More

    ದೇಶಾದ್ಯಂತ 8 ವರ್ಷಗಳಲ್ಲಿ 750 ಹುಲಿಗಳ ಸಾವು: ಕರ್ನಾಟಕದಲ್ಲೆಷ್ಟು?

    ನವದೆಹಲಿ: ದೇಶದಲ್ಲಿ ಕಳೆದ 8 ವರ್ಷಗಳಲ್ಲಿ ಒಟ್ಟು 750 ಹುಲಿಗಳು ಸಾವನ್ನಪ್ಪಿವೆ. ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 173, ಮಹಾರಾಷ್ಟ್ರದಲ್ಲಿ 125 ಹುಲಿಗಳು ಮೃತಪಟ್ಟಿದ್ದು, ಪಟ್ಟಿಯಲ್ಲಿ ಈ ರಾಜ್ಯಗಳು ಮೊದಲೆರಡು ಸ್ಥಾನದಲ್ಲಿವೆ.

    ಕರ್ನಾಟಕದಲ್ಲಿ 111 ಹುಲಿಗಳು ಮೃತಪಟ್ಟಿದ್ದು, ಅತಿ ಹೆಚ್ಚು ಹುಲಿಗಳು ಸಾವನ್ನಪ್ಪಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. 750 ಪ್ರಕರಣಗಳಲ್ಲಿ 369 ಹುಲಿಗಳು ನೈಸರ್ಗಿಕ ಕಾರಣಗಳಿಂದಾಗಿ, 168 ಹುಲಿಗಳು ಬೇಟೆಯಿಂದಾಗಿ, 70 ಹುಲಿಗಳು ಅನುಮಾನಾಸ್ಪದವಾಗಿ ಹಾಗೂ 42 ಹುಲಿಗಳು ಅಪಘಾತದಂತಹ ಘಟನೆಗಳಲ್ಲಿ ಮೃತಪಟ್ಟಿವೆ.

    ಇದನ್ನೂ ಓದಿ  ಪ್ಲೇಬಾಯ್ ರೂಪದರ್ಶಿ ಈಗ ಫುಟ್‌ಬಾಲ್ ಕ್ಲಬ್ ಒಡತಿ!

    2012ರಿಂದ 2019ರವರೆಗಿನ ಅವಧಿಯಲ್ಲಿ ಒಟ್ಟು 101 ಹುಲಿಗಳನ್ನು ರಕ್ಷಿಸಲಾಗಿದೆ ಎಂದು ಆರ್‌ಟಿಐ ಅರ್ಜಿಯೊಂದರ ಸಂಬಂಧ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಆರ್‌ಟಿಐ ಅರ್ಜಿಗೆ ನೀಡಿರುವ ಮಾಹಿತಿಯಲ್ಲ ತಿಳಿಸಿದೆ.

    ಉತ್ತರಾಖಂಡದಲ್ಲಿ 88, ತಮಿಳುನಾಡು ಮತ್ತು ಅಸ್ಸಾಂನಲ್ಲಿ ತಲಾ 54, ಕೇರಳ ಮತ್ತು ಉತ್ತರಪ್ರದೇಶದಲ್ಲಿ ತಲಾ 35, ರಾಜಸ್ಥಾನದಲ್ಲಿ 17, ಬಿಹಾರದಲ್ಲಿ 11, ಪಶ್ಚಿಮ ಬಂಗಾಳ ಮತ್ತು ಛತ್ತೀಸಗಢದಲ್ಲಿ ತಲಾ 10, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ತಲಾ 7, ತೆಲಂಗಾಣದಲ್ಲಿ 5, ದೆಹಲಿ ಮತ್ತು ನಾಗಾಲ್ಯಾಂಡ್‌ನಲ್ಲಿ ತಲಾ 2, ಆಂಧ್ರಪ್ರದೇಶ, ಹರಿಯಾಣ ಮತ್ತು ಗುಜರಾತ್‌ನಲ್ಲಿ ತಲಾ 1 ಹುಲಿಗಳು ಸಾವನ್ನಪ್ಪಿವೆ. ಕಳೆದ ಡಿಸೆಂಬರ್‌ನಲ್ಲಿ ಹುಲಿ ಸಂತತಿ ಬಗ್ಗೆ ಮಾಹಿತಿ ನೀಡಿದ್ದ ಕೇಂದ್ರ ಸರ್ಕಾರ, ನಾಲ್ಕು ವರ್ಷಗಳಲ್ಲಿ ಹುಲಿಗಳ ಸಂಖ್ಯೆ 2,226ರಿಂದ 2,976ಕ್ಕೆ ಏರಿಕೆಯಾಗಿದೆ ಎಂದಿದ್ದರು.

    ಶ್ರಾದ್ಧ ಮಾಡಿ ಮುಗಿಸಿದ್ದ ಮಕ್ಕಳಿಗೆ ಈಗ ಅಪ್ಪನನ್ನು ನೋಡುವ ತವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts