More

    ಕಲ್ಲು ತೂರಾಟ ನಡೆಸಿದ 68 ಮಂದಿ ಗಲಭೆಕೋರರ ಬಂಧನ

    ಪ್ರಯಾಗರಾಜ್​: ಭಾರೀ ಗಲಭೆ ಸೃಷ್ಟಿಸಿದ್ದ ಗಲಭೆಕೋರರ ಪೈಕಿ ಈವರೆಗೆ ಉತ್ತರ ಪ್ರದೇಶದ ಪೊಲೀಸರು 68 ಮಂದಿಯನ್ನು ಬಂಧಿಸಿದ್ದಾರೆ.

    ಸಂಗಮ್​ ಪಟ್ಟಣದ ಅಟಾಲಾದಲ್ಲಿ ಶುಕ್ರವಾರ ನಡೆದ ಗಲಭೆಯಲ್ಲಿ ಸುಮಾರು 5000 ಗಲಭೆಕೋರರು ಪಾಲ್ಗೊಂಡಿದ್ದರು. ಈ ಪೈಕಿ ಸಿಸಿಟಿವಿ ಸಹಾಯದೊಂದಿಗೆ 68 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಇನ್ನುಳಿದವರ ಶೋಧ ಮುಂದುವರಿಸಲಾಗಿದ್ದು, ಗಲಭೆಯಲ್ಲಿ ಕಲ್ಲು ತೂರಾಟ ನಡೆಸಿದ ಹಲವರನ್ನು ಸಿಸಿಟಿವಿ ಸಹಾಯದಿಂದ ಪತ್ತೆ ಹಚ್ಚಲಾಗುತ್ತಿದೆ ಎಂದು ಪ್ರಯಾಗ್​​ ರಾಜ್​ ಪೊಲೀಸ್ ಅಧಿಕಾರಿ ಅಜಯ್​ ಕುಮಾರ್​ ತಿಳಿಸಿದ್ದಾರೆ.

    ಸದ್ಯ 144ಸೆಕ್ಷನ್​ ಜಾರಿಗೊಳಿಸಲಾಗಿದ್ದು, ಜನರ ಗುಂಪು ಸೇರದಂತೆ ಸೂಚನೆ ನೀಡಲಾಗಿದೆ. ಶನಿವಾರವೂ ಅಂಗಡಿ ಮುಗ್ಗಟ್ಟುಗಳು ಬಂದ್​ ಆಗಿದೆ. ಇನ್ನುಳಿದ ಗಲಭೆಕೋರರ ಬಂಧನಕ್ಕೆ ಸಿಸಿಟಿವಿ ದೃಶ್ಯಾವಳಿಗಳ ಸಹಾಯ ಪಡೆಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಯೋಗ, ಯೋಗ್ಯತೆ ಇದ್ದವರು ಯಾರು ಬೇಕಾದ್ರೂ ಸಿಎಂ ಆಗಬಹುದು: ಸಚಿವ ಬಿ.ಸಿ.ಪಾಟೀಲ್​

    ಶಾಕಿಂಗ್​: ಪ್ರಿಯಕರನ ಜತೆ ಸೇರಿ ತಾಯಿಗೆ ಚಾಕುವಿನಿಂದ ಇರಿದ ಮಗಳು!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts