More

    ಧಾರ್ಮಿಕ ಆಚರಣೆ ವೇಳೆ ದೇವಸ್ಥಾನದ ಟಿನ್​ ಶೆಡ್​ ಮೇಲೆ ಮರ ಬಿದ್ದು 7 ಮಂದಿ ದುರಂತ ಸಾವು

    ಅಕೋಲಾ: ಟಿನ್​ ಶೆಡ್​ ಮೇಲೆ ಬೃಹದಾಕಾರದ ಮರ ಬಿದ್ದು 7 ಮಂದಿ ಸಾವಿಗೀಡಾಗಿ 5ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಮಹಾರಾಷ್ಟ್ರದ ಅಕೋಲಾದಲ್ಲಿ ಭಾನುವಾರ ರಾತ್ರಿ ನಡೆದಿದೆ.

    ಬಿರುಗಾಳಿ ಮಳೆಗೆ ಉರುಳಿದ ಮರ
    ದೇವಸ್ಥಾನದ ಮುಂದೆ ಧಾರ್ಮಿಕ ಆಚರಣೆ ನಡೆಯುವಾಗ ರಾತ್ರಿ 7 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಬಿರುಗಾಳಿ ಸಹಿತ ಭಾರೀ ಮಳೆಗೆ ಧರೆಗುರುಳಿದ ಬೇವಿನ ಮರ, ದೇವಸ್ಥಾನದ ಆವರಣದಲ್ಲಿ ಭಕ್ತರ ಆಶ್ರಯಕ್ಕೆ ನಿರ್ಮಿಸಲಾಗಿದ್ದ ಟಿನ್​ ಶೆಡ್​ ಮೇಲೆ ಬಿದ್ದಿತು. ಪೊಲೀಸರ ಪ್ರಕಾರ ಘಟನೆಯ ವೇಳೆ 35 ರಿಂದ 40 ಜನರು ಶೆಡ್ ಅಡಿಯಲ್ಲಿ ಸಿಲುಕಿದ್ದರು ಮತ್ತು ಏಳು ಮಂದಿ ಪ್ರಾಣ ಕಳೆದುಕೊಂಡಿದ್ದು, 5ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಅಕೋಲಾ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

    ಇದನ್ನೂ ಓದಿ: ಒಂದು ಕಡೆ ಸಫಾರಿ ಇನ್ನೊಂದು ಕಡೆ ಸುಪಾರಿ! ಇದು ಬಿಜೆಪಿಯ (ಭರ)ವರಸೆ ಎಂದು ಎಚ್​ಡಿಕೆ ಆಕ್ರೋಶ

    ಆರ್ಥಿಕ ನೆರವು
    ಘಟನೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಅಧಿಕಾರಿಗಳು ತಕ್ಷಣ ರಕ್ಷಣಾ ಕಾರ್ಯ ಆರಂಭಿಸಿದರು. ಮರದ ಕಾಂಡ ಮತ್ತು ಕುಸಿದ ಶೆಡ್ ಅನ್ನು ಮೇಲೆತ್ತಲು ಜೆಸಿಬಿ ಯಂತ್ರಗಳನ್ನು ತರಲಾಯಿತು. ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮೃತರ ಸಾವಿಗೆ ಸಂತಾಪ ಸೂಚಿಸಿದ್ದು, ಸಿಎಂ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಮೃತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಿದೆ ಎಂದರು.

    ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ನಾವು ನಿರಂತರವಾಗಿ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಫಡ್ನವಿಸ್​ ಹೇಳಿದರು. (ಏಜೆನ್ಸೀಸ್​)

    ಸೋಲಾರ್ ಚಾಲಿತ ಉಳುಮೆ ಯಂತ್ರ; ರೈತಸ್ನೇಹಿ ಯಂತ್ರ ಸಿದ್ಧಪಡಿಸಿದ ವಿದ್ಯಾರ್ಥಿ

    ನೀವು ಕೂಡ ಒಂದು ಹೆಣ್ಣಿಗೆ ಹುಟ್ಟಿದವರಲ್ಲವೇ? ಅಭಿಮಾನಿ ಕಾಮೆಂಟ್​ಗೆ ಪವನ್ ಕಲ್ಯಾಣ್​ ಮಾಜಿ ಪತ್ನಿ ಕಣ್ಣೀರು

    ಪ್ರಚಾರದಲ್ಲಿ ಸುಂಟರಗಾಳಿ ಎಬ್ಬಿಸಲು ಬಿಜೆಪಿ ಪ್ಲ್ಯಾನ್; ಆಂಧ್ರ, ತೆಲಂಗಾಣ ಗಡಿ ಜಿಲ್ಲೆಗಳಲ್ಲಿ ಪವನ್ ಕಲ್ಯಾಣ್ ಗರ್ಜನೆ ನಿರೀಕ್ಷೆ | ಅಖಾಡದಲ್ಲಿ ತಾರೆಯರ ಮಿಂಚು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts