More

    ಐದು ಅಂತಸ್ತಿನ ಕಟ್ಟಡದ ಚಪ್ಪಡಿ ನೆಲಮಹಡಿಗೆ ಅಪ್ಪಳಿಸಿ 7 ಮಂದಿ ದಾರುಣ ಸಾವು

    ಮುಂಬೈ: ವಸತಿ ಕಟ್ಟಡದ ಚಪ್ಪಡಿ ಕುಸಿದು 7 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಹಾಸ್​ನಗರದಲ್ಲಿ ಶುಕ್ರವಾರ ನಡೆದಿದೆ. ನಾಲ್ಕರಿಂದ ಐದು ಮಂದಿ ಅವಶೇಷಗಳ ಅಡಿ ಸಿಲುಕಿರುವ ಮಾಹಿತಿ ಇದೆ.

    ಉಲ್ಹಾಸ್​ನಗರ ಮಹಾನಗರ ಪಾಲಿಕೆಯ ಪ್ರಕಾರ ನೆಹರೂ ಚೌಕ್​ ಬಳಿ ಘಟನೆ ನಡೆದಿದೆ. ಸಾಯಿ ಸಿದ್ಧಿ ಹೆಸರಿನ ಐದು ಅಂತಸ್ತಿನ ಕಟ್ಟಡದ ಚಪ್ಪಡಿ ಕುಸಿದು ದುರ್ಘಟನೆ ಸಂಭವಿಸಿದೆ. ಐದನೇ ಅಂತಸ್ತಿನಲ್ಲಿ ಕುಸಿದ ಚಪ್ಪಡಿಯು ನೆಲಮಹಡಿಯವರೆಗೂ ಅಪ್ಪಳಿಸಿ 8 ರಿಂದ 9 ಮಂದಿಯ ಮೇಲೆ ಬಿದ್ದಿದೆ. ಈ ಘಟನೆ ಶುಕ್ರವಾರ ರಾತ್ರಿ 9.30ರ ಸುಮಾರಿಗೆ ನಡೆದಿದೆ.

    ಉಲ್ಹಾಸ್​ನಗರ ಅಗ್ನಿಶಾಮಕ ದಳ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, 7 ಮಂದಿಯನ್ನು ಅವಶೇಷಗಳ ಅಡಿಯಿಂದ ಹೊರಗೆಳೆಯಲಾಗಿದ್ದು, ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು.

    ನಾಲ್ಕರಿಂದ ಐದು ಮಂದಿ ಇನ್ನು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಉಲ್ಹಾಸ್​ನಗರದಲ್ಲಿ ನಡೆದ ಎರಡನೇ ಘಟನೆ ಇದಾಗಿದ್ದು, ಮೇ 15ರಂದು ಉಲ್ಹಾಸ್​ನಗರ ಕ್ಯಾಂಪ್​ನ ಮೊಹಿನಿ ಪ್ಯಾಲೇಸ್​ ವಸತಿ ಕಟ್ಟಡದ ಚಪ್ಪಡಿ ಕುಸಿದು 5 ಮಂದಿ ಮೃತಪಟ್ಟಿದ್ದರು. (ಏಜೆನ್ಸೀಸ್​)

    ನನ್ನದು ನಿನ್ನ ಬಾಲ್​ಗಳಿಗಿಂತ ದೊಡ್ಡದು! ಅಶ್ಲೀಲ ಪ್ರಶ್ನೆ ಕೇಳಿದವನಿಗೆ ನಟಿಯ ಖಡಕ್​ ಉತ್ತರ

    ಫಿನ್​ಲ್ಯಾಂಡ್​ ಪ್ರಧಾನಿಯ ಬ್ರೇಕ್​ಫಾಸ್ಟ್​ ಬಿಲ್​ನಲ್ಲಿ ಅಕ್ರಮ ಶಂಕೆ: ಪೊಲೀಸ್​ ತನಿಖೆ ಘೋಷಣೆ

    ಆತ್ಮಹತ್ಯೆಯಿಂದ ಪತ್ನಿ ಸತ್ತ ಬೆನ್ನಿಗೇ ನೇಣು ಹಾಕಿಕೊಂಡ ಪತಿ; 4 ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಪ್ರೇಮಿಗಳು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts