲಕ್ಷ ರೂ., ಎಸ್‌ಎ್ಸಿ ಕುಡಿಯುವ ನೀರಿನ ಅನುದಾನ 2.50 ಲಕ್ಷ ರೂ., ಎಸ್‌ಎ್ಸಿ ಐಇಸಿ ಮಾಹಿತಿ ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳಿಗಾಗಿ 2 ಲಕ್ಷ ರೂ. ನಿರೀಕ್ಷಿಸಲಾಗಿದೆ. ಪಟ್ಟಣದ ತ್ಯಾಜ್ಯ ವಿಲೇವಾರಿಗಾಗಿ ಹೊಸ ವಾಹನ ಮತ್ತು ಯಂತ್ರೋಪಕರಣ ಖರೀದಿಗೆ 55 ಲಕ್ಷ ರೂ. ಕಾಯ್ದಿರಿಸಲಾಗಿದೆ. 32 ಲಕ್ಷ ರೂ. ಮೊತ್ತದಲ್ಲಿ ಒಂದು ಸಕ್ಕಿಂಗ್ ಯಂತ್ರ ಖರೀದಿಸಲಾಗುವುದು. 2024-25ನೇ ಸಾಲಿಗೆ 15ನೇ ಹಣಕಾಸು ಯೋಜನೆಯಲ್ಲಿ 1.91 ಕೋಟಿ ರೂ. ಅನುದಾನ ಕೇಂದ್ರ ಸರ್ಕಾರದಿಂದ ಹಂಚಿಕೆಯಾಗುವ ನಿರೀಕ್ಷೆಯಿದೆ ಎಂದರು.
    ಪುರಸಭೆ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗಿರುವ ತ್ಯಾಜ್ಯ ವಿಲೇಗೊಳಿಸಲು 3.90 ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಯೋಜನೆ ತಯಾರಿಸಲಾಗಿದೆ. ಸ್ವಚ್ಛ ಭಾರತ್ ಅಭಿಯಾನದಲ್ಲಿ ತ್ಯಾಜ್ಯಸಂಗ್ರಹ ಡಬ್ಬಿಗಳನ್ನು ವಾಣಿಜ್ಯ ಪ್ರದೇಶಗಳಲ್ಲಿ ಅಳವಡಿಸಲು 5 ಲಕ್ಷ ರೂ. ಕಾಯ್ದಿರಿಸಲಾಗಿದೆ. ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆಯಡಿ ವಿವಿಧ ವಾರ್ಡ್‌ಗಳಲ್ಲಿ ರಸ್ತೆ ಕಾಮಗಾರಿಗೆ 4.36 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಲಾಗಿದೆ. ಡಿಸಿ ಕಚೇರಿಯಿಂದ ಟೆಂಡರ್ ಕರೆಯಬೇಕಿದೆ ಎಂದು ತಿಳಿಸಿದರು. ಸರ್ವ ಸದಸ್ಯರೂ ಮೇಜು ತಟ್ಟಿ ಬಜೆಟ್‌ಗೆ ಶ್ಲಾಘಿಸಿದರು.
    ವಿದ್ಯುತ್, ದೂರವಾಣಿ, ಅಂಚೆ ಚೀಟಿ ಶುಲ್ಕ, ಕಂಪ್ಯೂಟರ್ ಆಪರೇಟರ್‌ಗಳ ವೇತನ ಇತರ ಕಚೇರಿ ಆಡಳಿತಾತ್ಮಕ ವೆಚ್ಚಕ್ಕೆ 65 ಲಕ್ಷ, ನೀರು ಸರಬರಾಜು, ವಿದ್ಯುತ್ ದೀಪ ನಿರ್ವಹಣೆ, ಹೊರಗುತ್ತಿಗೆ ನೌಕರರ ವೇತನ ಮತ್ತು ಭತ್ಯೆ, ಸಲಕರಣೆಗಾಗಿ 2.72 ಕೋಟಿ, ತ್ಯಾಜ್ಯ ಸಾಗಣೆ ವಾಹನಗಳಿಗೆ, ಪೌರ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಕ್ಕೆ 1.83 ಕೋಟಿ ಮೀಸಲಿರಿಸಲಾಗಿದೆ. ವಿವಿಧ ವಾರ್ಡ್‌ಗಳಲ್ಲಿ ಶೌಚರಹಿತ ಕುಟುಂಬಗಳು ಶೌಚಗೃಹ ನಿರ್ಮಿಸಿಕೊಳ್ಳಲು 35 ಲಕ್ಷ ರೂ. ಕಾಯ್ದಿರಿಸಲಾಗಿದೆ. ಪಟ್ಟಣದಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ 5 ಲಕ್ಷ, ಪಟ್ಟಣದ ಕೂಡು ರಸ್ತೆ, ಸಾರ್ವಜನಿಕ ಸ್ಥಳ, ಪಾರ್ಕ್ ಹಾಗೂ ಸ್ಮಶಾನಗಳಲ್ಲಿ ಆಸನದ ವ್ಯವಸ್ಥೆ ಮಾಡಲು 10 ಲಕ್ಷ, ಪಟ್ಟಣ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ರುದ್ರಭೂಮಿ ಅಭಿವೃದ್ಧಿಗೆ 10 ಲಕ್ಷ, ಪುರಸಭೆ ಪಾರ್ಕ್‌ಗಳ ಅಭಿವೃದ್ಧಿಗೆ 35 ಲಕ್ಷ ಮೀಸಲಿರಿಸಲಾಗಿದೆ.
    ಉನ್ನತ ವ್ಯಾಸಾಂಗ ಮಾಡುತ್ತಿರುವ ಎಸ್ಸಿ 4, ಎಸ್ಟಿ 2 ವಿದ್ಯಾರ್ಥಿಗಳಿಗೆ ಎಸ್‌ಎ್ಸಿ ಅನುದಾನದಡಿ ಲ್ಯಾಪ್‌ಟ್ಯಾಪ್ ಸಭೆಯಲ್ಲಿ ವಿತರಿಸಲಾಯಿತು. ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ಎಸ್ಟಿ 4, ಎಸ್ಟಿ 2 ವಿದ್ಯಾರ್ಥಿಗಳ ಖಾತೆಗೆ 20 ಸಾವಿರ ರೂ. ಜಮಾ ಮಾಡಲಾಯಿತು. ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿರುವ ಹಿನ್ನೆಲೆಯಲ್ಲಿ ಸಂತಾನಶಕ್ತಿ ಹರಣ ಚಿಕಿತ್ಸೆಗೆ 10 ಲಕ್ಷ ರೂ. ಕಾಯ್ದಿರಿಸಲಾಗಿದೆ.
    ಉಪಾಧ್ಯಕ್ಷೆ ಆರ್.ದಿವ್ಯಾ, ಮುಖ್ಯಾಧಿಕಾರಿ ಎಚ್.ಪ್ರಶಾಂತ್, ವ್ಯವಸ್ಥಾಪಕ ವಿಜಯಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts