More

    ಭದ್ರತಾಪಡೆ ವಶಪಡಿಸಿಕೊಂಡ ಕಾರಿನಲ್ಲಿ ಇದ್ದದ್ದು 20 ಅಲ್ಲ 60 ಕೆ.ಜಿ. ಸ್ಫೋಟಕ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ 2019ರ ಫೆ.14ರಂದು ನಡೆದಿದ್ದ ದಾಳಿಯ ರೀತಿಯ ಮತ್ತೊಂದು ದಾಳಿಗೆ ಉಗ್ರರು ರೂಪಿಸಿದ್ದ ಸಂಚು ವಿಫಲವಾಗಿದೆ. ಬುಧವಾರ ರಾತ್ರಿ ಚೆಕ್​ಪೋಸ್ಟ್​ ಒಂದರಲ್ಲಿ ಕಾರನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿ 60 ಕೆ.ಜಿ. ಸುಧಾರಿತ ಸ್ಫೋಟಕ ಇತ್ತು ಎನ್ನಲಾಗಿದೆ.

    ಇದಕ್ಕೂ ಮುನ್ನ ಆ ಕಾರಿನ ಹಿಂಬದಿಯಲ್ಲಿ ಇರಿಸಿದ್ದ ಡ್ರಂನಲ್ಲಿ 20 ಕೆ.ಜಿ. ಸ್ಫೋಟಕ ಇತ್ತು ಎಂದು ಹೇಳಲಾಗಿತ್ತು. ಆದರೆ, ಬಾಂಬ್​ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲಿಸಿದ ಬಳಿಕ ಅದರಲ್ಲಿ ಇದ್ದದ್ದು 20 ಅಲ್ಲ, 60 ಕೆ.ಜಿ. ಸ್ಫೋಟಕ ಎಂಬುದು ಸ್ಪಷ್ಟವಾಯಿತು ಎನ್ನಲಾಗಿದೆ.

    ಇದನ್ನೂ ಓದಿ: ಪುಲ್ವಾಮಾ ದಾಳಿ ರೀತಿಯ ಉಗ್ರರ ದಾಳಿ ವಿಫಲಗೊಳಿಸಿದ ಭದ್ರತಾ ಪಡೆ

    ಇಷ್ಟು ಪ್ರಮಾಣದ ಸ್ಫೋಟಕವನ್ನು ನಿಷ್ಕ್ರಿಯಗೊಳಿಸುವುದು ಅಪಾಯಕಾರಿ ಎಂದು ಬಾಂಬ್​ ನಿಷ್ಕ್ರಿಯ ದಳದವರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಾರನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದ ಭದ್ರತಾಪಡೆ ಸಿಬ್ಬಂದಿ ಕಾರಿನ ಸಮೇತ ಅದನ್ನು ಸ್ಫೋಟಿಸಿದರು.

    ಇದು ನಿಜಕ್ಕೂ ಸಾಹಸಮಯ ಕಾರ್ಯಾಚರಣೆ. ಒಂದು ವೇಳೆ ಜನರು ಹೆಚ್ಚಾಗಿರುವ ಪ್ರದೇಶದಲ್ಲಿ ಈ ಬಾಂಬ್​ ಸ್ಫೋಟಿಸಿದ್ದರೆ ಅದೆಷ್ಟು ಜನ ಬೂದಿಯಾಗುತ್ತಿದ್ದರು ಎಂಬುದನ್ನು ಊಹಿಸಲೂ ಕಷ್ಟ ಎಂದು ಕಾಶ್ಮೀರ ಪೊಲೀಸ್​ ಅಧಿಕಾರಿ ರಾಯಿಸ್​ ಮೊಹಮ್ಮದ್​ ಬಟ್​ ಹೇಳಿದ್ದಾರೆ. ಜತೆಗೆ ಕಾರನ್ನು ಸ್ಫೋಟಿಸುತ್ತಿರುವ 9 ಸೆಕೆಂಡ್​ ವಿಡಿಯೋ ತುಣಕನ್ನೂ ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಹರಿಬಿಟ್ಟಿದ್ದಾರೆ.

    VIDEO: ಪುಲ್ವಾಮಾ ಮಾದರಿ ದಾಳಿಯ ಕಾರು ಸ್ಪೋಟಗೊಂಡಿದ್ದು ಹೀಗೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts