More

    ದ.ಕ. ಜಿಲ್ಲೆಯಲ್ಲಿ 7 ಹಗಲು ಕಂಬಳ

    ಮೂಡುಬಿದಿರೆ: ಕರೊನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಂಡು ಜಿಲ್ಲೆಯಲ್ಲಿ ಒಟ್ಟು 7 ಹಗಲು ಹಾಗೂ ಅಗತ್ಯವಿದ್ದರೆ 2 ದಿನಗಳ ಕಂಬಳ ಆಯೋಜಿಸಲು ಜಿಲ್ಲಾ ಕಂಬಳ ಸಮಿತಿ ನಿರ್ಧರಿಸಿದೆ. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ಅಧ್ಯಕ್ಷತೆಯಲ್ಲಿ ಶನಿವಾರ ಸಮಾಜ ಮಂದಿರದಲ್ಲಿ ಜಿಲ್ಲಾ ಕಂಬಳ ಸಮಿತಿಯ ವಾರ್ಷಿಕ ಮಹಾಸಭೆ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಂಡಿದೆ.

    ಜ.30ರಂದು ಹೊಕ್ಕಾಡಿಗೋಳಿ, ಫೆ.6ಕ್ಕೆ ಐಕಳ, 13ಕ್ಕೆ ವಾಮಂಜೂರು ತಿರುವೈಲ್ ಗುತ್ತು, 20ಕ್ಕೆ ಮೂಡುಬಿದಿರೆ ಕೋಟಿ ಚೆನ್ನಯ, 27ರಂದು ಮಿಯಾರು, ಮಾ.6 ಬಂಗ್ರ ಕೂಳೂರು, 20ರಂದು ವೇಣೂರು ಪೆರ್ಮುಡದಲ್ಲಿ ಕಂಬಳ ಆಯೋಜನೆಗೆ ದಿನಾಂಕ ನಿಗದಿಪಡಿಸಲಾಯಿತು. ಕೊನೆಗೆ ಬಂಗಾಡಿ ಕಂಬಳ ಆಯೋಜಿಸಲಾಗುವುದು, ದಿನಾಂಕವನ್ನು ಮುಂದಿನ ದಿನಗಳಲ್ಲಿ ನಿಗದಿ ಪಡಿಸಲು ಸಮಿತಿ ತಿರ್ಮಾನಿಸಿತು.

    ಈ ಬಾರಿ ಕಂಬಳ ಮಾಡುತ್ತೇವೆ. ಜಿಲ್ಲಾಧಿಕಾರಿ ಬಳಿ ಮನವಿ ಸಲ್ಲಿಸಿದ್ದೇವೆ. ಅವರು ಕೋವಿಡ್ ಕ್ರಮಗಳನ್ನು ಪಾಲಿಸಿ ಮತ್ತು ವೇದಿಕೆಗಳಲ್ಲಿ ಜನಸಂಖ್ಯೆ ಕಾಯ್ದುಕೊಂಡು ಶಿಸ್ತುಬದ್ಧವಾಗಿ ಆಯೋಜಿಸುವಂತೆ ತಿಳಿಸಿದ್ದಾಗಿ ವಾಮಂಜೂರು ತಿರುವೈಲ್ ಗುತ್ತಿನ ಕಂಬಳದ ಯಜಮಾನ ನವೀನ್‌ಚಂದ್ರ ಆಳ್ವ ಹೇಳಿದರು. ಜಿಲ್ಲಾ ಕಂಬಳ ಸಮಿತಿ ಗೌರವಾಧ್ಯಕ್ಷ ಭಾಸ್ಕರ್ ಎಸ್.ಕೋಟ್ಯಾನ್, ಸಮಯಕ್ಕೆ ಆದ್ಯತೆ ನೀಡಿದರೆ ನಿಗದಿತ ಸಮಯದಲ್ಲಿ ಕಂಬಳ ಮುಗಿಸಲು ಸಾಧ್ಯವಿದೆ. ಎಲ್ಲರೂ ಮನಸ್ಸು ಮಾಡಬೇಕಾಗಿದೆ ಎಂದರು.

    ಜಿಲ್ಲಾ ಕಂಬಳ ಸಮಿತಿ ಮಾಜಿ ಕಾರ್ಯದರ್ಶಿ ವಿಜಯಕುಮಾರ್ ಕಂಗಿನಮನೆ, ಕಂಬಳ ನೋಡಲು ಬರುವವರು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬರುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

    ಜಿಲ್ಲಾ ಸಮಿತಿಯ ಬಾರ್ಕೂರು ಶಾಂತಾರಾಮ ಶೆಟ್ಟಿ, ಮಾಳ ದಿನೇಶ್, ರೋಹಿತ್ ಹೆಗ್ಡೆ, ಚಂದ್ರಹಾಸ ಸನಿಲ್, ಜೆ.ಸದಾನಂದ ಶೆಟ್ಟಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ರಾಜೀವ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

    ಸಮಿತಿ ರಚನೆ ಮುಂದಕ್ಕೆ: ನೂತನ ಸಮಿತಿ ರಚನೆ ಬಗ್ಗೆ ಸಭೆಯಲ್ಲಿ ಚರ್ಚಿಸಿದಾಗ, ಈಗ ಹೊಸ ಸಮಿತಿ ರಚನೆ ಬೇಡ. ಈ ವರ್ಷದ ಕಂಬಳ ಮುಗಿದ ನಂತರ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡುವುದು ಒಳಿತು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಈ ಹಿನ್ನಲೆಯಲ್ಲಿ ಸಮಿತಿ ರಚನೆ ಮುಂದೂಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts