More

    ಕಿಡ್ನಿಯಲ್ಲಿತ್ತು 750 ಗ್ರಾಂ ಕಲ್ಲು: ಇದು ವೈದ್ಯಕೀಯ ಲೋಕದ ಅಚ್ಚರಿ

    ವಿಜಯಪುರ: ಮೂತ್ರಕೋಶದಲ್ಲಿದ್ದ 750 ಗ್ರಾಂ ತೂಕದ ಬೃಹತ್ ಕಲ್ಲು ಹೊರ ತೆಗೆಯುವ ಅಪರೂಪದ ಶಸ್ತ್ರ ಚಿಕಿತ್ಸೆಯೊಂದರಲ್ಲಿ ವೈದ್ಯಕೀಯ ತಂಡವೊಂದು ಯಶಸ್ವಿಯಾಗಿದೆ.

    ಇಲ್ಲಿನ ಶ್ರೀ ಭಾಗ್ಯವಂತಿ ಆಸ್ಪತ್ರೆಯಲ್ಲಿ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು ಜಿಲ್ಲೆಯ ವೈದ್ಯಕೀಯ ಕ್ಷೇತ್ರದ ಮಟ್ಟಿಗೆ ಇದೊಂದು ಅಪರೂಪ ಎನ್ನಲಾಗಿದೆ. ಸುಮಾರು 48 ವರ್ಷದ ವ್ಯಕ್ತಿಯ ಮೂತ್ರ ಕೋಶದಲ್ಲಿದ್ದ 750 ಗ್ರಾಮ್ ತೂಕದ ಕಲ್ಲು ಹೊರತೆಗೆಯಲಾಗಿದೆ.

    ಇದನ್ನೂ ಓದಿ ಸರ್ವ ರೋಗಕ್ಕೆ ಮದ್ದು ಕಾಡಹಾಗಲ

    ಕಳೆದೊಂದು ವರ್ಷದಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದು ಈ ವ್ಯಕ್ತಿಗೆ ಖ್ಯಾತ ವೈದ್ಯ ಡಾ. ಅಶೋಕ ಬಿರಾದಾರ ನೇತೃತ್ವದ ತಂಡ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದೆ. ವೈದ್ಯಕೀಯ ಭಾಷೆಯಲ್ಲಿ ಈ ಚಿಕಿತ್ಸೆಯನ್ನು ‘ಗೇಂಟ್ ವೆಸೈಕಲ್ ಕ್ಯಾಲಕ್ಯೂಲಸ್ ಅಥವಾ ಲಾರ್ಜ್ ಯೂರಿನರಿ ಬ್ಲ್ಯಾಡರ್ ಸ್ಟೋನ್’ ಎಂದು ಕರೆಯಲಾಗುತ್ತದೆ. ಈ ರೋಗದಿಂದ ರೋಗಿಯಲ್ಲಿ ಮೂತ್ರ ಸರಿಯಾಗಿ ಹೋಗದೇ ಇರುವುದು ಮೂತ್ರ ತಡೆಯುವುದರಿಂದ ಸಮಸ್ಯೆ ಉಂಟಾಗಿರುತ್ತದೆ ಎಂದು ಡಾ. ಬಿರಾದಾರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಮೂತ್ರಕೋಶ ಸಂಬಂಧಿತ ಸಮಸ್ಯೆಗಳಿಗೆ ಸುಲಭ ಪರಿಹಾರ ಹೇಮಸಾಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts