More

    7.28 ಕೋಟಿ ರೂ. ನಿವ್ವಳ ಲಾಭ

    ಚಿಕ್ಕೋಡಿ: ಅಂಕಲಿಯ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿಯು ಕಳೆದ ಆರ್ಥಿಕ ವರ್ಷದಲ್ಲಿ 7,28,16,129 ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಹಕಾರಿ ಅಧ್ಯಕ್ಷ ಮಹಾಂತೇಶ ಪಾಟೀಲ ತಿಳಿಸಿದ್ದಾರೆ.

    ಸಹಕಾರಿ ಸಭಾಗೃಹದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, 34,770 ಸದಸ್ಯರನ್ನು ಹೊಂದಿರುವ ಸಹಕಾರಿಯು 2,33,37,900 ರೂ. ಷೇರು ಬಂಡವಾಳ, 29,51,75,852 ರೂ. ಕಾಯ್ದಿಟ್ಟ ನಿಧಿ, 9,00,00,22,281.49 ರೂ. ಠೇವು, 6,71,65,10,477 ರೂ. ಸಾಲ ಹಾಗೂ ಮುಂಗಡ, 2,16,23,32,287 ರೂ. ಗುಂತಾವಣೆ, 1,19,15,40,528 ರೂ. ಬ್ಯಾಂಕ್ ಠೇವು, 9,31,85,36,033 ರೂ. ದುಡಿಯುವ ಬಂಡವಾಳದೊಂದಿಗೆ ವಾರ್ಷಿಕ 7,794,78,46,605 ವಹಿವಾಟು ಹೊಂದಿರುವ ನಾಡಿನ ಪ್ರತಿಷ್ಠಿತ ಸಹಕಾರಿ ಎಂಬ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

    ಡಾ. ಪ್ರಭಾಕರ ಕೋರೆ ಅವರ ಹುಟ್ಟೂರಾದ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ 1998ರಲ್ಲಿ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ಸ್ಥಾಪಿಸಲಾಗಿತ್ತು. ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಚಾಲನೆ ನೀಡಿದ್ದರು. 257 ಸದಸ್ಯರು ಹಾಗೂ 1,71,059 ರೂ. ಠೇವುಗಳೊಂದಿಗೆ ಪ್ರಾರಂಭಗೊಂಡಿರುವ ಸಂಸ್ಥೆ ಹೆಮ್ಮರವಾಗಿ ಬೆಳೆದು ರಾಜ್ಯಾದ್ಯಂತ ಇಂದು 39 ಶಾಖೆ ಹೊಂದಿದೆ. ಅಂಕಲಿಯಲ್ಲಿ ಪ್ರಧಾನ ಕಚೇರಿ ಹಾಗೂ ಚಂದೂರ, ಕೇರೂರ, ದಿಗ್ಗೇವಾಡಿ ಹಾಗೂ ಬೆಳಗಾವಿಗಳಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.

    ಸಾಮಾಜಿಕ ಸೇವೆಗೂ ಸೈ: ಸಹಕಾರಿಯು ಕೇವಲ ಗ್ರಾಹಕರಿಗೆ ಸಾಲ ನೀಡಿ ಮರುಪಾವತಿಗಷ್ಟೇ ಸೀಮಿತವಾಗದೆ ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡಿದೆ. ಕೆಎಲ್‌ಇ ಆಸ್ಪತ್ರೆಯ ಉಚಿತ ಚಿಕಿತ್ಸಾ ವಿಭಾಗಗಳಲ್ಲಿ ಒಂದು ದಿನದ ಉಚಿತ ಆಹಾರ ವಿತರಣೆ, ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಹಾಗೂ ನೆರೆ ಸಂತ್ರಸ್ತರಿಗೆ ಅಗತ್ಯ ಆರ್ಥಿಕ ನೆರವು ನೀಡಲಾಗುತ್ತಿದೆ. ಅಲ್ಲದೆ, ಪ್ರತಿವರ್ಷ ಸಂಸ್ಥಾಪಕರ ಜನ್ಮದಿನದ ಅಂಗವಾಗಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.
    ಕಡಿಮೆ ಬಡ್ಡಿ ದರದಲ್ಲಿ ಸಾಲ: ಸಹಕಾರಿಯಿಂದ 850 ಬೈಕ್, ಶಿವಶಕ್ತಿ ಕಾರ್ಖಾನೆಯ 975 ರೈತರಿಗೆ ಚಕ್ಕಡಿ ವಾಹನಕ್ಕೆ (ಪವರ್ ಕಾರ್ಟ್), 37 ಟ್ರ್ಯಾಕ್ಟರ್, 12 ಟಾಟಾ ಸುಮೋ ಟ್ರ್ಯಾಕ್ಸ್ ಮತ್ತು ಏತ ನೀರಾವರಿ ಸಲುವಾಗಿ ಸಹಕಾರಿ ವತಿಯಿಂದ 1,025 ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ 30.90 ಕೋಟಿ ರೂ. ಸಾಲ ವಿತರಿಸಲಾಗಿದೆ. ಸಹಕಾರಿಯು ಇಷ್ಟೊಂದು ಪ್ರಗತಿ ಹೊಂದಲು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಅವರ ಪರಿಶ್ರಮವೇ ಕಾರಣ. ಅವರ ನೇತೃತ್ವದಲ್ಲಿ ಸಹಕಾರಿಯು ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಭವಿಷ್ಯದಲ್ಲಿ ಸಹಕಾರಿಯಿಂದ ಸಾರ್ವಜನಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದು ಎಂದರು.

    ಸುದ್ದಿಗೋಷ್ಠಿಯಲ್ಲಿ ಸಹಕಾರಿ ಉಪಾಧ್ಯಕ್ಷೆ ಶೋಭಾ ಜಕಾತೆ, ಸಂಚಾಲಕರಾದ ಮಲ್ಲಿಕಾರ್ಜುನ ಕೋರೆ, ಸಿದ್ದಗೌಡ ಮಗದುಮ್ಮ, ಅಣ್ಣಾಸಾಹೇಬ ಸಂಕೇಶ್ವರಿ, ಪಿಂಟು ಹಿರೇಕುರಬರ, ಮಹಾದೇವ ಪೋಳ, ಶೈಲಜಾ ಪಾಟೀಲ,ಬಸನಗೌಡ ಆಸಂಗಿ, ಡಾ.ಸುಕುಮಾರ ಚೌಗಲಾ, ಲಿಂಬಾಜಿ ನಾಗರಾಳೆ, ಕಾಡಪ್ಪ ಸಂಗೋಟೆ, ಜ್ಯೋತಿಗೌಡ ಪಾಟೀಲ, ಸಚಿನ ಕುಠೋಳೆ, ಗಣಪತಿ ಕಮತೆ, ಜಯಶ್ರೀ ಮೇದಾರ, ಪಾರ್ವತಿ ಧರನಾಯಕ, ಪ್ರಧಾನ ವ್ಯವಸ್ಥಾಪಕ ದೇವೇಂದ್ರ ಕರೋಶಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts