More

    ಪೊಲೀಸ್​ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಏಳು ಜನ ಬಂಧನ

    ಲಖನೌ: ಪೊಲೀಸ್‌ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಪೊಲೀಸ್ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮೀರತ್ ಮತ್ತು ದೆಹಲಿಯ ಏಳು ಜನರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಸಾಮೂಹಿಕ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಪರೀಕ್ಷೆಯನ್ನು ರದ್ದುಗೊಳಿಸಿತ್ತು.

    ಇದನ್ನೂ ಓದಿ:ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾಗೆ ಕರೊನಾ ಪಾಸಿಟಿವ್!

    ಉತ್ತರ ಪ್ರದೇಶ ಸರ್ಕಾರ ಮಂಗಳವಾರ ಮಾರ್ಚ್​ 05 ರಂದು ಪೊಲೀಸ್ ನೇಮಕಾತಿ ಮತ್ತು ಬಡ್ತಿ ಮಂಡಳಿಯ ಅಧ್ಯಕ್ಷೆ ಸ್ಥಾನದಿಂದ ರೇಣುಕಾ ಮಿಶ್ರಾ ಅವರನ್ನು ವಜಾಗೊಳಿಸಿತ್ತು. ಆರೋಪಿಗಳು ಫೆಬ್ರವರಿ 17 ಮತ್ತು 18 ರಂದು ನಡೆದ ಉತ್ತರ ಪ್ರದೇಶದ ನೇಮಕಾತಿ ಮತ್ತು ಬಡ್ತಿ ಮಂಡಳಿಯ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ಗ್ಯಾಂಗ್‌ನ ಸದಸ್ಯರಾಗಿದ್ದಾರೆ ಎಂದು ಎಸ್‌ಟಿಎಫ್ ಹೇಳಿಕೆಯಲ್ಲಿ ತಿಳಿಸಿದೆ.

    ಮೀರತ್‌ನಲ್ಲಿ ಅರೋಪಿಗಳಾದ ದೀಪಕ್, ಬಿಟ್ಟು, ಪ್ರವೀಣ್, ರೋಹಿತ್, ನವೀನ್, ಸಾಹಿಲ್ ಅವರನ್ನು ಮಂಗಳವಾರ ರಾತ್ರಿ ಕಂಕೇರ್ ಖೇಡಾ ಪೊಲೀಸ್ ಠಾಣೆಯ ಮನೆಯೊಂದರಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅದೇ ದಿನ ರಾತ್ರಿ ದೆಹಲಿಯ ಮುಖರ್ಜಿ ನಗರದಲ್ಲಿ ಗೌತಮ್ ಬುದ್ಧನಗರ ನಿವಾಸಿ ಪ್ರಮೋದ್ ಪಾಠಕ್ ಅವರನ್ನು ಬಂಧಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಪೇಪರ್-ಸಾಲ್ವರ್‌ಗಳ ವ್ಯವಸ್ಥೆ ಮತ್ತು ಪ್ರಶ್ನೆಗಳನ್ನು ಸೋರಿಕೆ ಮಾಡುವಲ್ಲಿ ಅವರ ಗ್ಯಾಂಗ್ ಭಾಗಿಯಾಗಿದೆ ಎಂದು ಎಸ್‌ಟಿಎಫ್ ಹೇಳಿದೆ.

    ಆರೋಪಿಗಳಿಂದ 2024ರ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ ಹಲವು ದಾಖಲೆಗಳು, ಪ್ರಶ್ನೆಪತ್ರಿಕೆಗಳು, ಹಲವು ಮೊಬೈಲ್ ಫೋನ್‌ಗಳು ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಶ್ನೆಪತ್ರಿಕೆ ಸೋರಿಕೆ ಮಾಡುವುದಾಗಿ ಆರೋಪಿಗಳು ಅಭ್ಯರ್ಥಿಗಳಿಂದ ತಲಾ 8 ರಿಂದ 10 ಲಕ್ಷದವರೆಗೆ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

    ರಾಕ್ಷಸಿ ತಾಯಿಯಿಂದಲೇ ಚಿತ್ರಹಿಂಸೆಗೊಳಗಾದ ಮಗುವನ್ನು ನೋಡಬೇಕು ಎಂದಿದ್ದೇಕೆ ಧ್ರುವ ಸರ್ಜಾ! ಹೀಗ್ಯಾಕೆ ಹೇಳಿದ್ರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts