More

    7ನೇ ತರಗತಿವರೆಗೂ ಆನ್​ಲೈನ್ ಶಿಕ್ಷಣ ಬೇಡ

    ಶಿವಮೊಗ್ಗ: ಒಂದರಿಂದ ಏಳನೇ ತರಗತಿವರೆಗೂ ಆನ್​ಲೈನ್ ಶಿಕ್ಷಣ ಒಳ್ಳೆಯದಲ್ಲ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. ಆನ್​ಲೈನ್ ಶಿಕ್ಷಣದ ಬಗ್ಗೆ ರ್ಚಚಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಜು.17ರಂದು ಮಾಜಿ ಶಿಕ್ಷಣ ಸಚಿವರ ಸಭೆ ಕರೆದಿದ್ದು, ಅಲ್ಲಿ ಪೂರ್ವಾಪರ ರ್ಚಚಿಸಿ ನಿರ್ದಿಷ್ಟ ಅಭಿಪ್ರಾಯ ತಿಳಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    7ನೇ ತರಗತಿವರೆಗೂ ಆನ್​ಲೈನ್ ಶಿಕ್ಷಣ ಬೇಡ. ಬೇರೆ ಯಾವ ವಿಧಾನದ ಮೂಲಕ ಹೋಮ್ ವರ್ಕ್ ಅಥವಾ ಮನೆಯಲ್ಲಿ ಶಿಕ್ಷಣ ನೀಡುವ ಕುರಿತು ಯೋಚನೆ ಮಾಡಬೇಕು ಎಂದರು.

    ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಕುರಿತು ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದರೆ ಸುರೇಶ್ ಕುಮಾರ್ ಸಮರ್ಥರಿದ್ದಾರೆ ಎಂಬುದು ನನಗೂ ತಿಳಿದಿತ್ತು. ಹಾಗಾಗಿ ಎಷ್ಟೇ ಕಷ್ಟವಾದರೂ ಪರೀಕ್ಷೆ ನಡೆಸಬೇಕೆಂದು ಹೇಳಿದ್ದೆ ಎಂದು ನೆನಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts