More

    ಸ್ಪೋರ್ಟ್ಸ್ ಕ್ಲಬ್‌ನ ಮೇಲ್ಛಾವಣಿ ಕುಸಿದು ಬಿದ್ದು 13 ಮಂದಿ ಸಾವು

    ಅರ್ಜೆಂಟೀನಾ: ಭಾರೀ ಮಳೆ ಮತ್ತು ಬಲವಾದ ಗಾಳಿಯು ಪ್ರಬಲ ಚಂಡಮಾರುತದಿಂದಾಗಿ ಸ್ಕೇಟಿಂಗ್ ಸ್ಪೋರ್ಟ್ಸ್ ಕ್ಲಬ್‌ನ ಛಾವಣಿಯು ಕುಸಿಯಿತು. ಸ್ಪೋರ್ಟ್ಸ್ ಕ್ಲಬ್‌ನ ಮೇಲ್ಛಾವಣಿ ಕುಸಿದಾಗ ಕನಿಷ್ಠ 13 ಜನರ ಸಾವಿಗೆ ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮೂಲಗಳ ಪ್ರಕಾರ, ಅರ್ಜೆಂಟೀನಾದಲ್ಲಿ ಚಂಡಮಾರುತಕ್ಕೆ ಕಟ್ಟಡದ ಮೇಲ್ಛಾವಣಿ ಕುಸಿದು 13 ಜನರು ಸಾವನ್ನಪ್ಪಿದ್ದಾರೆ. ಭೀಕರ ಚಂಡಮಾರುತಕ್ಕೆ ಸ್ಪೋರ್ಟ್ಸ್ ಕ್ಲಬ್‌ನ ಮೇಲ್ಛಾವಣಿ ಕುಸಿದಿದೆ. ಭಾರೀ ಮಳೆ ಮತ್ತು ಬಲವಾದ ಗಾಳಿಯು ಬಹಿಯಾ ಬ್ಲಾಂಕಾವನ್ನು ಅಪ್ಪಳಿಸಿತು, ಇದರಿಂದಾಗಿ ಸ್ಕೇಟಿಂಗ್ ಸ್ಪರ್ಧೆಯ ಮೇಲ್ಛಾವಣಿ ಕುಸಿದಿದೆ. ನಗರದಲ್ಲಿ ಗಂಟೆಗೆ 140 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಗಾಳಿ ಬೀಸುತ್ತಿದೆ. ಕೆಲವೆಡೆ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದೆ.

    ಬಹಿಯಾನ್ ಡೆಲ್ ನಾರ್ಟೆ ಕ್ಲಬ್‌ನಲ್ಲಿ ದುರದೃಷ್ಟವಶಾತ್ 13 ಜನರು ಸಾವನ್ನಪ್ಪಿದ್ದಾರೆ. ಅವಶೇಷಗಳಡಿ ಹಲವರು ಸಿಲುಕಿಕೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

    ನಗರದಲ್ಲಿ ಗಂಟೆಗೆ 140 ಕಿಲೋಮೀಟರ್ (87 ಮೈಲಿ) ಗಿಂತ ಹೆಚ್ಚು ವೇಗದ ಗಾಳಿ ದಾಖಲಾಗಿದೆ, ಅದರ ಕೆಲವು ಭಾಗಗಳು ವಿದ್ಯುತ್  ಇಲ್ಲದಂತಾಗಿದೆ.

    ಸಿಎಂಗಿಂತ ಅವರ ಪತ್ನಿಗೆ ಭದ್ರತೆ ಹೆಚ್ಚು; ಸರ್ಕಾರದ ಖಜಾನೆ ಬರಿದಾಗ್ತಿದೆ ಎಂದು ಆಕ್ರೋಶ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts