More

    ಕೆಎಸ್ಆರ್​ಟಿಸಿಗೆ 60 ವರ್ಷ ಪೂರೈಸಿದ ಸಂಭ್ರಮ: ರಾಜಧಾನಿಯಲ್ಲಿ ಅದ್ಧೂರಿ ಆಚರಣೆ

    ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್​ಟಿಸಿ)ಗೆ 60 ವರ್ಷಗಳನ್ನು ಪೂರೈಸಿದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​​ನಲ್ಲಿ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಕೆಎಸ್​ಆರ್​ಟಿಸಿ 60 ವಸಂತಗಳ ಅಂಚೆ ಲಕೋಟೆ ಬಿಡುಗಡೆ ಮಾಡಲಾಯಿತು. ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಅಪಘಾತರಹಿತವಾಗಿ ಸೇವೆ ಸಲ್ಲಿಸಿರುವ ಚಾಲಕರಿಗೆ ಮುಖ್ಯ ಮಂತ್ರಿಗಳ ಚಿನ್ನದ ಪದಕ ಪ್ರದಾನಿಸಲಾಯಿತು.

    ಕೆಂಪೇಗೌಡ ಬಸ್ ನಿಲ್ದಾಣಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಕೆಎಸ್ಆರ್ಟಿಸಿ ಸಿಬ್ಬಂದಿ, ಕುಟುಂಬದವರು, ಮಕ್ಕಳಿಗೆ ಉಚಿತ ವಿದ್ಯಾ ಕಲಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಈ ನಿಟ್ಟಿನಲ್ಲಿ ಇನ್ಫೋಸಿಸ್ ಕಂಪೆನಿ ಮತ್ತು ಕೆಎಸ್ಆರ್ಟಿಸಿ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ, ಇನ್ಫೊಸಿಸ್ ಮತ್ತು ಕೆಎಸ್ಆರ್ಟಿಸಿಯ ಡಿಜಿಟಲ್ ಲರ್ನಿಂಗ್ ವೆಬ್​​ಸೈಟ್ ಕೂಡ ಲೋಕಾರ್ಪಣೆ ಮಾಡಲಾಗಿದ್ದು, ನೌಕರರ ಕುಂದುಕೊರತೆ ನಿವಾರಣೆಗೆ ಆನ್​​ಲೈನ್ ವ್ಯವಸ್ಥೆಯನ್ನು ಉದ್ಘಾಟಿಸಲಾಯಿತು.

    ಇದನ್ನೂ ಓದಿ: ಸಾರಿಗೆ ನಿಗಮಗಳನ್ನು ಲಾಭಕ್ಕೆ ತರಲು ತಜ್ಞರ ಸಮಿತಿ: ಸಿಎಂ ಬೊಮ್ಮಾಯಿ ಘೋಷಣೆ

    ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, KSRTC ಅಂದ್ರೆ ಹಲವಾರು ಅರ್ಥ. ಬಸ್ ಅಂದ್ರೆ ಪ್ರಯಾಣ, ಜೀವನ, ಹಲವರಿಗೆ ಸ್ಥಳಾವಕಾಶ ಇರೋದು, ನಿರಂತರವಾಗಿ ಚಲನಶೀಲವಾಗಿರೋದು. ನಾವು ಎಷ್ಟೇ ಪ್ರಗತಿ ಸಾಧಿಸಿರಲಿ, ಬಸ್​​ಗಳು ಮಾತ್ರ ನಿರಂತರವಾಗಿವೆ. ಲಂಡನ್, ಪ್ಯಾರಿಸ್ ಎಲ್ಲಿಗ್ಹೋದ್ರೂ ಬಸ್ ಇವೆ. ಮನೆಯ ಬಾಗಿಲಿಗೆ, ಹತ್ತಿರಕ್ಕೆ ಸೇವೆ ನೀಡೋದು ಬಸ್​ಗಳೇ ಎಂದರು.

    ಎಲ್ಲಾ ಚಾಲಕರು ಒಂದು ರೀತಿಯಲ್ಲಿ ಬ್ರಹ್ಮರು. ನಮ್ಮ ಜೀವವನ್ನ ಅವರ ಕೈಯಲ್ಲಿ ಕೊಟ್ಟಿರ್ತೇವೆ. ನಮ್ಮನ್ನ ಸುರಕ್ಷಿತವಾಗಿ ಮುಟ್ಟಿಸ್ತಾರೆ ಅನ್ನೋ ನಂಬಿಕೆಯಿಂದ ಇರುತ್ತೇವೆ. ನಮ್ಮ ಚಾಲಕರಿಗೆ ಇಬ್ಬರು ಲೈಫ್ ಪಾರ್ಟ್ನರ್​ – ಒಂದು ಮನೆಯಲ್ಲಿರೋ ಲೈಫ್ ಪಾರ್ಟ್ನರ್, ಮತ್ತೊಬ್ಬರು ಬಸ್ಸಿನಲ್ಲಿರೋ ಕಂಡಕ್ಟರ್. ನಿಮ್ಮ ಜೀವನದಲ್ಲಿ ಹಲವು ಬಾರಿ ಕಂಡಕ್ಟರ್ ಸಾಥ್ ನೀಡಿರ್ತಾರೆ. ಅಂತವರನ್ನು ನೀವು ಮರೆಯೋಕೆ ಸಾಧ್ಯ ಇಲ್ಲ ಎಂದರು.

    ಸೂಪರ್​ ಮಾರ್ಕೆಟ್​ನಲ್ಲಿ 6 ಜನರಿಗೆ ಚಾಕು ಇರಿತ… ‘ಉಗ್ರವಾದಿ’ಗೆ ಅಂತ್ಯ ಹಾಡಿದ ಪೊಲೀಸರು

    ರೈಲಿನಲ್ಲಿ ಬನಿಯನ್​, ಅಂಡರ್​ವೇರ್​ನಲ್ಲಿ ಓಡಾಡಿದ ಶಾಸಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts