More

    7 ವರ್ಷದ ವೈದೃತಿಗೆ ಗೌರವ ಡಾಕ್ಟರೇಟ್ ಪ್ರದಾನ

    ನರಗುಂದ: ಪಟ್ಟಣದ 7 ವರ್ಷದ ಬಾಲಕಿ ವೈದೃತಿ ನಾಗರಾಜ ಕೋರಿಶೆಟ್ಟರ್​ಗೆ ತಮಿಳುನಾಡು ಯುನಿವರ್ಸಲ್ ವಿಶ್ವ ವಿದ್ಯಾಲಯ ಶನಿವಾರ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

    ನರಗುಂದದ ಸರ್.ಎಂ. ವಿಶ್ವೇಶ್ವರಯ್ಯ ಸಿಬಿಎಸ್​ಸಿ ಶಾಲೆಯ 2ನೇ ತರಗತಿಯ ಈ ಪುಟ್ಟ ಬಾಲಕಿ ಅಪಾರ ಜ್ಞಾಪಕ ಶಕ್ತಿ ಹೊಂದಿದ್ದು, ಇವಳ ಸ್ಮರಣ ಶಕ್ತಿ ಕಂಡವರು ಒಂದು ಕ್ಷಣ ಬೆರಗಾಗುತ್ತಾರೆ.

    ವೈದೃತಿ ಎಂದರೆ ಜಗತ್ತನ್ನೇ ಗೆದ್ದವಳು ಎಂದರ್ಥ. ಕೇಳಿದ ಪ್ರಶ್ನೆಗೆ ಪಟಪಟನೆ ಅಳ್ಳು ಉರಿದಂತೆ ಉತ್ತರಿಸುವ ಇವಳು ಇದೀಗ ಗದಗ ಜಿಲ್ಲೆ ಸೇರಿ ರಾಜ್ಯಾದ್ಯಂತ ಹೆಸರುವಾಸಿಯಾಗಿದ್ದಾಳೆ. ರಾಜಕೀಯ, ಇತಿಹಾಸ, ಕನ್ನಡ ಸೇರಿ ಪ್ರಾದೇಶಿಕ, ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದ 1500ಕ್ಕೂ ಅಧಿಕ ಪ್ರಶ್ನೆಗಳಿಗೆ ಸಲೀಸಾಗಿ ಉತ್ತರಿಸುತ್ತಾಳೆ.

    ಕನ್ನಡದ ಮೊದಲ ಪತ್ರಿಕೆ, ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಸಚಿವರು, ಶಾಸಕರು, ರಾಜ-ಮಹಾರಾಜರ ಆಳ್ವಿಕೆಯ ಕಾಲಾವಧಿ, ದೇಶದ ದೊಡ್ಡ ಮಸೀದಿ, ರಾಷ್ಟ್ರೀಯ ಪಕ್ಷಿ, ಪ್ರಾಣಿ, ನಿಂಬೆ ಹಣ್ಣಿನಲ್ಲಿರುವ ವಿಟಮಿನ್, ಕವಿಗಳ ಹೆಸರು, ಸಂಪೂರ್ಣ ಸಾಕ್ಷರತೆ ಸಾಧಿಸಿದ ರಾಷ್ಟ್ರ ಕುರಿತು ಕೇಳುವ ಪ್ರಶ್ನೆಗಳಿಗೆ ಪಟಪಟನೆ ಉತ್ತರಿಸುತ್ತಾಳೆ.

    ಈ ಬಾಲಕಿಯ ಅದ್ಭುತ ಸಾಧನೆ ಗುರುತಿಸಿ ತಮಿಳುನಾಡಿನ ಮಧುರೈನಲ್ಲಿ ಶನಿವಾರ ಆಯೋಜಿಸಿದ್ದ ಯುನಿವರ್ಸಲ್ ವಿಶ್ವ ವಿದ್ಯಾಲಯದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

    ಶ್ರೀ ಮಿತಿವಾನ್ ಅಡಿಕಲ್ ಸ್ವಾಮೀಜಿ, ವಿವಿಯ ಡಾ. ಎಂ. ಪಾಂಡಿರಾಜನ್, ಡಾ. ಎಸ್. ಮದನ್ ರಾಜ್, ಡಾ. ಎಸ್. ಸೋಲಿಸ್ ಮಾಲಿ, ಡಾ. ಸೊಳೆಯಮಲಾ ಅವರು ವೈದೃತಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.ಕರ್ನಾಟಕ ದರ್ಶನ ಸೇವಾ ಅಭಿವೃದ್ಧಿ ಸಂಸ್ಥೆ ನೀಡುವ ಕರ್ನಾಟಕ ಜ್ಞಾನ ಚಕ್ರವರ್ತಿ ರಾಷ್ಟ್ರೀಯ ಪ್ರಶಸ್ತಿ ಸೇರಿ ಅನೇಕ ಸಂಘ-ಸಂಸ್ಥೆಗಳು ಕೊಡ ಮಾಡುವ ಪ್ರಶಸ್ತಿಗೂ ವೈದೃತಿ ಆಯ್ಕೆಯಾಗಿದ್ದಾಳೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts