More

    ಸಮಾನತೆ ನೆಲೆಸಲು ಸಂವಿಧಾನ ಕಾರಣ

    ಎಚ್.ಡಿ.ಕೋಟೆ: ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ಅರ್ಪಣೆ ಮಾಡದೆ ಇದ್ದಿದ್ದರೆ ಇಂದು ನಾವು ಯಾರೂ ಸಹ ಸಮಾನತೆಯಿಂದ ಇರಲು ಸಾಧ್ಯವಾಗುತ್ತಿರಲಿಲ್ಲ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

    ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದು ಭಾರತ ಶ್ರೀಮಂತಿಕೆಯಿಂದ ಇರಲು ಸಂವಿಧಾನ ಕಾರಣ. ಕೇವಲ ಒಂದು ವರ್ಗ ಅಥವಾ ಒಂದು ಜಾತಿಗೆ ಅಂಬೇಡ್ಕರ್ ಸಂವಿಧಾನ ರಚನೆ ಮಾಡಿಲ್ಲ. ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ನೀಡಿದ್ದಾರೆ. ಅದನ್ನು ಅರ್ಥಮಾಡಿಕೊಂಡು ಸಾಗಬೇಕು ಎಂದು ತಿಳಿಸಿದರು.

    ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಮೈಮುನಿಸ ಬೇಗಂ ಮುಖ್ಯಭಾಷಣ ಮಾಡಿದರು. ತಹಸೀಲ್ದಾರ್ ಶ್ರೀನಿವಾಸ್ ಧ್ವಜಾರೋಹಣ ನೆರವೇರಿಸಿದರು. ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ತಾಲೂಕಿನ ಆದಿವಾಸಿ ಮುಖಂಡ ಮೊತ್ತ ಸೋಮಣ್ಣ ಅವರನ್ನು ಶಾಸಕ ಅನಿಲ್ ಚಿಕ್ಕಮಾದು ಸನ್ಮಾನಿಸಿದರು.

    ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ವಿವಿಧ ಸ್ತಬ್ಧಚಿತ್ರಗಳು, ಕಲಾ ತಂಡಗಳ ಮೆರವಣಿಗೆ ನಡೆಯಿತು. ತಾಪಂ ಇಒ ಧರಣೇಶ್, ಬಿಇಒ ಮಾರಯ್ಯ, ಪುರಸಭೆ ಸದಸ್ಯ ನರಸಿಂಹಮೂರ್ತಿ, ಮುದ್ದ ಮಲ್ಲಯ್ಯ, ಸಣ್ಣ ಕುಮಾರ್, ಸಣ್ಣರಾಮಪ್ಪ, ಶಿವರಾಜು, ಅಶೋಕ್, ಶಿವಣ್ಣ, ಬಸವರಾಜ, ಎಂ.ಡಿ.ಮಂಚಯ್ಯ, ಸಿಡಿಪಿಒ ಆಶಾ, ಬಿಸಿಎಂ ಅಧಿಕಾರಿ ಶಶಿಕಲಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts