More

    ಮೋದಿಗೆ ಜನರ ಮನ್ನಣೆ: ಕೇಂದ್ರ ಸರ್ಕಾರದ ಆಡಳಿತಕ್ಕೆ ಶೇ. 67 ಜನರಿಂದ ಮೆಚ್ಚುಗೆ..

    ನವದೆಹಲಿ: ದೇಶದಲ್ಲಿ ಬೆಲೆ ಏರಿಕೆ ಮತ್ತು ನಿರುದ್ಯೋಗ ಪ್ರಮಾಣ ಏರಿಕೆಯಾಗುತ್ತಿರುವ ಬಗ್ಗೆ ಸಾರ್ವಜನಿಕ ವರ್ಗದಲ್ಲಿ ಕಳವಳವಿದ್ದರೂ, ಕರೊನಾ ಮಹಾಮಾರಿ ಪ್ರಾರಂಭವಾದಲ್ಲಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕುರಿತ ಶ್ರೇಯಾಂಕ ಅತ್ಯಧಿಕ ಮಟ್ಟಕ್ಕೆ ಏರಿದೆ ಸಮೀಕ್ಷೆಯೊಂದರ ವರದಿಯಲ್ಲಿ ದಾಖಲಾಗಿದೆ.

    ಲೋಕಲ್ ಸರ್ಕಲ್ಸ್ ಸಂಸ್ಥೆಯು 64,000 ಜನರನ್ನು ಮಾತನಾಡಿಸಿ, ಸರ್ಕಾರದ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದೆ. 67% ಜನರ ಪ್ರಕಾರ ಮೋದಿ ಸರ್ಕಾರವು ಎರಡನೇ ಅವಧಿಯಲ್ಲಿ ಜನರ ನಿರೀಕ್ಷೆಗಳನ್ನು ಪೂರೈಸಿದೆ ಮತ್ತು ಪೂರೈಕೆ ಪ್ರಮಾಣವೂ ನಿರೀಕ್ಷೆಯನ್ನು ಮೀರಿಸಿದೆ. ಕಳೆದ ವರ್ಷದ 51%ಕ್ಕೆ ಹೋಲಿಸಿದರೆ ಈ ಬಾರಿ ಏರಿಕೆಯಾಗಿರುವುದು ಸ್ಪಷ್ಟ. ಕರೊನಾ ಸೋಂಕುಗಳ ಎರಡನೇ ಅಲೆ ಕ್ರೂರತೆಯಿಂದಾಗಿ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡರೂ ಸರ್ಕಾರದ ಕಾರ್ಯನಿರ್ವಹಣೆ ಈ ಜನರಿಗೆ ತೃಪ್ತಿ ತಂದಿದೆ. 2020ರಲ್ಲಿ ಸಾಂಕ್ರಾಮಿಕ ಪ್ರಾರಂಭವಾಗಿದ್ದಾಗ ಮೋದಿ ಬಗೆಗಿನ ಒಪ್ಪಿಗೆ ಪ್ರಮಾಣ 62%ರಷ್ಟಿತ್ತು.

    ಕರೊನಾ 3ನೇ ಅಲೆಯನ್ನು ನಿಭಾಯಿಸಲು ಸರ್ಕಾರ ಸಿದ್ಧವಾಗಿದೆ, ಆರ್ಥಿಕತೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಮಂದಿ ಹೇಳಿದ್ದಾರೆ. ಆದರೂ ಈ ವರ್ಷದ ಆರಂಭದಿಂದಲೂ ನಿರುದ್ಯೋಗ ಪ್ರಮಾಣ 7%ರಷ್ಟು ಉಳಿದುಕೊಂಡಿರು ವುದು ಜನರ ಕಳವಳಕ್ಕೆ ಕಾರಣವಾಗಿದೆ. ಸಮೀಕ್ಷೆಯಲ್ಲಿದ್ದ 47% ಜನರು ಸರ್ಕಾರಕ್ಕೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. 37%ರಷ್ಟು ಮಂದಿಗೆ ನಿರುದ್ಯೋಗ ನಿರ್ವಹಣೆಯಲ್ಲಿ ಸರ್ಕಾರದ ಮೇಲಿನ ವಿಶ್ವಾಸ ಹೆಚ್ಚಿದೆ. 2021ರಲ್ಲಿ ಈ ಪ್ರಮಾಣ 27% ಮತ್ತು 2020ರಲ್ಲಿ 29%ರಷ್ಟಿತ್ತು. ಗ್ರಾಮೀಣ ಉದ್ಯೋಗ ಖಾತರಿ ಕಾರ್ಯಕ್ರಮ ನಿರುದ್ಯೋಗಿಗಳಿಗೆ ಸಹಾಯ ಮಾಡಿದರೂ, ವಲಸೆ ಕಾರ್ವಿುಕರು ನಗರಗಳಲ್ಲಿ ತಮ್ಮ ಉದ್ಯೋಗ ಕಳೆದುಕೊಂಡರು. ದೇಶದ ಚಿಲ್ಲರೆ ಹಣದುಬ್ಬರವು ಎಂಟು ವರ್ಷಗಳ ಗರಿಷ್ಠ ಮಟ್ಟ ತಲುಪಿದ್ದರೂ ಮೋದಿ ನಾಯಕತ್ವಕ್ಕೆ ಮನ್ನಣೆ ಸಿಕ್ಕಿರುವುದು ಗಮನಾರ್ಹ. ಬೆಲೆ ಏರಿಕೆ ರಾಜಕೀಯವಾಗಿ ಸೂಕ್ಷ್ಮ ವಿಷಯ. ಹೀಗಾಗಿಯೇ, ಸರ್ಕಾರ ಗೋಧಿ ಮತ್ತು ಸಕ್ಕರೆಯ ರಫ್ತುಗಳನ್ನು ನಿರ್ಬಂಧಿಸಿ, ಬೆಲೆ ಹೆಚ್ಚಳವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿದೆ. ಮೋದಿ ಸರ್ಕಾರದ ಕಳೆದ ಮೂರು ವರ್ಷದ ಅವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಮತ್ತು ಜೀವನ ವೆಚ್ಚ ಪ್ರಮಾಣ ಕುಸಿದಿಲ್ಲ ಎಂದು 73% ಭಾರತೀಯರು ಹೇಳಿರುವುದು ಉಲ್ಲೇಖಾರ್ಹ. 2024ರ ಲೋಕಸಭೆ ಚುನಾವಣೆಗೆ ಇದು ಪ್ರಮುಖ ಚರ್ಚಾ ವಿಷಯ ಆಗಲೂಬಹುದು.

    ಮೋದಿಗೆ ಜನರ ಮನ್ನಣೆ: ಕೇಂದ್ರ ಸರ್ಕಾರದ ಆಡಳಿತಕ್ಕೆ ಶೇ. 67 ಜನರಿಂದ ಮೆಚ್ಚುಗೆ..

    ವಿಷವೃತ್ತದಿಂದ ಭಾರತ ಹೊರಬರುತ್ತಿದೆ

    2014ಕ್ಕೆ ಮುನ್ನ ದೇಶದಲ್ಲಿ ಆಳವಾಗಿದ್ದ ಭ್ರಷ್ಟಾಚಾರ, ಹಗರಣ, ಸ್ವಜನಪಕ್ಷಪಾತ, ದೇಶಾದ್ಯಂತ ಹರಡಿದ್ದ ಭಯೋತ್ಪಾದಕ ಸಂಘಟನೆಗಳು, ಪ್ರಾದೇಶಿಕ ತಾರತಮ್ಯದ ವಿಷವೃತ್ತದಿಂದ ಭಾರತ ಹೊರಬರುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತಮ್ಮ ಸರ್ಕಾರದ ಎಂಟು ವರ್ಷಗಳ ಅವಧಿ ಪೂರ್ಣಗೊಂಡ ಹಿನ್ನೆಲೆ ಹಾಗೂ ಪಿಎಂ ಕೇರ್ಸ್ ಯೋಜನೆ ಅಡಿ ಲಾಭಾಂಶ ಬಿಡುಗಡೆ ಮಾಡಿ ಮಾತನಾಡಿದ ಅವರು, ದೇಶದ ಆತ್ಮವಿಶ್ವಾಸ ಮತ್ತು ಜನರ ಆತ್ಮಸ್ಥೈರ್ಯ ಅಭೂತಪೂರ್ವ ಪ್ರಮಾಣದಲ್ಲಿದೆ. ಕೋವಿಡ್​ನ ಋಣಾತ್ಮಕ ಪರಿಣಾಮದಿಂದ ಜನರು ಹೊರಬಂದು, ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಕಷ್ಟದ ದಿನಗಳೂ ಇಲ್ಲವಾಗಿಬಿಡುತ್ತವೆ ಎಂಬುದಕ್ಕೆ ಇದೇ ನಿದರ್ಶನ ಮಕ್ಕಳೇ ಎಂದು ತಿಳಿಸಿದರು. ನಿಮ್ಮ ಕುಟುಂಬದ ಸದಸ್ಯರಾಗಿ ಕಷ್ಟಗಳನ್ನು ಕಡಿಮೆ ಮಾಡಲು, ಬಡವರ ಜೀವನ ಸುಧಾರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇವೆ. ತಂತ್ರಜ್ಞಾನದ ಬಳಕೆ ಹೆಚ್ಚಿಸಿ ಬಡವರು ತಮ್ಮ ಹಕ್ಕುಗಳನ್ನು ಪಡೆಯುವದನ್ನು ಈ ಸರ್ಕಾರ ಖಾತರಿಪಡಿಸಿದೆ. ಕಡು ಬಡವರಲ್ಲೂ ಸರಕಾರದ ಯೋಜನೆಗಳ ಲಾಭ ಪಡೆಯುವ ವಿಶ್ವಾಸವಿದೆ. ದೇಶದ ಯುವಶಕ್ತಿ ಭಾರತದ ಯಶಸ್ವಿ ಪಯಣ ವನ್ನು ಮುನ್ನಡೆಸುತ್ತಿದೆ. ನಿಮ್ಮ ಕನಸುಗಳ ಈಡೇರಿಕೆಗೆ ಜೀವನ ಮುಡಿಪಾಗಿಡಿ ಎಂದು ಪ್ರಧಾನಿ ಹಾರೈಸಿದ್ದಾರೆ.

    ಇಂದು ಶಿಮ್ಲಾದಲ್ಲಿ ರ‍್ಯಾಲಿ: ಪ್ರಧಾನಿ ಮೋದಿ ಮಂಗಳವಾರ ಶಿಮ್ಲಾಗೆ ಭೇಟಿ ನೀಡಲಿದ್ದು, ಬಿಜೆಪಿ ಸರ್ಕಾರ 8 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೃಹತ್ ರ‍್ಯಾಲಿ ನಡೆಸಲಿದ್ದಾರೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಜತೆ ಅವರು ಸಂವಾದ ನಡೆಸಲಿದ್ದಾರೆ. ಗರೀಬ್ ಕಲ್ಯಾಣ ಸಮ್ಮೇಳನದಲ್ಲೂ ಭಾಗಿಯಾಗಲಿದ್ದಾರೆ.

    ಮತದಾನ ಕೇಂದ್ರದಲ್ಲಿ ಮದ್ಯಪಾನ ಪರೀಕ್ಷೆಗೆ ಮನವಿ; ಪ್ರತಿಕ್ರಿಯಿಸಿದ ಚುನಾವಣಾಧಿಕಾರಿ…

    https://www.vijayavani.net/bbmp-staff-surprised-by-the-lokayuktha-letter/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts